ಕೂದಲಿಗೆ ವರದಾನ ʼಈʼ ನೀರು! ವಾರಕ್ಕೆ ಎರಡು ಬಾರಿ ಬಳಸಿದ್ರೆ ದಟ್ಟವಾದ.. ಗಾಢಕಪ್ಪು ಕೇಶರಾಶಿ ನಿಮ್ಮದಾಗುತ್ತೆ!!

Thu, 12 Sep 2024-1:03 pm,

ಕೂದಲು ಉದುರುವುದು.. ತಲೆಹೊಟ್ಟು.. ಅಕಾಲಿಕ ಬಿಳಿ ಕೂದಲು.. ಹೀಗೆ ಇಂದಿನ ಯುವ ಪೀಳಿಗೆಯನ್ನು ಹಲವಾರು ಸಮಸ್ಯೆಗಳು ಭಾದಿಸುತ್ತಿವೆ.. ಇದಕ್ಕೆಲ್ಲ ಪರಿಹಾರವಾಗಿ ಮಾರುಕಟ್ಟೆಯಲ್ಲಿ ಅನೇಕ ಪ್ರಾಡಕ್ಟ್‌ಗಳು ಲಭ್ಯವಿವೆ ಆದರೆ ಅವುಗಳಿಂದ ತಕ್ಕಮಟ್ಟಿಗೆ ಮಾತ್ರ ಪರಿಹಾರ ಸಿಗುತ್ತೆ..  

ಈ ರೀತಿಯ ಕೂದಲಿನ ಸಮಸ್ಯೆಗೆ ಮನೆಮದ್ದುಗಳು,, ನೈಸರ್ಗಿಕ ಪರಿಹಾರಗಳನ್ನು ಬಳಸುವುದು ಉತ್ತಮ ಎಂದು ನಮ್ಮ ಪೂರ್ವಜರು ಹೇಳುತ್ತಾರೆ.. ಏಕೆಂದರೇ ಅವುಗಳಿಂದ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ ಜೊತೆಗೆ ಶಾಶ್ವತ ಪರಿಹಾರವನ್ನೂ ಕಂಡುಕೊಳ್ಳಹುದು..   

ಇನ್ನು ಲವಂಗವು ನಮ್ಮ ಮನೆಯಲ್ಲಿ ಒಂದು ಪ್ರಮುಖ ಸುಗಂಧವಾಗಿದೆ. ಇದರಲ್ಲಿ ಕಬ್ಬಿಣ, ಮ್ಯಾಂಗನೀಸ್, ಪೊಟ್ಯಾಸಿಯಮ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ. ಇದನ್ನು ನಮ್ಮ ಕೂದಲಿಗೆ ಹಚ್ಚಿದಾಗ ಒಳ್ಳೆಯ ವಾಸನೆ ಬರುವುದಲ್ಲದೆ, ತಲೆಯ ಸೋಂಕನ್ನು ಹೋಗಲಾಡಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.   

ಲವಂಗದಲ್ಲಿರುವ ಯೂಜಿನ್ ಮತ್ತು ವಿಟಮಿನ್ ಕೆ ಕೂದಲು ಕಿರುಚೀಲಗಳನ್ನು ಆರೋಗ್ಯವಾಗಿಟ್ಟು.. ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದಾಗಿ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ..  

ಈ ಲವಂಗದ ಪೋಷಕಾಂಶಗಳನ್ನು ಪಡೆಯಲು ನಾವು ಲವಂಗ ನೀರನ್ನು ತಯಾರಿಸಿ ಬಳಸಬೇಕು. ಅರ್ಧ ಕಪ್ ನೀರನ್ನು ಚೆನ್ನಾಗಿ ಕುದಿಯಲು ಇಟ್ಟು ಅದಕ್ಕೆ ಲವಂಗವನ್ನು ಸೇರಿಸಿ. ಮಧ್ಯಮ ಉರಿಯಲ್ಲಿ ಲವಂಗದ ರಸ ಬರುವವರೆಗೆ ಕಾಯಿರಿ. ಬಣ್ಣ ಬದಲಾದಾಗ, ಸ್ಟೌವ್ ಆಫ್ ಮಾಡಿ ಸ್ವಲ್ಪ ಹೊತ್ತು ಮುಚ್ಚಿಡಿ. ತಂಪಾಗಿಸಿದ ನಂತರ, ಸ್ಪ್ರೇ ಬಾಟಲಿಗೆ ಹಾಕಿ.   

ನಂತರ ಇದನ್ನು ತಲೆಗೆ ಸ್ಪ್ರೇ ಮಾಡಿ 15 ನಿಮಿಷಗಳ ನಂತರ ತೊಳೆಯಿರಿ. ನೀವು ವಾರಕ್ಕೆ ಎರಡು ಬಾರಿ ಮಾಡಿದರೂ ಸಹ, ಫಲಿತಾಂಶವು ಅದ್ಭುತವಾಗಿರುತ್ತದೆ. ಇದರೊಂದಿಗೆ ಉತ್ತಮ ನಿದ್ದೆ ಮತ್ತು ಪೌಷ್ಟಿಕ ಆಹಾರ ತೆಗೆದುಕೊಳ್ಳಿ.   

(ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link