ಮೊಟ್ಟೆಗೆ ಈ ಕಾಳಿನ ಪುಡಿ ಬೆರೆಸಿ ತೆಂಗಿನೆಣ್ಣೆ ಜೊತೆ ಬಿಳಿ ಕೂದಲಿಗೆ ಹಚ್ಚಿದ್ರೆ.. 10 ನಿಮಿಷದಲ್ಲೇ ಕಪ್ಪಾಗಿ, ಸೊಂಟ ದಾಟಿ ಬೆಳೆಯುವುದು!
ಇತ್ತೀಚಿನ ಕಾಲದಲ್ಲಿ ಅನೇಕ ಜನರಲ್ಲಿ ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗಲು ಪ್ರಾರಂಭಿಸಿದೆ. ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು ಸಾಸಿವೆ ಕಾಳುಗಳನ್ನು ಬಳಸಬಹುದು.
ಸಾಸಿವೆ ಕೂದಲಿಗೆ ಬೇರುಗಳಿಂದ ಪೋಷಣೆಯನ್ನು ನೀಡಿ ಕೂದಲು ಉದುರುವಿಕೆ, ಕೂದಲು ಹಾನಿ ಮತ್ತು ತಲೆಹೊಟ್ಟು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ.
ಸಾಸಿವೆ ಕಾಳುಗಳಲ್ಲಿ ವಿಟಮಿನ್ ಎ ಕಂಡುಬರುತ್ತದೆ. ಇದು ನೆತ್ತಿಯನ್ನು ಪೋಷಿಸಲು ಸಹಾಯ ಮಾಡುವ ಪೋಷಕಾಂಶವಾಗಿದೆ.
ಪ್ರೋಟೀನ್, ಕ್ಯಾಲ್ಸಿಯಂ, ಒಮೆಗಾ 3 ಮತ್ತು ವಿಟಮಿನ್ ಇ ನಂತಹ ಪ್ರಮುಖ ಪೋಷಕಾಂಶಗಳು ಸಾಸಿವೆ ಕಾಳುಗಳಲ್ಲಿ ಕಂಡುಬರುತ್ತವೆ. ಕೂದಲನ್ನು ಬೇರುಗಳಿಂದ ಬಲಪಡಿಸಲು ಮತ್ತು ಕಪ್ಪು ಬಣ್ಣವನ್ನು ಮರಳಿ ತರಲು ಸಾಸಿವೆ ಸಹಾಯಕವಾಗಿದೆ.
ಮೊದಲು ಸಾಸಿವೆಯನ್ನು ನೆನೆಸಿ ನುಣ್ಣಗೆ ರುಬ್ಬಿ, ಬಳಿಕ ಒಣಗಿಸಿ ಪುಡಿ ತಯಾರಿಸಿಕೊಳ್ಳಿ. ಬಳಿಕ ಶುದ್ಧವಾದ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಸಾಸಿವೆ ಪುಡಿ ಹಾಕಿ. ಅದಕ್ಕೆ ಒಂದು ಮೊಟ್ಟೆಯನ್ನು ಹಾಕಿ ಮಿಶ್ರಣ ಮಾಡಿ.
ಮೊಟ್ಟೆ ಮತ್ತು ಸಾಸಿವೆ ಎಣ್ಣೆಯನ್ನು ತೆಂಗಿನೆಣ್ಣೆ ಮತ್ತು ಕ್ಯಾಸ್ಟರ್ ಆಯಿಲ್ ಬೆರೆಸಿ ಹೇರ್ ಮಾಸ್ಕ್ ತಯಾರಿಸಿ. ಈ ಮಾಸ್ಕ್‌ನ್ನು ಬಿಳಿ ಕೂದಲಿಗೆ ಬೇರುಗಳಿಂದ ತುದಿಯವರೆಗೆ ಹಚ್ಚಿ. 20 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿ.
ಸಾಸಿವೆ ಕಾಳಿನ ಪುಡಿಯ ಈ ಹೇರ್ ಮಾಸ್ಕ್ ಬಳಸುವುದರಿಂದ ಬಿಳಿ ಕೂದಲು ಕೆಲವೇ ದಿನಗಳಲ್ಲಿ ಕಪ್ಪಾಗುವುದು.
ಸೂಚನೆ: ಈ ಲೇಖನವು ಮನೆಮದ್ದು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.