ಬಂತು, ಬಂತು ಸಿಹಿಸುದ್ದಿ... ಕೇಂದ್ರ ಸರ್ಕಾರದ ಬೆನ್ನಲೇ ದೀಪಾವಳಿ ಬೋನಸ್ ಘೋಷಿಸಿದ ರಾಜ್ಯ ಸರ್ಕಾರ! ವೇತನದ ಜೊತೆಗೆ ಸಿಗಲಿದೆ ಇಷ್ಟು ಮೊತ್ತದ ʼಭರ್ಜರಿ ಗಿಫ್ಟ್ʼ
ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರಗಳು ಸಹ ಬೋನಸ್ ಘೋಷಿಸುತ್ತಿದೆ. ಇದೀಗ ಕಾರ್ಮಿಕರಿಗೆ ಸಂತಸದ ಸುದ್ದಿಯೊಂದು ಬಂದಿದ್ದು, ತೆಲಂಗಾಣದಲ್ಲಿ ನೌಕರರಿಗೆ ಸಿಎಂ ರೇವಂತ್ ರೆಡ್ಡಿ ದೀಪಾವಳಿ ಬೋನಸ್ ಘೋಷಿಸಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಸಿಎಂ ರೇವಂತ್ ರೆಡ್ಡಿ ತಮ್ಮ ಆಡಳಿತದ ಮೂಲಕ ತಮ್ಮ ಛಾಪು ತೋರಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಈಗಾಗಲೇ ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ದಿಸೆಯಲ್ಲಿ ಮುನ್ನಡೆಯುತ್ತಿದೆ.
ಈ ಹಿನ್ನಲೆಯಲ್ಲಿ ಸಿಎಂ ರೇವಂತ್ ರೆಡ್ಡಿ ಈಗಾಗಲೇ ಎಲ್ಲಾ ಸಮುದಾಯಗಳಿಗೂ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ಸದ್ಯ ತೆಲಂಗಾಣದಲ್ಲಿ ನೌಕರರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ ತೆಲಂಗಾಣದ ಸಿಂಗರೇಣಿ ಗಣಿಯಲ್ಲಿ ಕೆಲಸ ಮಾಡುವ ನೌಕರರಿಗೆ ದೀಪಾವಳಿ ಹಬ್ಬಕ್ಕೂ ಮುನ್ನವೇ ಸಿಎಂ ರೇವಂತ್ ರೆಡ್ಡಿ ಗುಡ್ ನ್ಯೂಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ದೀಪಾವಳಿ ಸಂದರ್ಭದಲ್ಲಿ ಸಿಂಗರೇಣಿ ಕಾರ್ಮಿಕರಿಗೆ ಬೋನಸ್ ಆಗಿ ರೂ.358 ಕೋಟಿ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ. ಈ ಮೊತ್ತ ದೀಪಾವಳಿಗೂ ಮುನ್ನವೇ ಖಾತೆ ಸೇರಲಿದೆ ಎಂದು ತಿಳಿದುಬಂದಿದೆ.