ತೆಂಗಿನ ಹಾಲಿಗೆ ಈ ಪುಡಿ ಬೆರೆಸಿ ಬಿಳಿ ಕೂದಲಿಗೆ ಹಚ್ಚಿ.. 15 ನಿಮಿಷದಲ್ಲೇ ಕಡು ಕಪ್ಪಾಗಿ ರೇಷ್ಮೆಯಂತೆ ಹೊಳೆಯುವುದು!
ತೆಂಗಿನ ಹಾಲನ್ನು ತಲೆಗೆ ಹಚ್ಚುವುದರಿಂದ ಕೂದಲಿಗೆ ಹೊಳಪು ಬರುತ್ತದೆ. ಜೊತೆಗೆ ಬಿಳಿ ಕೂದಲು ಕಪ್ಪಾಗಿ ದಪ್ಪಾಗಿ ಬೆಳೆಯುತ್ತದೆ.
ತೆಂಗಿನ ಹಾಲಿಗೆ ದಾಸವಾಳದ ಹೂವಿನ ಪುಡಿ ಸೇರಿಸಿ ಹಚ್ಚಿಕೊಳ್ಳಬಹುದು. ಇದು ಕೂದಲನ್ನು ಮೃದುವಾಗಿ ಮತ್ತು ನಯವಾಗಿಸಲು ಸಹ ಸಹಾಯ ಮಾಡುತ್ತದೆ. ಹೇರ್ ಮಾಸ್ಕ್ ತಯಾರಿಸಲು, ನೀವು 1 ಕಪ್ ಹಾಲಿಗೆ 2 ಚಮಚ ದಾಸವಾಳದ ಪುಡಿ ಜೊತೆಗೆ ಸ್ವಲ್ಪ ಕಾಫಿ ಪುಡಿ ಬೆರೆಸಬಹುದು. ಇದರಿಂದ ಬಿಳಿ ಕೂದಲು ಕಪ್ಪಾಗುವುದು.
ತೆಂಗಿನ ಹಾಲು ಮತ್ತು ಅಲೋವೆರಾ ಮಿಶ್ರಣ ತಲೆಗೆ ಹಚ್ಚಿದರೆ ನೆತ್ತಿಯ ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೆಂಗಿನ ಹಾಲಿನಲ್ಲಿ ಅಲೋವೆರಾ ಜೆಲ್ ಮಿಶ್ರಣ ಮಾಡಿ. ಈ ಹೇರ್ ಮಾಸ್ಕ್ ಅನ್ನು ಕೂದಲಿನ ಮೇಲೆ 20 ನಿಮಿಷಗಳ ಕಾಲ ಇರಿಸಿ ನಂತರ ತೊಳೆದುಕೊಳ್ಳಿ.
ತೆಂಗಿನ ಹಾಲಿಗೆ ನಿಂಬೆ ರಸವನ್ನು ಹಚ್ಚುವುದರಿಂದ ಕೂದಲಿಗೆ ತೇವಾಂಶವನ್ನು ನೀಡುತ್ತದೆ. ಈ ಹೇರ್ ಮಾಸ್ಕ್ ತಯಾರಿಸಲು, 1 ಕಪ್ ತೆಂಗಿನ ಹಾಲಿಗೆಲಿ 5 - 6 ಹನಿ ನಿಂಬೆ ರಸವನ್ನು ಮಿಶ್ರಣ ಮಾಡಿ. ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿ ಮತ್ತು 15 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ.
ತೆಂಗಿನ ಹಾಲು ಮತ್ತು ಜೇನುತುಪ್ಪದ ಹೇರ್ ಮಾಸ್ಕ್ ಬಿಳಿ ಕೂದಲನ್ನು ಕಪ್ಪಾಗಿಸುವುದು. ಒಂದು ಬಟ್ಟಲಿನಲ್ಲಿ ಒಂದು ಕಪ್ ತೆಂಗಿನ ಹಾಲನ್ನು ತೆಗೆದುಕೊಂಡು 1 ಚಮಚ ಜೇನುತುಪ್ಪ ಸೇರಿಸಿ. ಇದನ್ನು ಕೂದಲಿಗೆ ಹಚ್ಚಿ ಮತ್ತು 20 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.