Chandra Grahan On Holi: 100 ವರ್ಷಗಳ ನಂತರ ಹೋಳಿ ದಿನವೇ ಚಂದ್ರಗ್ರಹಣ, ಈ ರಾಶಿಯವರಿಗೆ ಕೋಟ್ಯಾಧಿಪತಿ ಯೋಗ

Mon, 25 Mar 2024-6:54 am,

ಪ್ರತಿ ವರ್ಷ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ  ರಾತ್ರಿ ಹೋಳಿ ದಹನವನ್ನು ನಡೆಸಲಾಗುತ್ತದೆ. ಇದರ ಮರುದಿನವೇ ಹೋಳಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಇಂದು (ಮಾರ್ಚ್ 25) ಸೋಮವಾರ್ಕದ ದಿನ ವರ್ಣರಂಜಿತ ಹೋಳಿ  ಆಚರಿಸಲಾಗುತ್ತಿದೆ. ಮಾತ್ರವಲ್ಲ, ಇಂದು ಈ ವರ್ಷದ ಮೊದಲ ಚಂದ್ರಗ್ರಹಣ ಕೂಡ ಸಂಭವಿಸಲಿದೆ. 

ಧಾರ್ಮಿಕ ನಂಬಿಕೆಗಳ ಪ್ರಕಾರ, ಬರೋಬ್ಬರಿ 100 ವರ್ಷಗಳ ಬಳಿಕ ಹೋಳಿ ದಿನದಂದೇ ಚಂದ್ರಗ್ರಹಣ ಸಂಭವಿಸುತ್ತಿದೆ. ಗ್ರಹಣದ ಸಮಯ ಬೆಳಿಗ್ಗೆ 10:24 ರಿಂದ ಮಧ್ಯಾಹ್ನ 03:01 ರವರೆಗೆ  ಇರಲಿದೆ. ಹಾಗಾಗಿ, ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ, ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರಗ್ರಹಣದ ಪ್ರಭಾವವು ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಐದು ರಾಶಿಯವರಿಗೆ ಅದೃಷ್ಟದ ಸಮಯ, ಈ ವೇಳೆ ಅವರ ಅದೃಷ್ಟದ ಬಾಗಿಲುಗಳು ತೆರೆಯಲಿದ್ದು, ಕೋಟ್ಯಾಧಿಪತಿಯಾಗುವ ಯೋಗವೂ ಇದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಹೋಳಿಯ ದಿನವೇ ಸಂಭವಿಸುತ್ತಿರುವ ಚಂದ್ರಗ್ರಹಣವು ಮೇಷ ರಾಶಿಯವರ ಜೀವನದಲ್ಲಿ ಶುಭ ಫಲಗಳನ್ನು ತರಲಿದ್ದು, ಇವರಿಗೆ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಯ ಅವಕಾಶಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ. 

100 ವರ್ಷಗಳ ನಂತರ ಹೋಳಿ ದಿನ ಸಂಭವಿಸುತ್ತಿರುವ ಚಂದ್ರಗ್ರಹಣವು ವೃಷಭ ರಾಶಿಯ ಜನರಿಗೆ ಅವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಲಿದೆ. ಸ್ವಂತ ಬಿಸಿನೆಸ್ ಮಾಡುವವರಿಗೆ ಇದು ಶುಭ ಸಮಯ. 

ಹೋಳಿ ದಿನ ಸಂಭವಿಸುತ್ತಿರುವ ವರ್ಷದ ಮೊದಲ ಚಂದ್ರಗ್ರಹಣವು ಸಿಂಹ ರಾಶಿಯ ಜನರಿಗೆ ದೀರ್ಘ ಸಮಯದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಉದೋಗ್ಯ ಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆ ದೊರೆಯಲಿದೆ. ಉತ್ತಮ ಆರೋಗ್ಯವನ್ನು ಅನುಭವಿಸುವಿರಿ. ಕೋಟ್ಯಾಧಿಪತಿ ಆಗುವ  ಯೋಗವೂ ಇದೆ.. 

ಚಂದ್ರಗ್ರಹಣವು ಧನು ರಾಶಿಯ ಜನರಿಗೆ ಪ್ರಗತಿಯ ಹಾದಿಯನ್ನು ತೆರೆಯಲಿದ್ದು ನೀವು ಉದ್ಯೋಗ-ವ್ಯವಹಾರದಲ್ಲಿ ಧನಾತ್ಮಕ ಫಲಗಳನ್ನು ಅನುಭವಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉತ್ತಮ ದಿನ.

100 ವರ್ಷಗಳ ನಂತರ ಹೋಳಿ ದಿನ ಸಂಭವಿಸುತ್ತಿರುವ ಚಂದ್ರಗ್ರಹಣವು  ಮಕರ ರಾಶಿಯವರಿಗೆ ಬಂಪರ್ ಧನ ಲಾಭವನ್ನು ಕರುಣಿಸಲಿದೆ. ಈ ಸಮಯದಲ್ಲಿ ನಿಮ್ಮ ಬಹುಕಾಲದ ಕನಸು ನನಸಾಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link