ಬೆಳಗಿನ ಉಪಹಾರಕ್ಕೆ ಈ ವಸ್ತುಗಳನ್ನು ಸೇವಿಸಿದರೆ ಒಂದೇ ವಾರದಲ್ಲಿ ತೂಕ ಇಳಿಕೆಯಾಗುವುದು ಗ್ಯಾರಂಟಿ!
ತೂಕ ಇಳಿಸಿಕೊಳ್ಳಬೇಕಾದರೆ ಬೆಳಗಿನ ಉಪಾಹಾರಕ್ಕಾಗಿ ಅವಲಕ್ಕಿ ಸೇವಿಸಬೇಕು. ಇದು ತಿನ್ನಲು ತುಂಬಾ ಹಗುರ ಮತ್ತು ಜೀರ್ಣಿಸಿಕೊಳ್ಳಲು ಸುಲಭ. ಅವಲಕ್ಕಿಯ ಪೌಷ್ಟಿಕಾಂಶ ಹೆಚ್ಚಿಸಲು, ಅದಕ್ಕೆ ಸಾಕಷ್ಟು ತರಕಾರಿಗಳನ್ನು ಸೇರಿಸಬಹುದು. ಇದನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಪೌಷ್ಟಿಕಾಂಶ-ಭರಿತ ಹೆಸರು ಬೇಳೆ ದೋಸೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್ ಮತ್ತು ಪ್ರೊಟೀನ್ ಹೇರಳವಾಗಿ ಕಂಡು ಬರುತ್ತದೆ. ಹೆಸರು ಬೇಳೆ ದೋಸೆ ತಯಾರಿಸುವಾಗ ಅದಕ್ಕೆ ತರಕಾರಿಗಳು ಮತ್ತು ಚೀಸ್ ಸೇರಿಸಬಹುದು.
ಪ್ರೋಟೀನ್ ಭರಿತ ಮೊಟ್ಟೆಯು ತೂಕ ಇಳಿಸಲು ಸಹಾಯ ಮಾಡುತ್ತದೆ. ಬೆಳಗಿನ ಉಪಾಹಾರದಲ್ಲಿ ಬೇಯಿಸಿದ ಮೊಟ್ಟೆ, ಮೊಟ್ಟೆ ಸ್ಯಾಂಡ್‌ವಿಚ್, ಆಮ್ಲೆಟ್ ಅಥವಾ ಎಗ್ ಭುರ್ಜಿಯನ್ನು ಸೇವಿಸಬಹುದು. ಬೆಳಗಿನ ಉಪಾಹಾರಕ್ಕಾಗಿ ಮೊಟ್ಟೆ ತಿನ್ನುವುದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಓಟ್ಸ್ ಫೈಬರ್ ನಲ್ಲಿ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮಾತ್ರವಲ್ಲದೆ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ ಮತ್ತು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಡಿಮೆ ಕೊಬ್ಬಿನ ಹಾಲು, ಕೆಲವು ಹಣ್ಣುಗಳು ಮತ್ತು ಬೀಜಗಳನ್ನು ಸೇರಿಸುವ ಮೂಲಕ ಓಟ್ಸ್ ಅನ್ನು ತಿನ್ನಬಹುದು.
ತೂಕ ಇಳಿಸಿಕೊಳ್ಳಲು ಬಯಸಿದರೆ, ಇಡ್ಲಿ ಕೂಡಾ ಉತ್ತಮ ಆಯ್ಕೆಯಾಗಿದೆ. ಇದು ಜೀವಸತ್ವಗಳು, ಫೈಬರ್ ಮತ್ತು ಖನಿಜಗಳನ್ನು ಹೇರಳವಾಗಿ ಹೊಂದಿರುತ್ತದೆ. ಇದನ್ನು ಜೀರ್ಣಿಸಿಕೊಳ್ಳುವುದು ಸುಲಭ. ಇಡ್ಲಿಯನ್ನು ಹೆಚ್ಚು ಆರೋಗ್ಯಕರವಾಗಿಸಲು, ನೀವು ಅದಕ್ಕೆ ಕ್ಯಾರೆಟ್, ಕ್ಯಾಪ್ಸಿಕಂ, ಈರುಳ್ಳಿ ಮತ್ತು ಟೊಮೆಟೊದಂತಹ ತರಕಾರಿಗಳನ್ನು ಸೇರಿಸಬಹುದು.