ಮೀನ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಚತುರ್ಗ್ರಹಿ ಯೋಗ, 3 ರಾಶಿಗಳ ಜನರಿಗೆ ಭಾರಿ ಧನಾಗಮನ ಭಾಗ್ಯ ಪ್ರಾಪ್ತಿ!
ವೃಷಭ ರಾಶಿ: ವೃಷಭ ರಾಶಿಯ ಜಾತಕದವರ ಪಾಲಿಗೆ ಚತುರ್ಗ್ರಹಿ ಯೋಗ ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದನ್ನು ಆದಾಯ ಮತ್ತು ಲಾಭದ ಸ್ಥಾನ ಎಂದು ಜೋತಿಷ್ಯ ಶಾಸ್ತ್ರದಲ್ಲಿ ಕರೆಯಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನೀವು ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳವನ್ನು ನೋಡಬಹುದು. ಇದಲ್ಲದೆ ಹಳೆ ಹೂಡಿಕೆಯಿಂದಲೂ ಕೂಡ ನಿಮಗೆ ಲಾಭ ಸಿಗಲಿದೆ. ಆ ಅವಧಿಯಲ್ಲಿ ನೀವು ಪಾರ್ಟ್ನರಶಿಪ್ ನಲ್ಲಿ ಹೊಸ ವ್ಯವಸಾಯವನ್ನು ಕೂಡ ಪ್ರಾರಂಭಿಸಬಹುದು. ಷೇರು ಮಾರುಕಟ್ಟೆ, ಲಾಟರಿಗಳಲ್ಲಿ ನೀವು ನಿಮ್ಮ ಭಾಗ್ಯವನ್ನು ಪರಿಶೀಲಿಸಬಹುದು, ಉತ್ತಮ ಧನಲಾಭದ ಸಾಧ್ಯತೆಗಳಿವೆ.
ಮಿಥುನ ರಾಶಿ: ಮಿಥುನ ಜಾತಕದವರಿಗೆ ಚತುರ್ಗ್ರಹಿ ಯೋಗ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ಕರ್ಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಒದಗಿ ಬರುವ ಸಾಧ್ಯತೆ ಇದೆ. ಅಲ್ಲದೆ ವ್ಯಾಪಾರಿಗಳಿಗೆ ಉತ್ತಮ ಧನಲಾಭ ಪ್ರಾಪ್ತಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ವೃತ್ತಿಜೀವನದಲ್ಲಿ ನಿಮ್ಮ ಶತ್ರುಗಳು ನಿಮ್ಮ ಮೇಲೆ ಹಿಡಿತ ಸಾಧಿಸಲು ವಿಫಲರಾಗಲಿದ್ದಾರೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ತಂದೆಯ ಸಂಪೂರ್ಣ ಬೆಂಬಲ ಸಿಗಲಿದೆ. ಇನ್ನೊಂದೆಡೆ ನಿಮಗೆ ಯಾವುದೇ ಒಂದು ಕಾರ್ಯದಲ್ಲಿ ಪ್ರಶಸ್ತಿ ಲಭಿಸುವ ಸಾಧ್ಯತೆ ಇದೆ. ರಾಜಕೀಯದೊಂದಿಗೆ ಸಂಬಂಧ ಹೊಂದಿದ ಜನರಿಗೆ ಸ್ಥಾನಮಾನ ಪ್ರಾಪ್ತಿಯಾಗುವ ಸಾಧ್ಯತೆ ಕೂಡ ಇದೆ.
ಕುಂಭ ರಾಶಿ: ಚತುರ್ಗ್ರಹಿ ಯೋಗ ರಚನೆ ಕುಂಭ ರಾಶಿಯ ಜಾತಕದವರಿಗೆ ಶುಭ ಫಲದಾಯಿ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ದ್ವಿತೀಯ ಭಾವದಲ್ಲಿ ರೂಪಗೊಳ್ಳುತ್ತಿದೆ ಮತ್ತು ಜೋತಿಷ್ಯ ಶಾಸ್ತ್ರದ ಪ್ರಕಾರ ಇದನ್ನು ಧನ ಹಾಗೂ ವಾಣಿಯ ಸ್ಥಾನ ಎಂದು ಭಾವಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನ ಪ್ರಾಪ್ತಿಯಾಗಲಿದೆ. ಜೊತೆಗೆ ಈ ಸಮಯದಲ್ಲಿ ನೀವು ಆಸ್ತಿ-ಪಾಸ್ತಿಗಳಲ್ಲಿ ಹೂಡಿಕೆಯನ್ನು ಮಾಡುವ ಸಾಧ್ಯತೆ ಇದೆ. ಜೊತೆಗೆ ವ್ಯಾಪಾರದಲ್ಲಿ ಹೂಡಿಕೆ ಮಾಡಲೂ ಕೂಡ ಈ ಸಮಯ ಅತ್ಯಂತ ಅನುಕೂಲಕರವಾಗಿದೆ. ಪ್ರತ್ಯೇಕ ಕಾರ್ಯಗಳಲ್ಲಿ ನಿಮಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ಮುಂದಿನ ವ್ಯಕ್ತಿಯ ಮೇಲೆ ನಿಮ್ಮ ವಾಣಿ ಅಂದರೆ ಮಾತಿನಿಂದ ಪ್ರಭಾವ ಬೀರುವಿರಿ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)