ಮಾರ್ಚ್ 25ರಿಂದ ಈ ರಾಶಿಗೆ ಒಳ್ಳೆಯ ಫಲ: ಚಂದ್ರಗ್ರಹಣದಿಂದ ಸಂಪತ್ತಿನ ಮಳೆ, 2024ರ ಅಂತ್ಯದವರೆಗೆ ಎಲ್ಲೆಲ್ಲೂ ಯಶಸ್ಸೇ..!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವರ್ಷದ ಮೊದಲ ಚಂದ್ರಗ್ರಹಣ ಈ ಬಾರಿ ಮಾರ್ಚ್ 25 ರಂದು ಸಂಭವಿಸಲಿದೆ. ಕೆಲವು ರಾಶಿಗಳಿಗೆ ಈ ವರ್ಷವು 2024 ರ ಅಂತ್ಯದವರೆಗೆ ಪ್ರಯೋಜನಕಾರಿಯಾಗಲಿದೆ. ಅಂತಹ ಅದೃಷ್ಟಶಾಲಿ ರಾಶಿಗಳು ಯಾವುವು ಎಂದು ತಿಳಿಯೋಣ,
ಮೇಷ ರಾಶಿ: ಈ ರಾಶಿಗಳ ಜನರು ವೃತ್ತಿಯಲ್ಲಿ ಯಶಸ್ಸು ಕಾಣುವರು. ಚಂದ್ರಗ್ರಹಣದ ಶುಭಫಲದಿಂದ ಭರಪೂರ ಅವಕಾಶಗಳು ಇವರದ್ದಾಗಲಿದೆ. ಜನರಿಂದ ಮೆಚ್ಚುಗೆಯನ್ನು ಪಡೆಯಬಹುದು. 2024ರ ಅಂತ್ಯದವರೆಗೆ ಯಶಸ್ಸು ನಿಮ್ಮ ಬೆನ್ನಿಗೆ ಇರಲಿದೆ.
ಕಟಕ ರಾಶಿ: ಚಂದ್ರಗ್ರಹಣದ ಶುಭಫಲದಿಂದ ಕರ್ಕಾಟಕ ರಾಶಿಯ ಜನರ ವ್ಯಕ್ತಿತ್ವ, ನಡವಳಿಕೆಯಲ್ಲಿ ಬದಲಾವಣೆಯಾಗಲಿದೆ. ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಲಿದೆ. ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಹೆಚ್ಚಲಿದೆ.
ಕನ್ಯಾ ರಾಶಿ: ಜವಾಬ್ದಾರಿಗಳು ಮತ್ತು ಉದ್ದೇಶಗಳ ಮೇಲೆ ಏಕಾಗ್ರತೆಯನ್ನು ಕಾಪಾಡಿಕೊಳ್ಳುವಿರಿ. ಚಂದ್ರಗ್ರಹಣದಿಂದ 2024ರ ಅಂತ್ಯದವರೆಗೆ ಎಲ್ಲೆಲ್ಲೂ ಯಶಸ್ಸು ಇವರದ್ದಾಗಿತ್ತದೆ. ಈ ಅವಧಿಯ ಸಂಪೂರ್ಣ ಲಾಭವನ್ನು ಪಡೆದುಕೊಂಡರೆ ಒಳಿತು. ಹೂಡಿಕೆಗೆ ಇದು ಬೆಸ್ಟ್ ಸಮಯ.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ.)