ರಾತ್ರಿ ಮಾಡಿಟ್ಟ ಚಪಾತಿಯನ್ನು ಬೆಳಗ್ಗೆ ಇದರ ಜೊತೆ ತಿಂದರೆ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್ !
ಸಕ್ಕರೆಯನ್ನು ನಿಯಂತ್ರಿಸಲು, ಹಿಂದಿನ ದಿನ ತಯಾರಿಸಿಟ್ಟ ಚಪಾತಿ ಸೇವಿಸಬೇಕು. ಇದು ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ.
ರಾತ್ರಿ ಮಾಡಿಟ್ಟ ಚಪಾತಿಯನ್ನು ಹಾಲಿನೊಂದಿಗೆ ಬೆರೆಸಿ ತಿನ್ನುವುದರಿಂದ ಹೊಟ್ಟೆ ತಂಪಾಗುತ್ತದೆ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಎಂದು ಹೇಳಲಾಗುತ್ತದೆ.
ರಾತ್ರಿ ಮಾಡಿಟ್ಟ ಚಪಾತಿಯನ್ನು ತಣ್ಣನೆಯ ಹಾಲಿನೊಂದಿಗೆ ಬೆಳಿಗ್ಗೆ ಸೇವಿಸುವುದರಿಂದ ರಕ್ತದೊತ್ತಡದ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.
ಮಧುಮೇಹದಿಂದ ಬಳಲುತ್ತಿರುವ ರೋಗಿಗಳು ರಾತ್ರಿ ಮಾಡಿಟ್ಟ ಚಪಾತಿಯನ್ನು ತಣ್ಣನೆಯ ಹಾಲಿನಲ್ಲಿ 10-15 ನಿಮಿಷಗಳ ಕಾಲ ನೆನೆಸಿಟ್ಟು ನಂತರ ಅದನ್ನು ದಿನದ ಯಾವುದೇ ಸಮಯದಲ್ಲಿ ಸೇವಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.