ನಾಮಿನೇಟ್ ಆಗದಿದ್ದರೂ ಚೈತ್ರಾ ಕುಂದಾಪುರ ಔಟ್! ಈ ಒಂದೇ ಕಾರಣಕ್ಕೆ ಎಲಿಮಿನೇಟ್ ಆಗೇ ಬಿಟ್ರಾ ?
ಬಿಗ್ ಬಾಸ್ ಕನ್ನಡ 11 ನಲ್ಲಿ ಚೈತ್ರಾ ಕುಂದಾಪುರ ಕುಸಿದು ಬಿದ್ದು ಆಸ್ಪತ್ರೆಗೆ ತೆರಳಿದ್ದರು. ಬಿಗ್ ಬಾಸ್ ತಂಡದ ವರ್ಷಿಣಿ ಅವರ ಜೊತೆ ತೆರಳಿದ್ದರು. ಚೈತ್ರಾ ಕುಂದಾಪುರ ಪ್ರಜ್ಞೆ ಬಂದಮೇಲೆ ವರ್ಷಿಣಿ ಇಲ್ಲದಿದ್ದಾಗ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಡಾಕ್ಟರ್, ನರ್ಸ್ ಹಾಗೂ ಮತ್ತೋರ್ವ ವ್ಯಕ್ತಿ ಮಾತನಾಡಿದ್ದರಂತೆ
ಆಸ್ಪತ್ರೆಯಿಂದ ಬಿಗ್ ಬಾಸ್ ಮನೆಗೆ ಬಂದ ಚೈತ್ರಾ ಕುಂದಾಪುರ ಸನ್ನೆಗಳ ಮೂಲಕ, ಕಥೆಗಳ ಮುಖಾಂತರ ಒಂದಷ್ಟು ಸ್ಪರ್ಧಿಗಳಿಗೆ ಚೈತ್ರಾ ಕುಂದಾಪುರ ಈ ಬಗ್ಗೆ ಹೇಳಿದ್ದರು. ಹೊರಗಿನ ಅಭಿಪ್ರಾಯ ಮನೆಯೊಳಗೆ ಚರ್ಚಿಸುವಂತಿಲ್ಲ ಎಂಬುದು ಬಿಗ್ಬಾಸ್ನ ಮೂಲ ನಿಯಮವಾಗಿದೆ.
ಬಿಗ್ ಬಾಸ್ ಮನೆಯ ಮೂಲ ನಿಯಮವನ್ನೇ ಚೈತ್ರಾ ಕುಂದಾಪುರ ಬ್ರೇಕ್ ಮಾಡಿದ್ದರು. ಬಿಗ್ ಬಾಸ್ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಸ್ಪರ್ಧಿಗಳು ಹೋದಾಗ ಅಲ್ಲಿನ ವೈದ್ಯರಾಗಲಿ, ನರ್ಸ್ ಆಗಲಿ ಶೋ ಬಗ್ಗೆ ಚರ್ಚೆ ಮಾಡುವಂತಿಲ್ಲ.
ಡಾಕ್ಟರ್, ನರ್ಸ್ ಚೈತ್ರ ಕುಂದಾಪುರ ಅವರಿಗೆ ಏನನ್ನೂ ಹೇಳಿರಲು ಸಾಧ್ಯವೇ ಇಲ್ಲ ಎಂದು ಕಿಚ್ಚ ಸುದೀಪ್ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಹೇಳಿದ್ದಾರೆ. ಡಾಕ್ಟರ್ ಮತ್ತು ನರ್ಸ್ ಹೇಳಿದರು ಅಂತ ಚೈತ್ರಾ ಕುಂದಾಪುರ ಸುಳ್ಳು ಕಥೆ ಕಟ್ಟಿದ್ದಾರೆ ಎಂಬ ಅನುಮಾನ ಮೂಡಿದೆ.
ಇದೇ ವಿಚಾರವಾಗಿ ಕಿಚ್ಚ ಸುದೀಪ್ ಚೈತ್ರಾ ಕುಂದಾಪುರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಿಚ್ಚ ಸುದೀಪ್ ಬೆಂಡೆತ್ತಿದ ಬಳಿಕ ಚೈತ್ರಾ ಕುಂದಾಪುರ ಶೋ ಕ್ವಿಟ್ ಮಾಡಲು ಮುಂದಾಗಿದ್ದರು. ಈ ವಾರ ನಾನು ಮನೆಗೆ ಹೋಗಬೇಕು ಎಂದು ನಿರ್ಧರಿಸಿದ್ದೇನೆ.
ಈ ಮನೆಯ ಒಳಗೆ ಬರುವುದು ನಮ್ಮ ನಿರ್ಧಾರ. ಆದರೆ ಹೊರಗೆ ಹೋಗೋದು ನಿರ್ಧಾರ ನಾವು ಮಾಡಲು ಆಗುವುದಿಲ್ಲ. ನನ್ನ ಋಣ ಮುಗಿದಿದೆ. ಬೇರೆ ಯಾರೋ ಎಲಿಮಿನೇಟ್ ಆಗುವ ಬದಲು ನಾನೇ ಹೋಗಬೇಕು ಎಂದು ಬ್ರೇಕ್ ಸಮಯದಲ್ಲಿ ಚೈತ್ರಾ ಕುಂದಾಫುರ ಕ್ಯಾಮರಾ ಮುಂದೆ ಬಂದು ಹೇಳಿದ್ದರು.
ಇದನ್ನು ಗಮನಿಸಿದ ಸುದೀಪ್, ಚೈತ್ರಾ ಅವರೇ ಕ್ಯಾಮರಾ ಬಳಿ ಏನೋ ಹೇಳಿದ್ರಿ. ಉಸಿರುಗಟ್ಟುತ್ತಿದೆ ಈ ವಾತಾವರಣದಲ್ಲಿ ಇರೋದು ತಪ್ಪಾಗುತ್ತೆ ಅಂದಿದ್ದೀರಾ. ಇದು ಬಹಳ ದೊಡ್ಡ ಮಾತು. ಇಲ್ಲಿ ಇಂಥ ವಾತಾವರಣ ನೀವೇ ಕ್ರಿಯೇಟ್ ಮಾಡಿದ್ದು.
ಉಸಿರಾಡೋದನ್ನೂ ನೀವೇ ಕಲಿಯಿರಿ ಎಂದಿದ್ದಾರೆ. ಹೀಗಾಗಿ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗದೇ ಮನೆಯಲ್ಲಿ ಉಳಿದಿದ್ದಾರೆ. ಬಹುತೇಕರು ಚೈತ್ರಾ ಇದೇ ವಾರ ಎಲಿಮಿನೇಟ್ಆಗುತ್ತಾರೆ ಎಂದು ಭಾವಿಸಿದ್ದರು.