ಮಕ್ಕಳಾಗಲಿ, ದೊಡ್ಡವರಾಗಲಿ ಹೆಣ್ಣು ನಾಗಸಾಧು ಆಗಬೇಕಾದರೆ ಈ ಕೆಲಸ ಮಾಡಲೇ ಬೇಕು! ಇವರ ಬದುಕಿನ ರೀತಿ ನೀತಿ ಇರುವುದೇ ಹೀಗೆ !
ಭಾರತೀಯ ಸನಾತನ ಧರ್ಮದ ಪ್ರಸ್ತುತ ರೂಪದ ಅಡಿಪಾಯವನ್ನು ಆದಿಗುರು ಶಂಕರಾಚಾರ್ಯರು ಹಾಕಿದರು.ಶಂಕರಾಚಾರ್ಯರು ಸನಾತನ ಧರ್ಮವನ್ನು ಸ್ಥಾಪಿಸಲು ಅನೇಕ ಕ್ರಮಗಳನ್ನು ಕೈಗೊಂಡಿದ್ದರು.ದೇಶದ 4 ಮೂಲೆಗಳಲ್ಲಿ 4 ಪೀಠಗಳನ್ನು ನಿರ್ಮಿಸಿರುವುದು ಇವುಗಳಲ್ಲಿ ಒಂದು.
ಮಠಗಳು ಮತ್ತು ದೇವಾಲಯಗಳ ಆಸ್ತಿಯನ್ನು ಲೂಟಿ ಮಾಡುವ ಮತ್ತು ಭಕ್ತರಿಗೆ ಕಿರುಕುಳ ನೀಡುವವರ ವಿರುದ್ಧ ಹೋರಾಡಲು ಸಶಸ್ತ್ರ ಶಾಖೆಗಳ ಜೊತೆಗೆ ಅಖಾಡ ಗಳನ್ನೂ ಸ್ಥಾಪಿಸಲಾಯಿತು.ಈ ಕೆಲವು ಅಖಾಡಗಳಲ್ಲಿ ನಾಗಾ ಸಾಧುಗಳೂ ಇದ್ದಾರೆ
ಪುರುಷ ನಾಗಾಸಾಧುಗಳಂತೆ ಸ್ತ್ರೀ ನಾಗಾ ಸಾಧುಗಳೂ ಇದ್ದಾರೆ.ಸ್ತ್ರೀ ನಾಗಾ ಸಾಧುಗಳ ಜೀವನವು ತುಂಬಾ ನಿಗೂಢ ಮತ್ತು ಕಷ್ಟಕರ.ನಾಗಾ ಸಾಧು ಆಗಬೇಕಾದರೆ ಅನೇಕ ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿ ಬ್ರಹ್ಮಚರ್ಯವನ್ನು ಅನುಸರಿಸಿ ಕಷ್ಟದ ಜೀವನ ನಡೆಸಬೇಕು.
ಲೌಕಿಕ ಜೀವನದೊಂದಿಗಿನ ಸಂಬಂಧವನ್ನು ಸಂಪೂರ್ಣವಾಗಿ ಮುರಿಯಲು,ಸ್ತ್ರೀ ನಾಗಾ ಸಾಧುಗಳು ಜೀವಂತವಾಗಿರುವಾಗಲೇ ಪಿಂಡ ದಾನವನ್ನು ಮಾಡಬೇಕಾಗುತ್ತದೆ. ಕೂದಲು ಬೋಳಿಸಬೇಕಾಗುತ್ತದೆ.ಆಗ ಮಾತ್ರ ಗುರುಗಳು ನಾಗಾ ಸಾಧುವಾಗಲು ದೀಕ್ಷೆ ನೀಡುತ್ತಾರೆ.
ಸ್ತ್ರೀ ನಾಗಾ ಸಾಧುಗಳು ಸಾಮಾನ್ಯ ಪ್ರಪಂಚದಿಂದ ದೂರವಾಗಿ ಕಾಡು,ಗುಹೆ, ಪರ್ವತಗಳಲ್ಲಿ ವಾಸಿಸುತ್ತಾರೆ,ದೇವರನ್ನು ಪೂಜಿಸುತ್ತಾರೆ.ಕುಂಭದಂತಹ ವಿಶೇಷ ಸಂದರ್ಭಗಳಲ್ಲಿ ಮಾತ್ರ ಅವರು ಜನರ ಮುಂದೆ ಬರುತ್ತಾರೆ.
ಸ್ತ್ರೀ ನಾಗಾ ಸಾಧುಗಳು ಪುರುಷ ನಾಗಾ ಸಾಧುಗಳಂತೆ ಬೆತ್ತಲೆಯಾಗಿ ಇರುವುದಿಲ್ಲ. ಹೊಲಿಗೆ ಹಾಕದ ಕೇಸರಿ ಬಣ್ಣದ ಬಟ್ಟೆಗಳನ್ನು ಉಪಯೋಗಿಸುತ್ತಾರೆ. ಈ ಬಟ್ಟೆಯನ್ನು ಸುಮ್ಮನೆ ದೇಹಕ್ಕೆ ಸುತ್ತಿಕೊಳ್ಳುತ್ತಾರೆ.
ಸ್ತ್ರೀ ನಾಗಾ ಸಾಧುಗಳಿಗೆ ದೀಕ್ಷೆಯನ್ನು ನೀಡುವ ಮೊದಲು,ಅವರು ಭವಿಷ್ಯದಲ್ಲಿ ಈ ಕಷ್ಟಕರವಾದ ಹಾದಿಯಲ್ಲಿ ನಡೆಯಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪ್ರತಿಯೊಂದು ಅಂಶದಲ್ಲೂ ನಿರ್ಣಯಿಸಲಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.