IPL 2023: ಕೊಹ್ಲಿ, ಬಟ್ಲರ್ ಅಲ್ಲ; ತನ್ನ ಐಪಿಎಲ್ ದಾಖಲೆ ಮುರಿಯೋದು ಟೀಂ ಇಂಡಿಯಾದ ಈ ಆಟಗಾರ ಎಂದ ಕ್ರಿಸ್ ಗೇಲ್
ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಐಪಿಎಲ್’ನಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಬ್ಯಾಟಿಂಗ್ ಮೂಲಕವೇ ಮೈದಾನದಲ್ಲಿ ಅಬ್ಬರಿಸುವ ಈ ಕೆರಿಬಿಯನ್ ಆಟಗಾರನ ದಾಖಲೆಗಳನ್ನು ಮುಟ್ಟಲೂ ಸಾಧ್ಯವಿಲ್ಲ.
ಆದರೆ ಇದೀಗ ತಮ್ಮ ಹೆಸರಿನಲ್ಲಿರುವ ಅತೀ ದೊಡ್ಡ ದಾಖಲೆಯನ್ನು ಮುರಿಯುವ ಆಟಗಾರನ ಬಗ್ಗೆ ಕ್ರಿಸ್ ಗೇಲ್ ಮಾತನಾಡಿದ್ದಾರೆ. ಅವರ ಈ ಹೇಳಿಕೆ ಅಚ್ಚರಿಯನ್ನುಂಟು ಮಾಡಿದೆ.
175 ರನ್ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ವಿಶೇಷ ದಾಖಲೆ ಬರೆದವರು ಗೇಲ್. ಇದು ಒಂದು ಪಂದ್ಯದಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಎನಿಸಿಕೊಂಡಿದೆ.
ಈಗ ಈ ದಾಖಲೆಯನ್ನು ಕನ್ನಡಿಗ ಕೆ ಎಲ್ ರಾಹುಲ್ ಮುರಿಯಬಹುದು ಎಂದು ಕ್ರಿಸ್ ಗೇಲ್ ಹೇಳಿದ್ದಾರೆ.
“ನಾನು ತೀರ ಹತ್ತಿರದಿಂದ ರಾಹುಲ್ ಆಟವನ್ನು ನೋಡಿದ್ದೇನೆ. ಅವರು ಮನಸ್ಸು ಮಾಡಿದರೆ ಖಂಡಿತ ನನ್ನ ದಾಖಲೆಯನ್ನು ಮುರಿಯುತ್ತಾರೆ. ಡೆತ್ ಓವರ್ಗಳಲ್ಲಿ ರಾಹುಲ್ ತುಂಬಾ ಅಪಾಯಕಾರಿ ಬ್ಯಾಟ್ಸ್ಮನ್. ಅವರು ಉತ್ತಮ ಆರಂಭವನ್ನು ಪಡೆದರೆ, ಖಂಡಿತವಾಗಿಯೂ ನನ್ನ 175 ರನ್ಗಳ ದಾಖಲೆಯನ್ನು ಮುರಿಯಲಿದ್ದಾರೆ” ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಆದರೆ ರಾಹುಲ್ ಕಳಪೆ ಫಾರ್ಮ್ ಕಾರಣದಿಂದ ಆಸ್ಟ್ರೇಲಿಯಾ ವಿರುದ್ಧ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ಮೊದಲ ಏಕದಿನ ಪಂದ್ಯದಲ್ಲಿ ಅಜೇಯ 75 ರನ್ ಬಾರಿಸುವ ಮೂಲಕ ಮತ್ತೆ ಲಯಕ್ಕೆ ಬಂದಿದ್ದಾರೆ.