Cholesterol Lowering Drinks: ಬೇಸಿಗೆ ಕಾಲದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಿಸುವ 4 ಸೂಪರ್ ಡ್ರಿಂಕ್ಸ್ ಇಲ್ಲಿವೆ
1. ಕೊಲೆಸ್ಟ್ರಾಲ್ ನಿಯಂತ್ರಿಸುವ ಪಾಣೀಯಗಳು - ಹೈಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುವವರು ಫಾಸ್ಟ್ ಫುಡ್, ಎಣ್ಣೆಯುಕ್ತ ಪದಾರ್ಥ ಹಾಗೂ ಜಂಕ್ ಫುಡ್ ಸೇವಿಸಬಾರದು. ಫೈಬರ್ ಹೆಚ್ಚಾಗಿರುವ ಪದಾರ್ಥಗಳನ್ನು ಸೇವಿಸಬೇಕು. ಇದಲ್ಲದೆ ಇಂದು ನಾವು ನಿಮಗೆ ಕೆಲ ಸೂಪರ್ ಡ್ರಿಂಕ್ಸ್ ಗಳ ಕುರಿತು ಮಾಹಿತಿ ನೀಡುತ್ತಿದ್ದು, ಅವುಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಸಮಸ್ಯೆಯಿಂದ ನೀವು ಪರಿಹಾರ ಪಡೆಯಬಹುದು.
2. ಗ್ರೀನ್ ಟೀ - ಗ್ರೀನ್ ಟೀನಲ್ಲಿ ಕ್ಯಾಟೆಚಿನ್ ಮತ್ತು ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ ಗಳು ಹೇರಳ ಪ್ರಮಾಣದಲ್ಲಿರುತ್ತವೆ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಅದು ಸಮೃದ್ಧವಾಗಿದೆ. ಇದನ್ನು ದಿನಕ್ಕೆರಡು ಬಾರಿ ಕುಡಿಯಬೇಕು. ಏಕೆಂದರೆ ಹೀಗೆ ಮಾಡುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಬಹುದು.
3. ಓಟ್ಸ್ ಮಿಲ್ಕ್ - ಬೆಳಗಿನ ಉಪಾಹಾರದಲ್ಲಿ ಓಟ್ಸ್ ಮಿಲ್ಕ್ ಅನ್ನು ಸೇವಿಸಿ, ಇದು ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಬೀಟಾ-ಗ್ಲುಕನ್ ಅಂಶವು ಪಿತ್ತರಸ ಉಪ್ಪಿನೊಂದಿಗೆ ಬೆರೆತು ಕರುಳಿನಲ್ಲಿ ಜೆಲ್ ರೀತಿಯ ಪದರವನ್ನು ರೂಪಿಸುತ್ತದೆ, ಇದು ಕೊಲೆಸ್ಟ್ರಾಲ್ ಅನ್ನು ಹೀರಿಕೊಳ್ಳಲು ಸಾಕಷ್ಟು ಅನುಕೂಲವಾಗುತ್ತದೆ.
4. ಟೊಮೆಟೊ ಹಣ್ಣಿನ ಜ್ಯೂಸ್ - ಬೇಸಿಗೆ ಕಾಲದಲ್ಲಿ ಟೊಮ್ಯಾಟೊ ಸೇವನೆ ದೇಹಕ್ಕೆ ಸಾಕಷ್ಟು ಲಾಭ ನೀಡುತ್ತದೆ. ಏಕೆಂದರೆ, ಅದರಲ್ಲಿ ನೀರಿನ ಅಂಶವು ತುಂಬಾ ಅಧಿಕವಾಗಿರುತ್ತದೆ. ಇದು ಲೈಕೋಪೀನ್ ಎಂಬ ಆಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿದೆ. ಇದು ಜೀವಕೋಶಗಳನ್ನು ಹಾನಿಯಾಗದಂತೆ ರಕ್ಷಿಸುತ್ತದೆ. ಇದರಲ್ಲಿರುವ ಫೈಬರ್ ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ನಿಯಮಿತವಾಗಿ ಟೊಮೆಟೊ ರಸವನ್ನು ಕುಡಿಯಿರಿ.
5. ಸೋಯಾ ಮಿಲ್ಕ್ - ಸೋಯಾ ಮಿಲ್ಕ್ ಆರೋಗ್ಯಕ್ಕೆ ತುಂಬಾ ಹಿತಕಾರಿಯಾಗಿದೆ. ಏಕೆಂದರೆ ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಕೂಡ ನೀವು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಬೇಕು.