ಕ್ಯಾನ್ಸರ್ ಕೂಡ ಕಡಿಮೆ ಮಾಡುವ ಅದ್ಭುತ ಹಣ್ಣು.. ದಿನಕ್ಕೊಮ್ಮೆ ಸೇವಿಸಿದರೆ ಸಾಕು ಬ್ಲಡ್ ಶುಗರ್ ಕಂಪ್ಲೀಟ್ ಕಂಟ್ರೋಲ್‌ಗೆ ಬರುತ್ತದೆ !
ಅತ್ತಿ ಹಣ್ಣು ಮಧುಮೇಹವನ್ನು ದೂರ ಮಾಡುವ ಶಕ್ತಿ ಹೊಂದಿದೆ. ಸಾಮಾನ್ಯವಾಗಿ ರಸ್ತೆ ಬದಿಗಳಲ್ಲಿ ಎತ್ತರದ ಅತ್ತಿ ಮರವನ್ನು ಕಾಣುತ್ತೇವೆ.
ಇದರಲ್ಲಿ ಬಿಡುವ ಹಣ್ಣುಗಳು ಆರೋಗ್ಯಕ್ಕೆ ಸಂಜೀವಿನಿಯಂತೆ. ಗೊಂಚಲಿನ ರೀತಿಯಲ್ಲಿ ಬಿಡುವ ಅತ್ತಿ ಹಣ್ಣು ಸೇವನೆ ಮಾಡಿದರೆ ಮುಟ್ಟಿನ ನೋವು ಕಡಿಮೆಯಾಗುತ್ತದೆ.
ಅತ್ತಿ ಹಣ್ಣಿನ ರಸವನ್ನು ಗೋಧಿ ಹಿಟ್ಟಿನಲ್ಲಿ ಬೆರೆಸಿ ಬಾವುಗಳಿರುವ ಜಾಗದಲ್ಲಿ ಹಚ್ಚಿದರೆ ನೋವು ಗುಣವಾಗುತ್ತದೆ.
ಅತ್ತಿ ಹಣ್ಣಿನಲ್ಲಿ ವಿಟಮಿನ್ ಬಿ 2 ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಕೆಂಪು ರಕ್ತ ಕಣಗಳ ಉತ್ಪಾದನೆಗೆ ನೆರವಾಗುತ್ತದೆ.
ಅತ್ತಿ ಮರದ ತೊಗಟೆಯನ್ನು ಒಣಗಿಸಿ ನಯವಾದ ಪುಡಿ ಮಾಡಿ ಬಿಸಿ ನೀರಿಗೆ ಹಾಕಿ ಕುಡಿಯುತ್ತಾ ಬಂದರೆ ಮಧುಮೇಹ ನಿಯಂತ್ರಣದಲ್ಲಿ ಇರುತ್ತದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.