Coffee Side Effects: ಕಾಫಿ ಪ್ರಿಯರೇ ಎಚ್ಚರ! ನಿಮಗೂ ಈ ಸಮಸ್ಯೆಗಳಿದ್ದರೆ ಕಾಫಿ ಸೇವನೆ ಪ್ರಾಣಕ್ಕೇ ಕಂಟಕವಾಗಬಹುದು
ನೀವು ಕಾಫಿ ಪ್ರಿಯರೇ! ಹಾಗಿದ್ದರೆ, ಈ ಫೋಟೋ ಗ್ಯಾಲರಿಯನ್ನು ತಪ್ಪದೇ ನೋಡಿ... ಆರೋಗ್ಯ ತಜ್ಞರ ಪ್ರಕಾರ, ಕೆಲವು ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಕಾಫಿ ಸೇವನೆ ಆರೋಗ್ಯಕರ ಎಂದು ಹೇಳಲಾಗುವುದಿಲ್ಲ. ಒಂದೊಮ್ಮೆ ಇವರು ಅಧಿಕ ಕಾಫಿ ಸೇವಿಸಿದರೆ ಅವರ ಪ್ರಾಣಕ್ಕೆ ಕುತ್ತಾಗಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಯಾವ ಆರೋಗ್ಯ ಸಮಸ್ಯೆ ಇರುವವರಿಗೆ ಕಾಫಿ ಸೇವನೆ ಒಳ್ಳೆಯದಲ್ಲ ಎಂದು ನೋಡುವುದಾದರೆ...
ಸಾಮಾನ್ಯ ತಲೆನೋವು, ಮನಃಶಾಂತಿಗೆ ಕಾಫಿ ಸೇವನೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಿದರೂ ಸಹ ಖಿನ್ನತೆ, ಮನೋರೋಗ, ಆತಂಕದಂತಹ ಸಮಸ್ಯೆ ಹೊಂದಿರುವವರಿಗೆ ಕಾಫಿ ಸೇವನೆ ಹಾನಿಕಾರಕ ಎಂದು ಸಾಬೀತುಪಡಿಸಲಿದೆ. ಇದು ಖಿನ್ನತೆ ಇರುವವರಲ್ಲಿ ಪ್ಯಾನಿಕ್ ಅಟ್ಯಾಕ್ಗೆ ಕಾರಣವಾಗಬಹುದು.
ಆರೋಗ್ಯ ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ಕಾಫಿ ಸೇವನೆ ಮಾಡುವುದರಿಂದ ರಕ್ತ ಪರಿಚಲನೆಗೆ ಅಡೆತಡೆ ಉಂಟಾಗಬಹುದು. ಇದು, ಗರ್ಭಿಣಿಯರಿಗೆ ಭ್ರೂಣದ ಬೆಳವಣಿಗೆಯಲ್ಲಿ ತೊಂದರೆ ಉಂಟುಮಾಡಬಹುದು ಎಂದು ಹೇಳಲಾಗುತ್ತದೆ.
ತಲೆನೋವಿನಲ್ಲಿ ಹಲವು ವಿಧಗಳಿವೆ. ಅದರಲ್ಲಿ ಮೈಗ್ರೇನ್ ಕೂಡ ಒಂದು. ವೈದ್ಯರ ಪ್ರಕಾರ, ಮೈಗ್ರೇನ್ ಸಮಸ್ಯೆ ಇರುವವರಿಗೆ ಕಾಫಿ ಸೇವನೆ ಒಳ್ಳೆಯದಲ್ಲ. ನಿಮಗೆಲ್ಲರಿಗೂ ತಿಳಿದಿರುವಂತೆ ಕಾಫಿಯಲ್ಲಿ ಕೆಫಿನ್ ಕಂಡು ಬರುತ್ತದೆ. ಇದು ಮೆದುಳಿನ ನರಗಳ ಕಾರ್ಯಾಚರಣೆಗೆ ಅಡಚಣೆ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿರುವವರು ಕಾಫಿ ಸೇವನೆಯನ್ನು ತಪ್ಪಿಸುವಂತೆ ಸಲಹೆ ನೀಡಲಾಗುತ್ತದೆ.
ಆಸ್ಟಿಯೊಪೊರೋಸಿಸ್ ಮೂಳೆಗಳಿಗೆ ಸಂಬಂಧಿಸಿದ ಒಂದು ಕಾಯಿಲೆ. ಈ ಸಮಸ್ಯೆ ಹೊಂದಿರುವವರಲ್ಲಿ ಮೂಳೆಗಳು ಕ್ರಮೇಣ ದುರ್ಬಲಗೊಳ್ಳುತ್ತವೆ. ಇದಕ್ಕೆ ಬಹುಮುಖ್ಯ ಕಾರಣ ದೇಹದಲ್ಲಿನ ಕ್ಯಾಲ್ಸಿಯಂ ಕೊರತೆ ಕೊರತೆ. ಕಾಫಿ ಸೇವನೆಯಿಂದ ಇದರಲ್ಲಿರುವ ಕೆಫಿನ್ ದೇಹದಲ್ಲಿ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ, ಆಸ್ಟಿಯೊಪೊರೋಸಿಸ್ ಸಮಸ್ಯೆ ಇರುವವರಿಗೆ ಕಾಫಿ ಸೇವನೆಯನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ.
ಹೈ ಬಿಪಿ ಸಮಸ್ಯೆ ಇರುವವರಿಗೂ ಕೂಡ ಕಾಫಿ ಸೇವನೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ವಾಸ್ತವವಾಗಿ, ಕಾಫಿ ಸೇವನೆಯಿಂದ ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗುವುದರಿಂದ ಇದು ಹೃದಯ ಸಂಬಂಧಿ ಕಾಯಿಲೆಗಳಿಗೂ ಎಡೆಮಾಡಿಕೊಡಬಹುದು. ಹಾಗಾಗಿ, ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಕಾಫಿ ಸೇವನೆಯನ್ನು ತಪ್ಪಿಸಿ.
ಸೂಚನೆ : ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.