Chia Seeds: ನಿತ್ಯ ಈ ಸಮಯದಲ್ಲಿ ಚಿಯಾ ಸೀಡ್ಸ್ ಬಳಸಿದರೆ ತ್ವರಿತ ತೂಕ ಇಳಿಕೆ ಗ್ಯಾರಂಟಿ!
ಚಿಯಾ ಬೀಜಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದರಲ್ಲಿ ಖನಿಜಗಳು, ಫೈಬರ್, ಒಮೆಗಾ-3 ಕೊಬ್ಬಿನಾಮ್ಲಗಳಂತಹ ಹಲವು ಪೋಷಕಾಂಶಗಳು ಸಮೃದ್ಧವಾಗಿರುತ್ತದೆ.
ಚಿಯಾ ಸೀಡ್ಸ್ ಅನ್ನು ರಾತ್ರಿ ವೇಳೆ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಅದನ್ನು ಕುಡಿಯುವುದರಿಂದ ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಅದರಲ್ಲೂ ಮುಖ್ಯವಾಗಿ ಚಿಯಾ ಸೀಡ್ಸ್ ಅನ್ನು ತೂಕ ಇಳಿಕೆಗೆ ವರದಾನವಿದ್ದಂತೆ ಎನ್ನಲಾಗುತ್ತದೆ.
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಚಿಯಾ ಬೀಜಗಳನ್ನು ನೆನೆಸಿಟ್ಟ ನೀರು ಕುಡಿಯುವುದು ಹೆಚ್ಚು ಪರಿಣಾಮಕಾರಿ ಆಗಿದೆ.
ಖಾಲಿ ಹೊಟ್ಟೆಯಲ್ಲಿ ಚಿಯಾ ವಾಟರ್ ಸೇವನೆಯು ಹಸಿವನ್ನು ನಿಯಂತ್ರಿಸಲು ಪರಿಣಾಮಕಾರಿ ಆಗಿದೆ. ಇದಲ್ಲದೆ, ಚಿಯಾ ಸೀಡ್ಸ್ ನಲ್ಲಿರುವ ಫೈಬರ್, ಪ್ರೋಟೀನ್, ಆರೋಗ್ಯಕರ ಕೊಬ್ಬಿನಾಮ್ಲಗಳು ದೇಹಕ್ಕೆ ನಿರಂತರ ಶಕ್ತಿಯನ್ನು ನೀಡುವಲ್ಲಿ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.
ನೀವು ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿದ್ದರೆ ಚಿಯಾ ಸೀಡ್ಸ್ ನೆನೆಸಿಟ್ಟ ನೀರನ್ನು ಮುಂಜಾನೆ ಮೊದಲ ಆಹಾರವಾಗಿ ತೆಗೆದುಕೊಳ್ಳಬೇಕು. ಇದು ಅತಿಯಾಗಿ ತಿನ್ನುವ ಕಡುಬಯಕೆ ತಪ್ಪಿಸುತ್ತದೆ.
ಚಿಯಾ ಸೀಡ್ಸ್ ನಲ್ಲಿರುವ ಪ್ರೋಟೀನ್, ಫೈಬರ್, ಒಮೆಗಾ-3 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳು ಆರೋಗ್ಯಕರವಾಗಿ ತೂಕ ಇಳಿಸಲು ಕೂಡ ಸಹಕಾರಿ ಆಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.