Chia Seeds For Health: ಚಿಯಾ ಸೀಡ್ಸ್ ಸೇವನೆಯ ಈ ಆರೋಗ್ಯಕರ ಲಾಭ ನಿಮಗೆ ತಿಳಿದಿವೆಯೇ?

Wed, 06 Apr 2022-6:53 pm,

1. ಕರುಳಿನ ಆರೋಗ್ಯಕ್ಕೆ ಲಾಭಕಾರಿ - ಇದು ನೀರಿನಲ್ಲಿ ನೆನೆಯುವ ಫೈಬರ್ ಯುಕ್ತ ಪದಾರ್ಥವಾಗಿದೆ. ಇದು ಒಂದಲ್ಲ ಹಲವು ರೀತಿಯಲ್ಲಿ ಕರುಳಿನ ಆರೋಗ್ಯಕ್ಕೆ ಲಾಭಕಾರಿಯಾಗಿವೆ. ಕರುಳಿಗೆ ಒಳ್ಳೆಯ ಬ್ಯಾಕ್ಟೀರಿಯಾ ಪೂರೈಕೆಯನ್ನು ಇವು ಸುನೀಸ್ಚಿತಗೊಳಿಸುತ್ತವೆ ಹಾಗೂ ದೇಹದಿಂದ ವ್ಯಾಜ್ಯ ಪದಾರ್ಥಗಳ ಹೊರಹಾಕುವಿಕೆಯನ್ನು ನಿಯಂತ್ರಿಸುತ್ತದೆ. 

2. ಇವುಗಳಲ್ಲಿ ಕ್ಯಾಲ್ಸಿಯಂ ಹೇರಳ ಪ್ರಮಾಣದಲ್ಲಿರುತ್ತದೆ -  ಒಂದು ವೇಳೆ ನಿಮಗೆ ಡೇರಿ ಉತ್ಪನ್ನಗಳು ಇಷ್ಟವಿಲ್ಲ ಎಂದಾದರೆ, ಚಿಯಾ ಬೀಜಗಳ ಸೇವನೆ ನಿಮ್ಮ ದೇಹದ ಮೂಳೆಗಳ (Chia Seeds For Bone Strength) ಆರೋಗ್ಯ ಬಲವರ್ಧನೆಗೆ ಉತ್ತಮ ಆಯ್ಕೆಯಾಗಿದೆ.

3. ಒತ್ತಡ ಕಡಿಮೆ ಮಾಡಲು ಸಹಕಾರಿ (Chia Seeds For Stress) - ಚಿಯಾ ಬೀಜಗಳು ಟ್ರಿಪ್ಟೋಫ್ಯಾನ್ ಹಾಗೂ ಮೇಗ್ನಿಸಿಯಂನ ಆಗರವಾಗಿದೆ. ಇದು ಒತ್ತಡದ ಮಟ್ಟವನ್ನು ನಿಯಂತ್ರಿಸುವಲ್ಲಿ ಕೆಲಸ ಮಾಡುತ್ತದೆ ಮತ್ತು ನಿದ್ರೆಯನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ.

4. ಚಿಯಾ ಬೀಜಗಳ ಸೇವನೆಯಿಂದ ತೂಕ ಇಳಿಕೆಯಾಗುತ್ತದೆಯೇ? (Chia Seeds For Weight Loss) - ವಾಟರ್ ರೆಟೈನ್ಶನ್ ನಲ್ಲಿ ಸಹಕಾರಿಯಾಗಿದೆ. ಇದೆ ಕಾರಣದಿಂದ ಇದನ್ನು ಉತ್ತಮ ಪ್ರೋಟೀನ್ ಹೊಂದಿರುವ ಒಂದು ಉಪಹಾರ ಎಂದು ಪರಿಗಣಿಸಲಾಗುತ್ತದೆ. ಇದರ ಸೇವನೆಯಿಂದ ಹೊಟ್ಟೆ ತುಂಬಿದ ಭಾಸವಾಗುತ್ತದೆ. ಅನಾರೋಗ್ಯಕರ ಸ್ನ್ಯಾಕಿಂಗ್ ಸೇವನೆಯನ್ನು ಇದು ಕಡಿಮೆ ಮಾಡುತ್ತದೆ.

 

ನೆನಪಿರಲಿ: ಹಾಗೆ ನೋಡಿದರೆ ಚಿಯಾ ಬೀಜಗಳು ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿವೆ. ಆದರೆ, ಕೆಲವರಿಗೆ ಇವುಗಳ ಸೇವನೆ ಕಿರಿಕಿರಿಯುಂಟು ಮಾಡಬಹುದು. ಹೀಗಿರುವಾಗ ಇವುಗಳನ್ನು ಸೇವಿಸುವ ಮುನ್ನ ನಿಮ್ಮ ಡೈಟೀಶಿಯನ್ ಅಥವಾ ವೈದ್ಯರ ಸಲಹೆಯನ್ನು ಪಡೆದುಕೊಳ್ಳಲು ಮರೆಯಬೇಡಿ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link