IPL 2024: ಧೋನಿ ಬಳಿಕ CSK ಮುಂದಿನ ನಾಯಕ ಇವರೇ: ಮಾಹಿ ಪೋಸ್ಟರ್ ಬೆನ್ನಲ್ಲೇ ಹೊರಬಿತ್ತು ಸೀಕ್ರೆಟ್!

Mon, 04 Mar 2024-8:18 pm,

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌’ಗಳ ಮೂಲಕ ಸಂಚಲನ ಮೂಡಿಸಿದ್ದಾರೆ. ಧೋನಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿಲ್ಲ. ಆದರೆ ಯಾವುದೇ ಘೋಷಣೆಯನ್ನು ಮಾಡಬೇಕಾದಾಗ, ಫೇಸ್‌ಬುಕ್, ಎಕ್ಸ್ ಅಥವಾ ಇನ್‌ಸ್ಟಾಗ್ರಾಮ್‌ ಸಹಾಯವನ್ನು ತೆಗೆದುಕೊಳ್ಳುತ್ತಾರೆ.

ಮುಂಬರುವ ಐಪಿಎಲ್ ಸೀಸನ್’ನಲ್ಲಿ ಧೋನಿ ತಾವು ಹೊಸ ಪಾತ್ರ ನಿರ್ವಹಿಸುವ ಬಗ್ಗೆ ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮಹಿ ಅವರ ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ, ಮುಂಬರುವ ಐಪಿಎಲ್ ಸೀಸನ್‌’ನಲ್ಲಿ ತಂಡದ ನಾಯಕತ್ವವನ್ನು ತೊರೆಯಬಹುದೇ ಎಂಬ ಚರ್ಚೆ ಎಲ್ಲೆಡೆ ನಡೆದಿದೆ. ಇನ್ನೊಂದೆಡೆ ಧೋನಿ ಋತುವಿನ ಮಧ್ಯದಲ್ಲಿ ನಿವೃತ್ತಿ ತೆಗೆದುಕೊಂಡು ಮೆಂಟರ್ ಪಾತ್ರಕ್ಕೆ ಬರಬಹುದೇನೋ ಎಂದು ಕೆಲವರು ಹೇಳುತ್ತಿದ್ದಾರೆ.

ಧೋನಿ ಪೋಸ್ಟ್ ಪ್ರಕಟವಾದ ಬೆನ್ನಲ್ಲೇ, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೂಡ ಈ ವಿಷಯದ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿದೆ. “ಐಪಿಎಲ್‌’ನ ಹೊಸ ಸೀಸನ್‌’ಗೆ ಪ್ರವೇಶಿಸಲು ಮತ್ತು ಹೊಸ ಪಾತ್ರವನ್ನು ನಿರ್ವಹಿಸಲು ನಾನು ಉತ್ಸುಕನಾಗಿದ್ದೇನೆ” ಎಂದು ಮಹಿ ಬರೆದಿದ್ದಾರೆ

ಈಗ ಪ್ರಶ್ನೆ ಏನೆಂದರೆ ಧೋನಿ ನಾಯಕತ್ವವನ್ನು ತೊರೆದರೆ ಅಥವಾ ಮಧ್ಯ ಋತುವಿನಲ್ಲಿ ನಿವೃತ್ತಿ ಪಡೆದರೆ, ಅವರ ಉತ್ತರಾಧಿಕಾರಿ ಯಾರು? ಎಂಬುದು. ರವೀಂದ್ರ ಜಡೇಜಾ ತಂಡದ ಹಿರಿಯ ಆಟಗಾರರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಅವರು 2022 ರಲ್ಲಿ ನಾಯಕತ್ವವನ್ನು ವಹಿಸಿಕೊಂಡಿದ್ದರು.

ಆದರೆ ತಂಡದ ಪ್ರದರ್ಶನವು ಅತ್ಯಂತ ಕಳಪೆಯಾಗಿತ್ತು. ಅದಾದ ಬಳಿಕ ಮಧ್ಯದಲ್ಲೇ ನಾಯಕತ್ವ ತೊರೆದು, ಧೋನಿ ಮತ್ತೆ ಕ್ಯಾಪ್ಟನ್ ಆದರು. ಇದೀಗ ಎಲ್ಲರ ಮನದಲ್ಲಿ ಮೂಡುತ್ತಿರುವ ಹೆಸರು ರುತುರಾಜ್ ಗಾಯಕ್ವಾಡ್ ಅವರದ್ದು.

ರುತುರಾಜ್ ಏಷ್ಯನ್ ಗೇಮ್ಸ್ 2023 ರಲ್ಲಿ ಟೀಮ್ ಇಂಡಿಯಾದ ನಾಯಕರಾಗಿದ್ದರು. ಇದಲ್ಲದೇ ದೇಶೀಯ ಕ್ರಿಕೆಟ್‌’ನಲ್ಲಿ ನಾಯಕತ್ವದ ಅನುಭವವನ್ನೂ ಹೊಂದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link