Celebrities Who Died Young: ಹೃದಯಾಘಾತಕ್ಕೆ ಬಲಿಯಾದ್ರು ಈ ಐವರು ಖ್ಯಾತ ನಟರು!
ನಟ ವಿಕಾಸ್ ಸೇಥಿ ಹಠಾತ್ 'ಕಸೌತಿ ಜಿಂದಗಿ ಕಿ' ಮತ್ತು 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ನಂತಹ ಶೋಗಳಿಂದ ಜನಪ್ರಿಯತೆಯನ್ನು ಗಳಿಸಿದ್ರು. ಇವರ ನಿಧನದ ಸುದ್ದಿ ಟಿವಿ ಉದ್ಯಮಕ್ಕೆ ದೊಡ್ಡ ಶಾಕ್ ಉಂಟು ಮಾಡಿದೆ. ಈ ಸ್ಟಾರ್ ನಟ ಅನಾರೋಗ್ಯದ ಜೊತೆಗೆ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದ್ದರು ಎನ್ನಲಾಗ್ತಿದೆ.
ಪ್ರಸಿದ್ಧ ಹಾಸ್ಯನಟ ರಾಜು ಶ್ರೀವಾಸ್ತವ್ ಅವರಿಗೆ ಸೆಪ್ಟೆಂಬರ್ 2022ರಲ್ಲಿ ಹಠಾತ್ ಹೃದಯಾಘಾತವಾಗಿತ್ತು. ಸುದೀರ್ಘ ಚಿಕಿತ್ಸೆಯ ನಂತರ ಈ ನಟ ನಿಧನ ಹೊಂದಿದರು. ಕಾಮಿಡಿ ಕಿಂಗ್ ಆಗಿದ್ದ ಇವರು 1963ರಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಜನಿಸಿದರು. 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್'ನಂತಹ ಶೋಗಳಲ್ಲಿ ತಮ್ಮ ಹಾಸ್ಯದ ಮೂಲಕ ಜನಪ್ರಿಯರಾಗಿದ್ದ ಈ ನಟ ರಾಜಕೀಯದಲ್ಲೂ ಸಕ್ರಿಯರಾಗಿದ್ದರು. 2014ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.
ಭಾರತೀಯ ಚಿತ್ರರಂಗದ ಪ್ರಸಿದ್ಧ ಗಾಯಕ ಕೆಕೆ 1968ರ ಆಗಸ್ಟ್ 23ರಂದು ಜನಿಸಿದರು. ಈ ಪ್ರತಿಭಾವಂತ ಗಾಯಕ 2022ರ ಮೇ 31ರಂದು 53ನೇ ವಯಸ್ಸಿನಲ್ಲಿ ನಿಧನರಾದರು. ಕೋಲ್ಕತ್ತಾದಲ್ಲಿ ನಡೆದ ಸಂಗೀತ ಸಮಾರಂಭದ ನಂತರ ಹಠಾತ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದ 'ತಡಪ್ ತಡಪ್ ಕೆ' ಮತ್ತು 'ವೋ ಲಮ್ಹೆ..' ಚಿತ್ರದ 'ಕ್ಯಾ ಮುಝೆ ಪ್ಯಾರ್ ಹೈ' ಮುಂತಾದ ಹಿಟ್ ಹಾಡುಗಳ ಮೂಲಕ ಅವರು ಬಾಲಿವುಡ್‌ನಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ರು. ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲಿ ಅನೇಕ ಜನಪ್ರಿಯ ಹಾಡುಗಳನ್ನು ಹಾಡಿದ್ದರು.
ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಅವರು 2021ರ ಅಕ್ಟೋಬರ್ 29ರಂದು ತಮ್ಮ 46ನೇ ವಯಸ್ಸಿನಲ್ಲಿ ನಿಧನರಾದರು. ಹಠಾತ್ ಹೃದಯಾಘಾತದಿಂದ ಪುನೀತ್ ನಿಧನರಾಗಿದ್ದು, ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಾಕಿಂಗ್ ಆಗಿತ್ತು. 1975ರ ಮಾರ್ಚ್ 17ರಂದು ಜನಿಸಿದ್ದ ಅಪ್ಪು ನಟರಷ್ಟೇ ಅಲ್ಲದೆ ಗಾಯಕರೂ ಆಗಿದ್ದರು. ತಮ್ಮ ಸಮಾಜಮುಖಿ ಕಾರ್ಯಗಳಿಂದ ಸದಾ ಜನರ ಮನದಲ್ಲಿ ಉಳಿದಿದ್ದಾರೆ. ಬಾಲ ಕಲಾವಿದರಾಗಿ ತಮ್ಮ ನಟನಾ ವೃತ್ತಿ ಪ್ರಾರಂಭಿಸಿದ ಅವರು ಕನ್ನಡದಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮನೆಯಲ್ಲಿ ವರ್ಕೌಟ್ ಮಾಡುವಾಗ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಪ್ರಯೋಜನವಾಗಲಿಲ್ಲ.
ಪ್ರಸಿದ್ಧ ನಟ ಸಿದ್ಧಾರ್ಥ್ ಶುಕ್ಲಾ ಅವರು ತಮ್ಮ 40ನೇ ವಯಸ್ಸಿನಲ್ಲಿ 2021ರ ಸೆಪ್ಟೆಂಬರ್ 2ರಂದು ಹಠಾತ್ ಹೃದಯಾಘಾತದಿಂದ ನಿಧನರಾದರು. ಸಿದ್ಧಾರ್ಥ್ ಶುಕ್ಲಾ 'ಬಾಲಿಕಾ ವಧು'ದಂತಹ ಟಿವಿ ಶೋ ಮೂಲಕ ಜನಪ್ರಿಯರಾಗಿದ್ದರು. ಈ ನಟ 'ಬಿಗ್ ಬಾಸ್ 13' ಮತ್ತು 'ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಕಿಲಾಡಿ 7' ರಿಯಾಲಿಟಿ ಶೋಗಳ ವಿಜೇತರಾಗಿದ್ದರು. ಆದರೆ ಸಣ್ಣ ವಯಸ್ಸಿನಲ್ಲೇ ನಿಧನರಾಗುವ ಮೂಲಕ ಲಕ್ಷಾಂತರ ಅಭಿಮಾನಿಗಳಿಗೆ ಶಾಕ್ ಉಂಟು ಮಾಡಿದ್ದರು.