ರತನ್ ಟಾಟಾ ಉದ್ಯಮಕ್ಕೆ ಬೆನ್ನೆಲುಬಾಗಿ ನಿಂತ ಕುಟುಂಬದ ಹೆಣ್ಣು ಮಕ್ಕಳಿವರು!ಪ್ರಚಾರದಿಂದ ದೂರ ಉಳಿದ ಸುಂದರಿಯರ ಫೋಟೋ ಇಲ್ಲಿವೆ !

Wed, 10 Jul 2024-9:21 am,

ಪತಿ ಕ್ಷೇತ್ರದಲ್ಲಿಯೂ ಟಾಟಾ ಉತ್ಪನ್ನಿದೆ. ಟಾಟಾ ಪ್ರಾಡಕ್ಟ್ ಇಲ್ಲದ ಕ್ಷೇತ್ರವೇ ಇಲ್ಲ.ಟಾಟಾ ಸಾಮ್ರಾಜ್ಯದ ಒಡೆಯ ರತನ್ ಟಾಟಾಗೆ ಮದುವೆಯಾಗಿಲ್ಲ, ಮಕ್ಕಳಿಲ್ಲ. ಆದರೆ ಟಾಟಾ ಕುಟುಂಬವು ತುಂಬಾ ದೊಡ್ಡದಾಗಿದೆ.ಹಾಗಾಗಿ ಟಾಟಾ ಕುಟುಂಬದ ಮಕ್ಕಳ ಮೇಲೆ ವ್ಯಾಪಾರದ ಜವಾಬ್ದಾರಿಯಿದೆ.   

 ಟಾಟಾ ಕುಟುಂಬದ ಇಬ್ಬರು ಹೆಣ್ಣುಮಕ್ಕಳು ಈ ಕಂಪನಿ ಜವಾಬ್ದಾರಿ  ಹೊತ್ತಿದ್ದಾರೆ. ಲಿಯಾ ಟಾಟಾ ಮತ್ತು ಮಾಯಾ ಟಾಟಾ. ಇವರು ರತನ್ ಟಾಟಾ ಮಲ ಸಹೋದರ ನೋಯೆಲ್ ಟಾಟಾ ಪುತ್ರಿಯರು.   

38 ವರ್ಷದ ಲಿಯಾ ಟಾಟಾದ ಹಾಲ್ಟ್ ಇಂಡಸ್ಟ್ರೀಸ್ (ತಾಜ್ ಹೊಟೇಲ್) ವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆ.ಈಗ ಅವರು ರಿಯಲ್ ಎಸ್ಟೇಟ್ ಮತ್ತು ಅಭಿವೃದ್ಧಿ ತಂಡದ ಭಾಗವಾಗಿದ್ದಾರೆ.ತಾಜ್ ಹೋಟೆಲ್ ಹೊರತಾಗಿ,ಅವರು ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್‌ನ ಟ್ರಸ್ಟಿ ಮತ್ತು ಕೋಲ್ಕತ್ತಾದ ಟಾಟಾ ಕ್ಯಾನ್ಸರ್ ಆಸ್ಪತ್ರೆಯ ಉಸ್ತುವಾರಿ ಕೂಡಾ  ಆಗಿದ್ದಾರೆ

ಮಾಯಾ ಕೂಡಾ ರತನ್ ಟಾಟಾ ಸಹೋದರನ ಮಗಳು. ಟಾಟಾಸನ್ಸ್‌ನಲ್ಲಿ ದೊಡ್ಡ ಜವಾಬ್ದಾರಿ  ವಹಿಸಿಕೊಂಡಿದ್ದಾರೆ. ಬ್ರಿಟನ್‌ನ ಬೇಯೆಸ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಓದಿದ ನಂತರ, ಅವರು ಟಾಟಾ ಡಿಜಿಟಲ್ ವಲಯದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.ಟಾಟಾ ಕುಟುಂಬ ಇವರಿಂದ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

ನೋಯೆಲ್ ಟಾಟಾ ಅವರ ಏಕೈಕ ಪುತ್ರ ನೇವಲ್ ಟಾಟಾ.ನೇವಲ್ ಟಾಟಾ, ಬೇಯೆಸ್ ಬ್ಯುಸಿನೆಸ್ ಸ್ಕೂಲ್ ಪದವೀಧರರು, ಟಾಟಾದ ರಿಟೇಲ್ ಬ್ರ್ಯಾಂಡ್ ಟ್ರೆಂಟ್ ಹೈಪರ್‌ಮಾರ್ಕೆಟ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯಸ್ಥ.  

ಟಾಟಾ ಕುಟುಂಬದ ಕುಡಿಗಳು ಪ್ರಚಾರದಿಂದ ದೂರ ಉಳಿದವರು. ಪ್ರಚಾರಕ್ಕಿಂತ ಹೆಚ್ಚಾಗಿ ತಮ್ಮ ವ್ಯವಹಾರಕ್ಕೆ ಒತ್ತು ಕೊಟ್ಟವರು. ಇವರು ಅಂಬಾನಿ ಕುಟುಂಬದ ಮಕ್ಕಳಷ್ಟು ಜನಪ್ರಿಯರಾಗಿಲ್ಲದಿರಬಹುದು,ಆದರೆ ಅವರು ವ್ಯಾಪಾರ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಲು ಸಿದ್ಧರಾಗಿದ್ದಾರೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link