ಶತ್ರುವಿನ ರಾಶಿಯಲ್ಲಿ ಗ್ರಹಗಳ ಸೇನಾಪತಿಯ ವಾಸ, ಧನಹಾನಿಯ ಯೋಗ, ಈ ಜನರು ಎಚ್ಚರದಿಂದಿರಬೇಕು!

Fri, 17 Mar 2023-12:03 pm,

ಮಿಥುನ ರಾಶಿ- ಮಂಗಳನ ಮಿಥುನ ಗೋಚರ ಮಿಥುನ ರಾಶಿಯ ಜನರ ಪಾಲಿಗೆ ಹಾನಿಕಾರಕವೆಂದು ಸಾಬೀತಾಗಲಿದೆ. ಏಕೆಂದರೆ ಮಂಗಳನು ​​ನಿಮ್ಮ ರಾಶಿಯ ಲಗ್ನ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲೀ ನಿಮ್ಮ ಆತ್ಮವಿಶ್ವಾಸದಲ್ಲಿ ಕೊರತೆ ಎದ್ದು ಕಾಣಲಿದೆ. ಆದಷ್ಟು, ಜಗಳಗಳು ಅಥವಾ ವಾದಗಳಿಂದ ನಿಮ್ಮನ್ನು ನೀವು ದೂರವಿಡಿ. ವ್ಯಾಪಾರದಲ್ಲಿ ಪಾರ್ಟ್ನರ್ಶಿಪ್ ಸಹ ತಪ್ಪಿಸಿ. ಅರ್ಥಾತ್  ಈಗಲೇ ಹೊಸ ಕೆಲಸ ಶುರು ಮಾಡಬೇಡಿ. ಅಲ್ಲದೆ, ಆಸ್ತಿಯಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ನಷ್ಟವಾಗಬಹುದು. ಈ ಅವಧಿಯಲ್ಲಿ ಸಂಗಾತಿಯೊಂದಿಗೆ ವಿವಾದ ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ನಿರಂತರ ವಾದಗಳನ್ನು ತಪ್ಪಿಸಿ.  

ಕರ್ಕ ರಾಶಿ- ಮಂಗಳನ ಮಿಥುನ ಗೋಚರ ನಿಮ್ಮ ಪಾಲಿಗೂ ಕೂಡ ಹಾನಿಕಾರಕವೆಂದು ಸಾಬೀತಾಗಲಿದೆ. ಏಕೆಂದರೆ ಮಂಗಳನು ​​ನಿಮ್ಮ ರಾಶಿಯಿಂದ ದ್ವಾದಶ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಇದು ನಷ್ಟ ಮತ್ತು ವೆಚ್ಚದ ಸ್ಥಳವೆಂದು ಪರಿಗಣಿಸಲಾಗಿದೆ. ಹೀಗಾಗಿ  ನೀವು ಈ ಅವಧಿಯಲ್ಲಿ ಅನಗತ್ಯವಾಗಿ ಖರ್ಚು ಮಾಡಬಹುದು. ಇದರಿಂದಾಗಿ ನಿಮ್ಮ ಬಜೆಟ್ ಹಾಳಾಗಬಹುದು. ಅಲ್ಲದೆ, ನೀವು ಅನಗತ್ಯ ದಣಿವು ಮತ್ತು ಓಡಾಟವನ್ನು ಎದುರಿಸಬೇಕಾಗಬಹುದು. ರೋಗಗಳಿಂದ ದೂರವಿರಿ. ವಹಿವಾಟು ಮಾಡುವಾಗ ಜಾಗರೂಕರಾಗಿರಿ. ಇಲ್ಲದಿದ್ದರೆ ಹಾನಿ ಸಂಭವಿಸಬಹುದು. ಇನ್ನೊಂದೆಡೆ ಕೆಲಸದ ಸ್ಥಳದಲ್ಲಿ ಚರ್ಚೆಯನ್ನು ತಪ್ಪಿಸಿ. ಇಲ್ಲದಿದ್ದರೆ ಜೂನಿಯರ್ ಮತ್ತು ಸೀನಿಯರ್ ಜೊತೆ ವೈಮನಸ್ಯ ಉಂಟಾಗಬಹುದು.  

ವೃಶ್ಚಿಕ ರಾಶಿ- ಮಿಥುನ ರಾಶಿಯಲ್ಲಿನ ಮಂಗಳ ನಿಮ್ಮ ಮೇಲೆ ಪ್ರತಿಕೂಲ ಪ್ರಭಾವ ಬೀರುವ ಸಾಧ್ಯತೆ ಇದೆ. ಏಕೆಂದರೆ ಮಂಗಳನು ​​ನಿಮ್ಮ ರಾಶಿಯ ಅಷ್ಟಮ ಭಾವದಲ್ಲಿದ್ದಾನೆ.  ಇದನ್ನು ವಯಸ್ಸು ಮತ್ತು ರಹಸ್ಯ ಕಾಯಿಲೆಯ ಸ್ಥಾನ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕು. ದೂರ ಪ್ರಯಾಣ ಮಾಡುವುದನ್ನು ತಪ್ಪಿಸಿ. ಅಲ್ಲದೆ, ಗಾಯಗಳ ಬಗ್ಗೆ ಜಾಗರೂಕರಾಗಿರಿ. ಮತ್ತೊಂದೆಡೆ, ಕುಟುಂಬದ ಹಿರಿಯ ವ್ಯಕ್ತಿಯ ಆರೋಗ್ಯವು ಹದಗೆಡಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ಕಡಿಮೆ ಅದೃಷ್ಟವನ್ನು ಹೊಂದಿರುತ್ತೀರಿ. ಯಾವುದಾದರೊಂದು ವಿಷಯಕ್ಕೆ ಸಂಬಂಧಿಸಿದಂತೆ ಅತ್ತೆ ಮನೆಯವರ ಜೊತೆಗೆ ಕಿರಿಕ್ ಉಂಟಾಗುವ ಸಾಧ್ಯತೆ ಇದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ  

ZEENEWS TRENDING STORIES

By continuing to use the site, you agree to the use of cookies. You can find out more by Tapping this link