Coffee For Weight Loss: ಕಾಫಿ ಕುಡಿದ್ರೆ ಸಾಕು ತೂಕ ಇಳಿಯೋದಷ್ಟೇ ಅಲ್ಲ ಬೆಲ್ಲಿ ಸ್ಲಿಮ್ ಆಗುತ್ತೆ...!
ಕಾಫಿಯಲ್ಲಿ ಚಯಾಪಚಯವನ್ನು ಹೆಚ್ಚಿಸುವ ನೈಸರ್ಗಿಕ ಉತ್ತೇಜಕ ಕೆಫಿನ್ ಇದೆ. ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ ಎಂದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ.
ಕಾಫಿ ನರಮಂಡಲವನ್ನು ಉತ್ತೇಜಿಸುವ ಕಾರ್ಯನಿರ್ವಹಿಸುತ್ತದೆ. ಕಾಫಿ ಕುಡಿಯುವುದರಿಂದ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು.
ಕಾಫಿಯಲ್ಲಿರುವ ಕೆಫಿನ್ ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಸುಡುವ ಮೂಲಕ ಹೆಚ್ಚಿನ ಕ್ಯಾಲೋರಿ ಬರ್ನ್ ಮಾಡಲು ಸಹಾಯಕವಾದ ಪಾನೀಯವಾಗಿದೆ.
ಕಾಫಿ ಸೇವನೆಯಿಂದ ದೇಹದಲ್ಲಿ ಶಕ್ತಿಯ ವೆಚ್ಚ ಹೆಚ್ಚಾಗುತ್ತದೆ. ಇದರಿಂದಾಗಿ ಕ್ಯಾಲೋರಿ ಸುಲಭವಾಗಿ ಕರಗುತ್ತದೆ.
ನಿಯಮಿತ ಕಾಫಿ ಸೇವನೆಯು ಇನ್ಸುಲಿನ್ ಮತ್ತು ಲೆಪ್ಟಿನ್ ನಂತಹ ಚಯಾಪಚಯ ಹಾರ್ಮೋನುಗಳ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ಸಕ್ಕರೆ ಹಾಕದೆ ಕಾಫಿ ಕುಡಿಯುವುದರಿಂದ ಮೆದುಳಿನಲ್ಲಿ ಡೋಪಮೈನ್ ಮತ್ತು ಸಿರೊಟೋನಿನ್ ನಂತಹ ಹಾರ್ಮೋನುಗಳನ್ನು ಬಿಡುಗಡೆ ಮಾಡುವ ಮೂಲಕ ಇದು ಮನಸ್ಸಿನ ನೆಮ್ಮದಿಗೆ ಸಹಾಯ ಮಾಡುತ್ತದೆ.
ದಿನಕ್ಕೆ ಸಕ್ಕರೆ ಹಾಕದೆ ಎರಡು ಕಪ್ ಕಾಫಿ ಕುಡಿಯುವುದರಿಂದ ಸುಲಭವಾಗಿ ತೂಕ ಇಳಿಕೆಯಾಗುತ್ತದೆ. ಡೊಳ್ಳು ಹೊಟ್ಟೆ ಕರಗಿ ಚಪ್ಪಟೆಯಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.