ಒಂದು ಸಿನಿಮಾ ಪಾತ್ರಕ್ಕಾಗಿ 28ನೇ ವಯಸ್ಸಿನಲ್ಲಿ ಪ್ರಾಣ ಕಳೆದುಕೊಂಡ ಸ್ಟಾರ್ ನಟ..? ಈತನ ಸ್ಟೋರಿ ಕೇಳಿದ್ರೆ ನಿಮ್ಮ ಎದೆ ಜಲ್ ಅನ್ನುತ್ತೆ..!
ಈ ಪೋಟೊದಲ್ಲಿರುವ ವ್ಯಕ್ತಿಯನ್ನು ನೀಚು ನೋಡಿರ್ಲೇಬೇಕು ಅಲ್ವಾ. ಈ ಫೋಟೊದಲ್ಲಿ ಕಾಣಿಸುವಷ್ಟು ಈ ಪಾತ್ರ ಸಿಪಲ್ ಏನಲ್ಲ. ಕ್ರಿಸ್ಟೋಫರ್ ನೋಲನ್ ಅವರ ಚಿತ್ರ 'ದಿ ಡಾರ್ಕ್ ನೈಟ್' ಅತ್ಯುತ್ತಮ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರವು ನೋಲನ್ ಅವರ ನಿರ್ದೇಶನಕ್ಕಾಗಿ ಮಾತ್ರವಲ್ಲದೆ ಜೋಕರ್‌ನ ಅದ್ಭುತ ನಟನೆಯನ್ನು ನಿರ್ವಹಿಸಿದ ನಟ ಹೀತ್ ಲೆಡ್ಜರ್ ಅವರ ಅಭಿನಯಕ್ಕು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಈ ಪಾತ್ರವನ್ನು ನಿರ್ವಹಿಸಿದ ಕೆಲವು ತಿಂಗಳ ನಂತರ ಹೀತ್ ನಿಧನರಾದರು.
ಮೆಥೆಡ್ ಆಕ್ಟಿಂಗ್ ಅನ್ನು ಹೊಸ ಮಟ್ಟಕ್ಕೆ ಕೊಂಡೊಯ್ದ ಹೀತ್, ಈ ಪಾತ್ರಕ್ಕಾಗಿ ಲಂಡನ್‌ನ ಹೋಟೆಲ್ ಕೋಣೆಯಲ್ಲಿ ಒಂದು ತಿಂಗಳ ಕಾಲ ಬೀಗ ಹಾಕಿಕೊಂಡಿದ್ದರು. ಜೋಕರ್ ಪತ್ರ ಮಾರಣಾಂತಿಕ, ಕ್ರೂರ ಮತ್ತು ಅಪಾಯಕಾರಿ ಪಾತ್ರವಾಗಿತ್ತು. ಈ ಸಿನಿಮಾ ನೋಡಿದಾಗಲೆಲ್ಲಾ ಈ ಪಾತ್ರ ಪ್ರೇಕ್ಷಕರಲ್ಲಿ ಇಂದಿಗೂ ನಡುಕ ಹುಟ್ಟಿಸುತ್ತದೆ. ಹೀತ್ ಈ ಪಾತ್ರಕ್ಕಾಗಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಈ ಪಾತ್ರದಲ್ಲಿ ಹೀತ್ ಲೆಡ್ಜರ್ ಎಷ್ಟು ಮುಳುಗಿದ್ದರು ಎಂದರೆ ಜೋಕರ್ ಪಾತ್ರವು ಅವರ ವೈಯಕಿಕ ಜೀವನದಲ್ಲಿ ವ್ಯಕ್ತಿತ್ವದ ಭಾಗವಾಗಿ ಹೋಯ್ತು.
ಹೀತ್ ಅವರ ಮರಣದ ನಂತರ ಅವರ ತಂದೆ ಹೀತ್ ಅವರು ಬರೆದಿದ್ದ ಡೈರಿಯನ್ನು ಹಂಚಿಕೊಂಡಿದ್ದಾರೆ. ಈ ಡೈರಿಯ ಕೊನೆಯಲ್ಲಿ ಬೈ-ಬೈ ಬರೆಯಲಾಗಿದ್ದು, ತಮ್ಮ ಸಾವಿನ ಸುಳಿವು ಹೀತ್ ಲೆಡ್ಜರ್‌ಗೆ ಮೊದಲೇ ಸಿಕ್ಕಿತ್ತು ಎನ್ನುವುದು ಅಚ್ಚರಿಯ ಸಂಗತಿ.
ಜೋಕರ್ ಪಾತ್ರವು ನಟನ ಸಾವಿಗೆ ಕಾರಣ ಎಂದು ಹೇಳುವುದು ಸರಿಯಲ್ಲ, ಆದರೆ ಈ ಪಾತ್ರವು ಹೀತ್ ಅವರ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ ಮತ್ತು ಎಲ್ಲೋ ಈ ಪಾತ್ರದ ನಕಾರಾತ್ಮಕ ಶಕ್ತಿಯು ಅವರನ್ನು ಈ ಹೆಜ್ಜೆ ಇಡಲು ಒತ್ತಾಯಿಸಿತು ಎಂಬುದು ನಿಜ. ದಿ ಡಾರ್ಕ್ ನೈಟ್ ಚಿತ್ರದ ಒಂದು ಡೈಲಾಗ್ ಇದೆ " ಒಂದೋ ನೀವು ಹೀರೋ ಆಗಿ ಸಾಯುತ್ತೀರಿ ಅಥವಾ ನೀವು ವಿಲನ್ ಆಗಿ ಸಾಯುತ್ತೀರಿ" ಎಂದು ಸಿನಿಮಾದಲ್ಲಿ ಜೋಕರ್ ಪಾತ್ರದಲ್ಲಿ ನಟಿಸಿದ ನಟ ಹೇಳುತ್ತಾರೆ.
ಕೇವಲ 28 ನೇ ವಯಸ್ಸಿನಲ್ಲಿ ಜೋಕರ್ ಪಾತ್ರವನ್ನು ನಿರ್ವಹಿಸುವ ಮೂಲಕ, ಹೀತ್ ನಾಯಕನಾಗಿ ವಿದಾಯ ಹೇಳುತ್ತಾರೆ, ಮಾತ್ರವಲ್ಲದೆ ಜನರ ಹೃದಯದಲ್ಲಿ ಶಾಶ್ವತವಾಗಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸ್ಮರಣೀಯ ಪಾತ್ರಕ್ಕಾಗಿ ಹೀತ್ ಲೆಡ್ಜರ್ ಅತ್ಯುತ್ತಮ ನಟನಿಗಾಗಿ ಆಸ್ಕರ್ ಪ್ರಶಸ್ತಿಯನ್ನು ಪಡೆಯುತ್ತಾರೆ. ಆದರೆ ಈ ವೇಳೆಗಾಗಲೇ ನಟ ಸಾವನ್ನಪ್ಪಿದ್ದ ಕಾರಣ ಆಸ್ಕರ್ ಪುರಸ್ಕಾರವನ್ನು ಹೀತ್ ಅವರ ಕುಟುಂಬದವರು ತೆಗೆದುಕೊಳ್ಳುತ್ತಾರೆ.