ಅವಧಿಗೂ ಮುನ್ನವೇ ವೇತನ ಹೆಚ್ಚಳ ಘೋಷಣೆ !ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸರ್ಕಾರ
ಸರ್ಕಾರಿ ನೌಕರರಿಗೆ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಳ ಮಾಡುವುದು ವಾಡಿಕೆ. ಬೆಲೆ ಏರಿಕೆಗೆ ಅನುಗುಣವಾಗಿ ಜನವರಿ ಮತ್ತು ಜುಲೈನಲ್ಲಿ ತುಟ್ಟಿಭತ್ಯೆ ಹೆಚ್ಚಳ ಘೋಷಿಸಲಾಗುತ್ತದೆ.
ಸಾಮಾನ್ಯವಾಗಿ ಜನವರಿ ತಿಂಗಳ ತುಟ್ಟಿಭತ್ಯೆ ಏರಿಕೆಯನ್ನು ಮಾರ್ಚ್‌ನಲ್ಲಿ ಘೋಷಿಸಲಾಗುತ್ತದೆ.ಜುಲೈಯಿಂದ ಜಾರಿಗೆ ಬರುವ ಹೆಚ್ಚಳವನ್ನು ಅಕ್ಟೋಬರ್‌ನಲ್ಲಿ ಘೋಷಿಸುತ್ತದೆ.ಆದರೆ, ಈ ವರ್ಷ ಸೆಪ್ಟೆಂಬರ್ ನಲ್ಲಿಯೇ ಸರ್ಕಾರ ಈ ಘೋಷಣೆ ಮಾಡಲಿದೆ ಎನ್ನಲಾಗಿದೆ.
ಸೆ.25ರಂದು ಸಚಿವ ಸಂಪುಟ ಸಭೆ ನಡೆಯಲಿದೆ.ಅದೇ ದಿನ ಕೇಂದ್ರ ಸರ್ಕಾರ ಡಿಎ ಹೆಚ್ಚಳ ಘೋಷಣೆ ಮಾಡಲಿದೆ ಎನ್ನುತ್ತವೆ ಮೂಲಗಳು.
ಸೆ.25ರಂದು ಡಿಎ ಹೆಚ್ಚಳ ಘೋಷಣೆಯಾದರೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಅಕ್ಟೋಬರ್ ತಿಂಗಳ ವೇತನ ಹಾಗೂ ಪಿಂಚಣಿಯಲ್ಲಿ ಹೆಚ್ಚಳವಾಗುವ ಮೊತ್ತ ಕೈ ಸೇರುತ್ತದೆ. ಇದರೊಂದಿಗೆ ಜುಲೈನಿಂದ ಸೆಪ್ಟೆಂಬರ್ ವರೆಗಿನ ಡಿಎ ಬಾಕಿಯೂ ಲಭ್ಯವಾಗಲಿದೆ.
ಡಿಎ ಯಲ್ಲಿ 3% ಹೆಚ್ಚಳವಾದರೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಒಟ್ಟು ತುಟ್ಟಿಭತ್ಯೆ 53% ರಷ್ಟು ಹೆಚ್ಚಿಸುತ್ತದೆ.ಒಂದು ವೇಳೆ 4 ಶೇ.ದಷ್ಟು ಹೆಚ್ಚಾದರೆ, ಡಿಎ ಮತ್ತು ಡಿ ಆರ್ ಶೇ.54ರಷ್ಟು ಹೆಚ್ಚಲಿದೆ.
ಒಟ್ಟಿನಲ್ಲಿ ಇನ್ನೆರಡು ದಿನಗಳಲ್ಲಿ ಕೇಂದ್ರ ಸರ್ಕಾರಿ ನೌಅಕರರಿಗೆ ವೇತನ ಹೆಚ್ಚಳದ ಸಿಹಿ ಸುದ್ದಿ ಸಿಗುವುದು ಖಚಿತ ಎನ್ನಲಾಗಿದೆ.