Changes From May 1: ಮೇ 1 ರಿಂದ ಬದಲಾಗುತ್ತಿವೆ ಈ ಐದು ನಿಯಮಗಳು, ನೀವೂ ಕೂಡ ಇಂದೇ ತಿಳಿದುಕೊಳ್ಳಿ

Thu, 29 Apr 2021-2:34 pm,

1. Axis Bank ಈ ಬದಲಾವಣೆ ಮಾಡುತ್ತಿದೆ - ಮೇ 1 ರಿಂದ ಆಕ್ಸಿಸ್ ಬ್ಯಾಂಕ್ ಉಳಿತಾಯ ಖಾತೆಯಲ್ಲಿನ ಮಿನಿಮಮ್ ಬ್ಯಾಲೆನ್ಸ್ ಕುರಿತಾದ ನಿಯಮವನ್ನು ಬದಲಾಯಿಸುತ್ತಿದೆ.  ಮೇ 1 ರಿಂದ ಪ್ರಿಲಿಮಿಟ್ ಬಳಿಕ ಹಣ ಹಿಂಪಡೆಯಲು ಮೊದಲಿಗಿಂತ ಡಬಲ್ ಜಾರ್ಜ್ ನೀಡಬೇಕಾಗಲಿದೆ. ಇದಲ್ಲದೆ ಉಳಿದ ಸೇವೆಗಳಿಗೂ ಕೂಡ ಬ್ಯಾಂಕ್ ಮೊದಲಿಗಿಂತ ಹೆಚ್ಚು ಶುಲ್ಕ ಪಡೆಯಲಿದೆ. ಮೇ ಒಂದರಿಂದ ಆಕ್ಸಸ್ ಬ್ಯಾಂಕ್ ತನ್ನ ಉಳಿತಾಯ ಖಾತೆಗಳಲ್ಲಿನ ಕನಿಷ್ಠ ಮಿನಿಮಮ್ ಬ್ಯಾಲೆನ್ಸ್ ಮೊತ್ತವನ್ನು  ಹೆಚ್ಚಿಸಿದೆ. ಅಂದರೆ ಇನ್ಮುಂದೆ ನೀವು ಆಕ್ಸಸ್ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ 10 ಸಾವಿರ ಬದಲು 15 ಸಾವಿರ ಮಿನಿಮಮ್ ಬ್ಯಾಲೆನ್ಸ್ ಕಾಯಬೇಕು.

2. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ - ಕೊರೊನಾ ವೈರಸ್ ನ ಹೆಚ್ಚಾಗುತ್ತಿರುವ ಪ್ರಕೋಪದ ನಡುವೆಯೇ ಮೇ 1 ರಿಂದ ಲಸಿಕಾಕರಣ ಅಭಿಯಾನದ ಮೂರನೇ ಹಂತ ಆರಂಭವಾಗಲಿದೆ. ಈ ಮೂರನೇ ಹಂತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೂಡ ವ್ಯಾಕ್ಸಿನ್ ಹಾಕಲಾಗುವುದು. ಮೂರನೇ ಹಂತದ ಲಸಿಕಾಕರಣ ಕಾರ್ಯಕ್ರಮದಲ್ಲಿ ಸರ್ಕಾರ ಹಲವು ನಿಯಮಗಳನ್ನು ಬದಲಾಯಿಸಿದೆ ಹಾಗೂ ಕೆಲ ಹೊಸ ನಿಯಮಗಳನ್ನು ಕೂಡ ಜಾರಿಗೆ ತರುತ್ತಿದೆ. ಈ ಬಾರಿ ಲಸಿಕೆ ಪಡೆಯಲು ಸರ್ಕಾರ ಆನ್ಲೈನ್ ನೋಂದಣಿ ಕಡ್ಡಾಯಗೊಳಿಸಿದೆ.

3. ಪಾಲಸಿಯ ಕವರ್ ಮೊತ್ತವನ್ನು ದುಪ್ಪಟ್ಟು ಮಾಡಿದ IRDAI - ಕೊರೊನಾ ಎರಡನೇ ಅಲೆಯ ಮಧ್ಯೆ ವಿಮಾ ನಿಯಂತ್ರಕ ಪ್ರಾಧಿಕಾರ (IRDAI) ಆರೋಗ್ಯ ಸಂಜೀವನಿ ಪಾಲಸಿಯ ಮೊತ್ತವನ್ನು ದ್ವಿಗುಣಗೊಳಿಸಿ ಆದೇಶ ಹೊರಡಿಸಿದೆ. ಮೇ 1 ರಿಂದ ವಿಮಾ ಕಂಪನಿಗಳು 10 ಲಕ್ಷ ರೂ. ಕವರೇಜ್ ಹೊಂದಿರುವ ಪಾಲಸಿಗಳನ್ನು ಪ್ರಸ್ತುತಪಡಿಸಬೇಕಾಗಿದೆ. ಇದಲ್ಲದೆ ಕಳೆದ ಏಪ್ರಿಲ್ 1 ರಿಂದ ಆರಂಭಗೊಂಡಿರುವ ಆರೋಗ್ಯ ಸಂಜೀವನಿ ಸ್ಟ್ಯಾಂಡರ್ಡ್ ಪಾಲಸಿ ಈ ಮೊದಲಿನ ಗರಿಷ್ಟ ಕವರೇಜ್ 5 ಲಕ್ಷ ರೂ.ಗಳಾಗಿತ್ತು.

4. ಮೇ 5 ರಿಂದ 12 ದಿನಗಳ ಕಾಲ ಬ್ಯಾಂಕ್ ಬಂದ ಇರಲಿವೆ - ಮೇ ತಿಂಗಳಿನಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕುಗಳಿಗೆ ರೆಜೆ (Bank Holidays In May 2021) ಇರಲಿದೆ. ಆದರೆ ಇವುಗಳಲ್ಲಿ ಹಲವು ದಿನಗಳು ದೇಶಾದ್ಯಂತ ಎಲ್ಲ ಕಡೆಗೆ ಬ್ಯಾಂಕ್ ರಜೆ ಇರುವುದಿಲ್ಲ. ಆರ್.ಬಿ. ಐ ವೆಬ್ ಸೈಟ್ ನಲ್ಲಿ ನೀಡಲಾಗಿರುವ ಪಟ್ಟಿಯ ಪ್ರಕಾರ ಕೆಲ ರಜೆಗಳು ಸ್ಥಳೀಯ ಮಟ್ಟದಲ್ಲಿ ಮಾತ್ರ ಪ್ರಭಾವದಲ್ಲಿರಲಿವೆ.

5. LPG Cylinder Price ಬದಲಾವಣೆ - ಸರ್ಕಾರಿ ತೈಲೋತ್ಪಾದಕ ಕಂಪನಿಗಳು ಪ್ರತಿ ತಿಂಗಳು LPG ಸಿಲಿಂಡರ್ ದರವನ್ನು ಪರಿಶೀಲಿಸುತ್ತವೆ. ಮೇ 1 ರಂದು ಕೂಡ ಹೊಸ ದರಗಳು ಅನ್ವಯಿಸಲಿವೆ. ಬೆಲೆಯಲ್ಲಿ ಏರಿಕೆಯಾದರು ಆಗಲಿದೆ ಅಥವಾ ಇಳಿಕೆ. ಒಟ್ಟಾರೆ ಮೇ 1 ರಿಂದ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗಲಿದೆ .  

ZEENEWS TRENDING STORIES

By continuing to use the site, you agree to the use of cookies. You can find out more by Tapping this link