ತೆಂಗಿನೆಣ್ಣೆಗೆ ಒಂದೆರಡು ಹನಿ ಈ ಹಣ್ಣಿನ ರಸ ಬೆರೆಸಿ ಹಚ್ಚಿದರೆ ಹತ್ತೇ ನಿಮಿಷದಲ್ಲಿ ಗಾಢ ಕಪ್ಪು ಬಣ್ಣಕ್ಕೆ ತಿರುಗುವುದು ಬಿಳಿ ಕೂದಲು !ಒಮ್ಮೆ ಟ್ರೈ ಮಾಡಿ !
ಕೂದಲು ಬಿಳಿಯಾಯಿತು ಎಂದ ಕೂಡಲೇ ಮಾರುಕಟ್ಟೆಯಲ್ಲಿ ಸಿಗುವ ಹೇರ್ ಕಲರ್, ಡೈ ಬಳಸಬೇಕಿಲ್ಲ.ಇದು ದುಬಾರಿ ಎನಿಸುವುದರ ಜೊತೆ ಕೂದಲಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಅಷ್ಟೇ.ಅಲ್ಲದೆ ಅಡ್ಡ ಪರಿಣಾಮಗಳ ಅಪಾಯ ಕೂಡಾ ಕಾಡುವುದು.
ಇದರ ಬದಲಿಗೆ ಕೆಲವೊಂದು ಮನೆ ಮದ್ದುಗಳನ್ನು ಬಳಸುವ ಮೂಲಕ ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
ಬಿಳಿ ಕೂದಲನ್ನು ಬೇರಿನಿಂದಲೇ ಕಪ್ಪಾಗಿಸುವ ಕೆಲಸವನ್ನು ತೆಂಗಿನ ಎಣ್ಣೆ ಪರಿಣಾಮಕಾರಿಯಾಗಿ ಮಾಡುತ್ತದೆ. ತೆಂಗಿನೆಣ್ಣೆಯಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು, ಮತ್ತು ಮೆಲನಿನ್ ಕೂದಲಿಗೆ ಗಾಢ ಬಣ್ಣವನ್ನು ನೀಡುತ್ತದೆ.
ಇನ್ನು ಬಿಳಿ ಕೂದಲನ್ನು ಕಪ್ಪಾಗಿಸಲು ನಿಂಬೆ ರಸ ಕೂಡಾ ಬೆಸ್ಟ್ ಮನೆಮದ್ದು. ಇದು ಕೇವಲ ಬಿಳಿಕೂದಲು ಮಾತ್ರವಲ್ಲ ತಲೆಹೊಟ್ಟು ಸಮಸ್ಯೆಗೂ ಶೀಘ್ರವೇ ಪರಿಹಾರವನ್ನು ನೀಡುತ್ತದೆ.
ನಿಂಬೆರಸವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲು ಕಪ್ಪಾಗುವುದರ ಜೊತೆಗೆ ಸ್ಟ್ರಾಂಗ್ ಆಗುತ್ತದೆ.
ತೆಂಗಿನೆಣ್ಣೆ ಮತ್ತು ನಿಂಬೆ ರಸವನ್ನು ಸಮಾ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಈ ಮಿಶ್ರಣವನ್ನು ಕೂದಲು ಮತ್ತು ನೆತ್ತಿಯ ಮೇಲೆ ಹಚ್ಚಿ ಮಸಾಜ್ ಮಾಡಿ. ಸುಮಾರು 1 ಗಂಟೆಯ ನಂತರ, ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.
ತೆಂಗಿನ ಎಣ್ಣೆ ಮತ್ತು ನಿಂಬೆರಸವನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು, ತುರಿಕೆ ಸಮಸ್ಯೆ ಕೂಡಾ ದೂರವಾಗುವುದು.ಇದು ಕೂದಲನ್ನು ಬೇರಿನಿಂದಲೇ ಸದೃಢಗೊಳಿಸುತ್ತದೆ.ಇದರಿಂದ ಕೂದಲು ಉದುರುವುದು ನಿಲ್ಲುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.