EV Fire Safety Tips: ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಹೊತ್ತಿಕೊಳ್ಳಲು ಇವೇ ಪ್ರಮುಖ ಕಾರಣ!
ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಅಗ್ನಿ ಅವಘಡಕ್ಕೆ ನಾನಾ ಕಾರಣಗಳಿರಬಹುದು. ಆದರೆ, ಐದು ಸಾಮಾನ್ಯ ತಪ್ಪುಗಳು ಇದಕ್ಕೆ ಪ್ರಮುಖ ಕಾರಣಗಳು ಎಂದು ಬಣ್ಣಿಸಲಾಗುತ್ತದೆ. ನೀವು ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರಾಗಿದ್ದರೆ ಅಗ್ನಿ ಅವಘಡವನ್ನು ತಪ್ಪಿಸಲು ಯಾವ ವಿಚಾರಗಳ ಬಗ್ಗೆ ಗಮನವಹಿಸಬೇಕು ಎಂದು ತಿಳಿಯಿರಿ.
ಅಪಘಾತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹಾನಿಯಾದಾಗ ಬ್ಯಾಟರಿ ಅಥವಾ ಇಂಧನ ಟ್ಯಾಂಕ್ ಹಾನಿಗೊಳಗಾದರೆ ಬೆಂಕಿ ಹೊತ್ತಿಕೊಳ್ಳಬಹುದು.
ಎಲೆಕ್ಟ್ರಿಕ್ ಸ್ಕೂಟರ್‌ನ ದುರ್ಬಳಕೆಯೂ ಸಹ ಸ್ಕೂಟರ್ ಹೊತ್ತಿ ಉರಿಯಲು ಕಾರಣವಾಗಬಹುದು. ಇದರಲ್ಲಿ ಭಾರವಾದ ವಸ್ತುಗಳನ್ನು ಸಾಗಿಸುವುದು, ಒರಟಾದ ರಸ್ತೆಗಳಲ್ಲಿಬಳಸುವುದು, ಬ್ಯಾಟರಿ ಮತ್ತು ಮೇಲೆ ಒತ್ತಡ ಉಂಟುಮಾಡಬಹುದು. ಇದರಿಂದ ಓವರ್ ಹೀಟ್ ಆಗಿ ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿಯಬಹುದು.
ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸುವಾಗ ಕಳಪೆ ಸಂಪರ್ಕಗಳು, ಕಳಪೆ ವೈರಿಂಗ್ ಅಥವಾ ದೋಷಪೂರಿತ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಬಳಸಿದ್ದರೆ ಇದೂ ಕೂಡ ಸ್ಕೂಟರ್ ಬೆಂಕಿ ಅನಾಹುತಕ್ಕಿಡಾಗಲು ಕಾರಣವಾಗಬಹುದು.
ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜ್ ಮಾಡುವಾಗ ಮಾಡುವ ಕೆಲವು ತಪ್ಪುಗಳು ಕೂಡ ಸ್ಕೂಟರ್ ಹೊತ್ತಿ ಉರಿಯಲು ಕಾರಣವಾಗಬಹುದು. ಇದರಲ್ಲಿ ದೀರ್ಘಕಾಲದವರೆಗೆ ಚಾರ್ಜ್ ಮಾಡುವುದು, ತಪ್ಪಾದ ಚಾರ್ಜರ್ ಅನ್ನು ಬಳಸುವುದು ಅಥವಾ ದೋಷಪೂರಿತ ಚಾರ್ಜಿಂಗ್ ಪೋರ್ಟ್ ಬಳಕೆ ಬೆಂಕಿಗೆ ಕಾರಣವಾಗಬಹುದು.
ಕೆಟ್ಟ ಬ್ಯಾಟರಿ ಬಳಕೆ ಕೂಡ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಅಗ್ನಿ ಅನಾಹುತಕ್ಕೆ ಸಾಮಾನ್ಯ ಕಾರಣವಾಗಿದೆ. ಕೆಟ್ಟ ಬ್ಯಾಟರಿಗಳು ಚಾರ್ಜ್ ಆದಾಗ ಬ್ಯಾಟರಿ ಉಬ್ಬಿಕೊಳ್ಳುವುದು, ಸೋರಿಕೆಯಾಗುವುದರಿಂದ ಶಾರ್ಟ್ ಸರ್ಕ್ಯೂಟ್ ಮತ್ತು ಬೆಂಕಿಗೆ ಕಾರಣವಾಗುತ್ತದೆ.