ಒಂದು ಕಪ್ ಮೊಸರು ಸಾಕು ಬ್ಲಡ್ ಶುಗರ್ ಕಂಟ್ರೋಲ್ ನಲ್ಲಿ ಇಡಲು !ಒಮ್ಮೆ ಹೀಗೆ ಸೇವಿಸಿ ನೋಡಿ !

Tue, 27 Aug 2024-2:52 pm,

ಮಧುಮೇಹದಲ್ಲಿ ಬ್ಲಡ್ ಶುಗರ್ ಏರದಂತೆ ಎಚ್ಚರ ವಹಿಸುವುದು ಬಹಳ ಅವಶ್ಯಕ. ಬ್ಲಡ್ ಶುಗರ್ ಏರು ಪೇರಾಗುವುದಕ್ಕೆ ನಾವು ಸೇವಿಸುವ ಆಹಾರವೇ ಕಾರಣ. 

ನಾವು ಸೇವಿಸುವ ಆಹಾರದಿಂದಲೇ ಮಧುಮೇಹವನ್ನು ಸಂಪೂರ್ಣವಾಗಿ  ನಿಯಂತ್ರಣದಲ್ಲಿ ಕೂಡಾ ಇಟ್ಟುಕೊಳ್ಳಬಹುದು.ಬ್ಲಡ್ ಶುಗರ್  ಹೈ ಆಗದಂತೆ ಕಾಪಾಡಿಕೊಳ್ಳಬೇಕು ಎಂದಾದರೆ ಮೊಸರು ಸೇವಿಸಬೇಕು.

ಮೊಸರಿನಲ್ಲಿ ಕ್ಯಾಲ್ಸಿಯಂ,ಪ್ರೋಟೀನ್, ವಿಟಮಿನ್ ಬಿ, ಮೆಗ್ನೀಸಿಯಮ್, ರಂಜಕ ಮತ್ತು ಪೊಟ್ಯಾಸಿಯಮ್ ನಂಥಹ ಪೋಷಕಾಂಶಗಳು ಸಮೃದ್ದವಾಗಿದೆ. ಇದು ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುವಲ್ಲಿ ಮೊಸರು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಒಂದು ಕಪ್ ನಿತ್ಯ ಸೇವಿಸುವುದು ಒಳ್ಳೆಯದು.   

ವಾರಕ್ಕೆ ಎರಡು ಬಾರಿಯಾದರೂ ಒಂದು ಕಪ್ ಮೊಸರು ತಿನ್ನುವ ಮೂಲಕ ಮಧುಮೇಹವನ್ನು ಶಾಶ್ವತವಾಗಿ ದೂರ ಇಡಬಹುದು ಎನ್ನುತಾರೆ ತಜ್ಞರು.

ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE KANNADA NEWS ಅದನ್ನು ಅನುಮೋದಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link