ಕೇವಲ 55 ಸಾವಿರ ರೂ.ಗಳಿಗೆ ಮನೆಗೆ ಕೊಂಡೊಯ್ಯಿರಿ ಈ ಎಲೆಕ್ಟ್ರಿಕ್ ಸ್ಕೂಟರ್!

Mon, 24 Jul 2023-3:48 pm,

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಇದೀಗ ಗ್ರಾಹಕರು ಕೂಡ ಈ ತಂತ್ರಜ್ಞಾನವನ್ನು ನಂಬುಟ್ಟಿದಾರೆ ಎಂಬುದನ್ನು ಇದು ತೋರಿಸುತ್ತದೆ. ಆದಾಗ್ಯೂ, ಉತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಇನ್ನೂ 1 ರಿಂದ 1.5 ಲಕ್ಷ ರೂ.ಗಳಾಗಿದೆ.  ಆದಾಗ್ಯೂ, ಇಂದು ನಾವು ನಿಮಗೆ ಕೈಗೆಟುಕುವ ಮತ್ತು ಐಷಾರಾಮಿ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾಹಿತಿಯನ್ನು ಕೊಡುತ್ತಿದ್ದೇವೆ. ಇದರ ವಿಶೇಷತೆ ಎಂದರೆ. ರೆ ಇದು ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಇದನ್ನು ಬಜಾಜ್ ಆಟೋದ ಅಂಗಸಂಸ್ಥೆಯಾದ ಚೇತಕ್ ಟೆಕ್ನಾಲಜಿ ಸಿದ್ಧಪಡಿಸಿದೆ.  

ಈ ಎಲೆಕ್ಟ್ರಿಕ್ ಸ್ಕೂಟರ್‌ನ ಹೆಸರು ಯುಲು ವೈನ್. ಇದರ ಬೆಲೆ 55,555 ರೂ. ಕಂಪನಿಯು ಇದರ ಮೇಲೆ 1 ವರ್ಷದ ವಾರಂಟಿಯನ್ನು ಕೂಡ ನೀಡಲಾಗುತ್ತಿದೆ. ಇದು ಒನ್ ಸೀಟರ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಇದನ್ನು ಓಡಿಸಲು ನಿಮಗೆ ಪರವಾನಗಿ ಕೂಡ ಅಗತ್ಯವಿಲ್ಲ.  

ಅದನ್ನು ಬಳಸಲು ನಿಮಗೆ ಕೀ ಅಗತ್ಯವಿಲ್ಲ. ಯುಲು ಆಪ್ ಮೂಲಕ ನೀವು ನಿಮ್ಮ ಫೋನಿನಲ್ಲಿಯೇ ಇದರ ಕೀ ಸಿದ್ಧಪಡಿಸಬಹುದು. ಇದು ಲೋಕೇಶನ್ ಟ್ರ್ಯಾಕಿಂಗ್ ವೈಶಿಷ್ಟ್ಯವನ್ನು ಹೊಂದಿದೆ. ಈ ಸ್ಕೂಟರ್‌ನ ಇರುವ ಸ್ಥಳವನ್ನು ಗರಿಷ್ಠ 5 ಜನರು ನೋಡಬಹುದು.  

ವೈನ್‌ನ ಸೀಟ್ ಎತ್ತರವು 740 ಎಂಎಂ ಮತ್ತು ವೀಲ್‌ಬೇಸ್ ಕೇವಲ 1,200 ಎಂಎಂ, ಹಾಗೂ ಲೋಡ್ ಸಾಮರ್ಥ್ಯವು 100 ಕೆ.ಜಿ.ಗಳಷ್ಟಿದೆ. ವೈನ್ ಪೂರ್ಣ ಚಾರ್ಜ್‌ನಲ್ಲಿ 68 ಕಿಮೀ (IDC) ಡ್ರೈವಿಂಗ್ ರೆಂಜ್ ಹೊಂದಿದೆ. ಸ್ಕೂಟರ್‌ನ ಗರಿಷ್ಠ ವೇಗವು 25 ಕಿಮೀ ವರೆಗೆ ಇರುತ್ತದೆ.  

ವೈನ್ ಅನ್ನು ರಿಯರ್ ವ್ಯೂ ಮಿರರ್‌ಗಳ ಸೆಟ್, ಸೆಂಟರ್ ಸ್ಟ್ಯಾಂಡ್, ರಿಯರ್ ಕ್ಯಾರಿಯರ್, ಮೊಬೈಲ್ ಹೋಲ್ಡರ್ ಮತ್ತು ಹೆಲ್ಮೆಟ್‌ನಂತಹ ಹಲವಾರು ಬಿಡಿಭಾಗಗಳೊಂದಿಗೆ ಖರೀದಿಸಬಹುದು. ಇದು ಕೆಂಪು ಮತ್ತು ಬಿಳಿ ಎರಡು ಬಣ್ಣದ ಆಯ್ಕೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link