ಒಣದ್ರಾಕ್ಷಿಯನ್ನು ಈ ರೀತಿ ಸೇವಿಸಿದರೆ Junk Food Craving ಆಗುವುದೇ ಇಲ್ಲವಂತೆ
ನೀವು ಕೂಡಾ ಜಂಕ್ ಫುಡ್ ತಿನ್ನಲು ಹಂಬಲಿಸುತ್ತಿದ್ದರೆ, ಕೇವಲ ಒಂದು ಒಣದ್ರಾಕ್ಷಿಯನ್ನು ಬಾಯಿಗೆ ಹಾಕಿಕೊಳ್ಳಿ. ಈ ಒಣ ದ್ರಾಕ್ಷಿಯನ್ನು ನಿಧಾನವಾಗಿ ತಿನ್ನಿ. ಹೀಗೆ ಮಾಡುವುದರಿಂದ ನಿಧಾನವಾಗಿ ಜಂಕ್ ಫುಡ್ ತಿನ್ನುವ ಬಯಕೆ ಕಡಿಮೆಯಾಗುತ್ತದೆಯಂತೆ.
ಒಣದ್ರಾಕ್ಷಿ ತಿನ್ನುವಾಗ, ಬಾಯಿಗೆ ಹಾಕಿದ ಕೂಡಲೇ ಹಾಗೇ ತಿಂದು ಮುಗಿಸಬೇಡಿ. ನಿಧಾನವಾಗಿ ತಿನ್ನಿ. ತಿನ್ನುವಾಗ ನಿಮ್ಮ ಗಮನ ಣ ದ್ರಾಕ್ಷಿ ತಿನ್ನುವ ಮೇಲೆಯೇ ಇರಲಿ.
ಒಣದ್ರಾಕ್ಷಿ ಸೇವಿಸುವುದರಿಂದ ಬಹಳಷ್ಟು ಸಮಯದವರೆಗೆ ಹಸಿವಾಗುವುದಿಲ್ಲ. ಒಣದ್ರಾಕ್ಷಿಯಲ್ಲಿರುವ ಲೆಪ್ಟಿನ್, ಥರ್ಮೋಜೆನೆಸಿಸ್ ಪ್ರಕ್ರಿಯೆಯನ್ನು ಹೆಚ್ಚಿಸುವ ಮೂಲಕ ಕೊಬ್ಬು ನಿವಾರಿಸುವ ಕೆಲಸ ಮಾಡುತ್ತದೆ.
ಇನ್ನು ಒಣದ್ರಾಕ್ಷಿಯಲ್ಲದೆ, ಬಾಳೆಹಣ್ಣು ಮತ್ತು ಹಸಿರು ಸೇಬು ಕೂಡಾ, ಜಂಕ್ ಫುಡ್ ಮೇಲಿನ Craving ಅನ್ನು ಕಡಿಮೆ ಮಾಡುತ್ತದೆ.