ದಸರಾಗೂ ಮುನ್ನ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ!ವೇತನದಲ್ಲಿ 44 % ಹೆಚ್ಚಳ !ಈ ದಿನದಿಂದ ಅನ್ವಯ

Thu, 19 Sep 2024-9:46 am,

8ನೇ ವೇತನ ಆಯೋಗದ ಘೋಷಣೆಗಾಗಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಬಹಳ ದಿನಗಳಿಂದ ಕಾಯುತ್ತಿದ್ದಾರೆ.ಇದೀಗ ಅವರ ನಿರೀಕ್ಷೆ ಕೊನೆಯಾಗುವ ಲಕ್ಷಣ ಕಾಣುತ್ತಿದೆ.    

5, 6 ಮತ್ತು 7ನೇ ವೇತನ ಆಯೋಗಗಳು ಭಾರತದಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನ ರಚನೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ತಂದವು.ಇದೀಗ 8ನೇ ವೇತನ ಆಯೋಗದ ರಚನೆಯ ಸರದಿ.  

5ನೇ ವೇತನ ಆಯೋಗ ಏಪ್ರಿಲ್ 1994ರಲ್ಲಿ ರಚನೆಯಾದರೆ ಜಾರಿಯಾದರೆ, 6ನೇ ವೇತನ ಆಯೋಗ ಜುಲೈ 2006ರಲ್ಲಿ ರಚನೆಯಾಯಿತು. 7ನೇ ವೇತನ ಆಯೋಗ ರಚನೆಯಾದದ್ದು ಫೆಬ್ರವರಿ 2014ರಲ್ಲಿ.ಈ ಲೆಕ್ಕಾಚಾರದಲ್ಲಿ 8ನೇ ವೇತನ ಆಯೋಗವು 2024ರಲ್ಲಿ ರಚನೆಯಾಗಲಿದೆ ಎನ್ನಲಾಗಿದೆ.   

8ನೇ ವೇತನ ಆಯೋಗ ರಚನೆಯಾದರೆ ನೌಕರರಿಗೆ ಶೇ.20ರಿಂದ ಶೇ.35ರಷ್ಟು ವೇತನ ಹೆಚ್ಚಳವಾಗಬಹುದು ಎನ್ನಲಾಗಿದೆ.ಇದರಿಂದ ಲೆವೆಲ್ 1 ಉದ್ಯೋಗಿಗಳ ವೇತನವನ್ನು ಸುಮಾರು 34,560 ರೂ.ಗೆ ಮತ್ತು 18 ನೇ ಹಂತದ ಉದ್ಯೋಗಿಗಳ ವೇತನವನ್ನು 4.8 ಲಕ್ಷಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ.

ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಮತ್ತೊಂದು ಒಳ್ಳೆಯ ಸುದ್ದಿ ಇದೆ.8ನೇ ವೇತನ ಆಯೋಗವು ಜಾರಿಗೆ ಬಂದ ನಂತರ,ಪಿಂಚಣಿದಾರರ ಪಿಂಚಣಿ ಕೂಡಾ ಹೆಚ್ಚಾಗುತ್ತದೆ.   

ಫಿಟ್‌ಮೆಂಟ್ ಅಂಶದ ಮೂಲಕ ಕೇಂದ್ರ ನೌಕರರ ಕನಿಷ್ಠ ವೇತನ ರೂ.7000ದಿಂದ ರೂ.18 ಸಾವಿರಕ್ಕೆ ಏರಿಕೆಯಾಗಿದೆ.8ನೇ ವೇತನ ಆಯೋಗವು ಜಾರಿಗೆ ಬರಲಿದ್ದು, ಫಿಟ್‌ಮೆಂಟ್ ಅಂಶವನ್ನು 3.68 ರಿಂದ ಗುಣಿಸಿದರೆ,ಮಾಸಿಕ ವೇತನವು 18,000ದಿಂದ 26,000ಕ್ಕೆ ಏರಿಕೆಯಾಗುವುದು. ಅಂದರೆ ಸುಮಾರು 44%ದಷ್ಟು ಹೈಕ್ ಸಿಗಲಿದೆ.    

8 ನೇ ವೇತನ ಆಯೋಗವನ್ನು ಜಾರಿಗೆ ತರಲು ಸುಮಾರು 1 1/2-2 ವರ್ಷಗಳು ಬೇಕಾಗುವುದರಿಂದ,ಈಗ ಅಧಿಸೂಚನೆ ಜಾರಿಯಾದರೆ, 2026 ರೊಳಗೆ ಅದನ್ನು ಜಾರಿಗೆ ತರಬಹುದು.

ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ.  ವೇತನದ ಹೆಚ್ಚಳ ಅಥವಾ ಮುಂದಿನ ವೇತನ ಆಯೋಗದ ಯಾವುದೇ ಗ್ಯಾರಂಟಿ ಇದಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link