ಚಳಿಗಾಲದಲ್ಲಿ ಬಿಸಿ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಸೊಂಟ ಮತ್ತು ಹೊಟ್ಟೆ ಭಾಗದ ಬೊಜ್ಜು ಕರಗಿ ನೀರಾಗುವುದು!ಒಂದೇ ವಾರದಲ್ಲಿ ವ್ಯತ್ಯಾಸ ಗಮನಿಸಬಹುದು

Mon, 18 Nov 2024-12:08 pm,

ಬೆಳಗಿನ ಉಪಹಾರದಂತೆ, ರಾತ್ರಿ ನಾವು ಏನನ್ನು ತಿನ್ನುತ್ತೇವೆ ಮತ್ತು ಯಾವ ಸಮಯದಲ್ಲಿ ತಿನ್ನುತ್ತೇವೆ ಎನ್ನುವುದು ನಮ್ಮ ದೇಹ ತೂಕದ ಮೇಲೆ ಬಹಳ ಪರಿಣಾಮ ಬೀರುತ್ತದೆ.

ಹಾಗೆಯೇ ಬೆಳಿಗ್ಗೆ ಎದ್ದ ಕೂಡಲೇ ಈ ಒಂದು ಆರೋಗ್ಯಕರ ಪಾನೀಯವನ್ನು ಸೇವಿಸಿದರೆ, ತೂಕ ನಿಯಂತ್ರಣದಲ್ಲಿಡಬಹುದು.ಅದರಲ್ಲಿಯೂ ಸೊಂಟ ಮತ್ತು ಹೊಟ್ಟೆ ಭಾಗದ ಹೆಚ್ಚುವರಿ ಬೊಜ್ಜು ಕರಗಿಸಲು ಇದು ಸಹಾಯ ಮಾಡುತ್ತದೆ. 

ಬೆಳಿಗ್ಗೆ ಖಾಲಿ ಹೊಟ್ಟೆಗೆ ದಾಲ್ಚಿನ್ನಿ ಸೇವಿಸಿದರೆ ತೂಕವನ್ನು ಸುಲಭವಾಗಿ ಕಡಿಮೆ ಮಾಡಬಹುದು. ಇದನ್ನು ಸೇವಿಸಿದ ನಂತರ ಇಳಿಯುವ ತೂಕ ಒಂದೇ ವಾರದಲ್ಲಿ ಗಮನಕ್ಕೆ ಬರುವುದಕ್ಕೆ ಆರಂಭವಾಗುತ್ತದೆ. 

ದಾಲ್ಚಿನ್ನಿ ಬಿಸಿ ಮಸಾಲೆಯಾಗಿದ್ದು, ಇದನ್ನು ಅನೇಕ ರೀತಿಯ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ದಾಲ್ಚಿನ್ನಿಯ ಔಷಧೀಯ ಗುಣಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಳು ಸಹಾಯ ಮಾಡುತ್ತದೆ.

ಒಂದು ಲೋಟ ನೀರನ್ನು ಕುದಿಸಬೇಕು.ನಂತರ ಒಂದು ಚಮಚ ದಾಲ್ಚಿನ್ನಿ ಪುಡಿ ಮತ್ತು 2 ಪುಡಿಮಾಡಿದ ಕರಿಮೆಣಸನ್ನು ಆ ನೀರಿಗೆ ಸೇರಿಸಬೇಕು. ಈಗ ಈ ಮಿಶ್ರಣವನ್ನು 5 ನಿಮಿಷಗಳ ಕಾಲ ಕುದಿಸಿ ನಂತರ ಅದನ್ನು ಫಿಲ್ಟರ್ ಮಾಡಿ.

ರುಚಿಗೆ ಅರ್ಧ ನಿಂಬೆಹಣ್ಣಿನ ರಸವನ್ನು ಸೇರಿಸಿ ಮತ್ತು ರುಚಿಗೆ ತಕ್ಕಂತೆ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ಈ ನೀರು ಬಿಸಿಯಾಗಿರುವಾಗಲೇ ಸೇವಿಸಿದರೆ ಹೆಚ್ಚು ಪರಿಣಾಮಕಾರಿ. 

ಈ ನೀರನ್ನು ನಿತ್ಯ ಸೇವಿಸುತ್ತಾ ಬಂದರೆ ಒಂದೇ ವಾರದಲ್ಲಿ ಹೊಟ್ಟೆ ಕರಗುವುದು, ದೇಹ ತೂಕ ಇಳಿಯುವುದು ನಿಮ್ಮ ಗಮನಕ್ಕೆ ಬರುವುದು. 

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link