ಫೋನ್ ಸೆಟ್ಟಿಂಗ್ ನಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಸಾಕು ಇಂಟರ್ನೆಟ್ ಸ್ಪೀಡ್ ಡಬಲ್ ಆಗುತ್ತದೆ
ಕ್ಯಾಚೆ ಫುಲ್ ಆದರೆ ಆಂಡ್ರಾಯ್ಡ್ ಫೋನ್ ಸ್ಪೀಡ್ ಕಡಿಮೆಯಾಗುತ್ತದೆ. ಇದು ಇಂಟರ್ನೆಟ್ ವೇಗದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕಾಲಕಾಲಕ್ಕೆ ಕ್ಯಾಚೆ ಕ್ಲಿಯರ್ ಮಾಡಿಕೊಳ್ಳಿ. ಇದು ನಿಮ್ಮ ಮೊಬೈಲ್‌ನ ಇಂಟರ್ನೆಟ್ ವೇಗವನ್ನು ಹೆಚ್ಚಿಸುತ್ತದೆ.
ಫೋನ್ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ನೆಟ್‌ವರ್ಕ್ ಸೆಟ್ಟಿಂಗ್ ಆಯ್ಕೆಯಲ್ಲಿ ಆದ್ಯತೆಯ ನೆಟ್‌ವರ್ಕ್ ಪ್ರಕಾರದಲ್ಲಿ 4G ಅಥವಾ LTE ಇದೆಯೇ ಎಂದು ನೋಡಿ. ಇಲ್ಲದಿದ್ದರೆ, ಅಲ್ಲಿ ಲಭ್ಯವಿರುವ ಆಯ್ಕೆಯನ್ನು ಆರಿಸಿ.
ಫೋನ್ ಅನ್ನು ರೀಸ್ಟಾರ್ಟ್ ಮಾಡಿಕೊಳ್ಳಿ. ಹೀಗೆ ಮಾಡಿದಾಗ ಅದು ಮತ್ತೆ ಮೊಬೈಲ್ ನೆಟ್‌ವರ್ಕ್ ಅನ್ನು ಹುಡುಕುತ್ತದೆ. ಅದು ಡೇಟಾ ವೇಗವನ್ನು ಹೆಚ್ಚಿಸುತ್ತದೆ.
ಅನೇಕ ಬಾರಿ ಬಳಕೆದಾರರು ಆಕಸ್ಮಿಕವಾಗಿ ಸ್ಮಾರ್ಟ್‌ಫೋನ್‌ನಲ್ಲಿ ಆಟೋ ಡೌನ್‌ಲೋಡ್ ವೈಶಿಷ್ಟ್ಯವನ್ನು ಆನ್ ಆಗಿರುತ್ತದೆ. ಇದರಿಂದಾಗಿ ಅಪ್ಲಿಕೇಶನ್‌ಗಳು ಅಪ್ಡೇಟ್ ಆಗುತ್ತಲೇ ಇರುತ್ತವೆ. ಹೀಗಾದಾಗ ಡೇಟಾ ತ್ವರಿತವಾಗಿ ಕೊನೆಗೊಳ್ಳುತ್ತದೆ. ಇಂಟರ್ನೆಟ್ ನಿಧಾನವಾಗುತ್ತದೆ. ಒಂದು ವೇಳೆ ನಿಮ್ಮ ಫೋನ್ ನಲ್ಲಿ ಆಟೋ ಡೌನ್‌ಲೋಡ್ ಆಕ್ಟಿವ್ ಆಗಿದ್ದರೆ ಅದನ್ನು ನಿಷ್ಕ್ರಿಯಗೊಳಿಸಿ.
ನಿಮ್ಮ ಫೋನ್‌ನಲ್ಲಿ ಏರ್‌ಪ್ಲೇನ್ ಮೋಡ್ ಅನ್ನು ಅನೆಬಲ್ ಮತ್ತು ಡಿಸೇಬಲ್ ಮಾಡಿ. ಹೀಗೆ ಮಾಡುವುದರಿಂದ ಮತ್ತೆ ಮೊಬೈಲ್ ನೆಟ್ ವರ್ಕ್ ಸರ್ಚ್ ಆಗಲಿದ್ದು, ಇಂಟರ್ ನೆಟ್ ವೇಗ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.
ಬ್ಯಾಕ್ ಗ್ರೌಂಡ್ ನಲ್ಲಿರುವ ನಾವು ಬಳಸದೆ ಇರುವ ಬಹಳಷ್ಟು ಅಪ್ಲಿಕೇಶನ್‌ಗಳಿರುತ್ತವೆ. ಅವು ಫೋನ್ ಡೇಟಾವನ್ನು ವ್ಯರ್ಥ ಮಾಡುತ್ತಿರುತ್ತವೆ. ಸೆಟ್ಟಿಂಗ್‌ಗಳಲ್ಲಿ ಅವುಗಳನ್ನು ಆಫ್ ಮಾಡಿ. ಬ್ರೌಸರ್‌ನಲ್ಲಿ ಡೇಟಾ ಸೇವ್ ಮೋಡ್ ಅನ್ನು ಆನ್ ಮಾಡಿಕೊಳ್ಳಿ