ಬ್ಲಡ್ ಶುಗರ್‌ನ್ನು ಚಿಟಿಕೆಯಲ್ಲೇ ನಾರ್ಮಲ್‌ಗೊಳಿಸುವಷ್ಟು ಶಕ್ತಿಶಾಲಿ ಹಣ್ಣು... ಒಂದೇ ಒಂದು ತುಂಡು ತಿಂದರೂ ಸಾಕು ಸೊಂಟದ ಬೊಜ್ಜು ಮೇಣದಂತೆ ಕರಗುವುದು
ಪ್ಯಾಶನ್ ಫ್ರೂಟ್ ವಿಟಮಿನ್ ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ. ಪ್ರತಿನಿತ್ಯ ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಸ್ಥೂಲಕಾಯತೆಯಂತಹ ಸಮಸ್ಯೆಗಳನ್ನು ಸಹ ಇದು ಪರಿಹರಿಸುತ್ತದೆ. ಈ ಹಣ್ಣು ಸಕ್ಕರೆ ಕಾಯಿಲೆ ಇರುವವರಿಗೆ ಮಾತ್ರವಲ್ಲ ಕೊಲೆಸ್ಟ್ರಾಲ್ ಇರುವವರಿಗೂ ಒಳ್ಳೆಯದು.
ಮಧುಮೇಹಿಗಳಿಗೆ ಪ್ಯಾಶನ್ ಹಣ್ಣು ತುಂಬಾ ಒಳ್ಳೆಯದು. ಇದರ ಗ್ಲೈಸೆಮಿಕ್ ಇಂಡೆಕ್ಸ್ 30. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಹೆಚ್ಚಳದ ದರವನ್ನು ಕಡಿಮೆ ಮಾಡುತ್ತದೆ.
ಪ್ಯಾಶನ್ ಫ್ರೂಟ್‌ನಲ್ಲಿ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾರೊಟಿನಾಯ್ಡ್‌ಗಳು, ಪಾಲಿಫಿನಾಲ್‌ಗಳಿವೆ. ಇವು ಮಧುಮೇಹಿಗಳಿಗೆ ಒಳ್ಳೆಯದು.
ಪ್ಯಾಶನ್ ಹಣ್ಣು ಮತ್ತು ಎಲೆಗಳ ರಸವನ್ನು ಸೇವಿಸುವುದರಿಂದ ನಿದ್ರಾಹೀನತೆ ನಿವಾರಣೆಯಾಗುತ್ತದೆ. ಈ ಎಲೆಗಳ ಕಷಾಯದಲ್ಲಿ ಆಲ್ಕಲಾಯ್ಡ್ ಇರುವ ಕಾರಣದಿಂದಾಗಿ ನಿದ್ರೆಯನ್ನು ಪ್ರೇರೇಪಿಸುತ್ತದೆ. ದೇಹದಲ್ಲಿ ಚಯಾಪಚಯವನ್ನು ಬಲಪಡಿಸಲು ಮತ್ತು ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ಇದು ಕ್ಯಾನ್ಸರ್ ವಿರೋಧಿ ಗುಣಗಳನ್ನು ಸಹ ಹೊಂದಿದೆ.
ಪ್ಯಾಶನ್ ಹಣ್ಣು ಪೊಟ್ಯಾಸಿಯಮ್ ಮತ್ತು ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುತ್ತದೆ. ಇವು ಹೃದಯಕ್ಕೆ ತುಂಬಾ ಒಳ್ಳೆಯದು. ಈ ಹಣ್ಣನ್ನು ತಿನ್ನುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಲ್ಲಿರುವ ಪಿಸೆಟಾನಾಲ್ ಮತ್ತು ಸ್ಸಿರ್ಪುಸಿನ್ ಬಿ ಎಂಬ ಸಂಯುಕ್ತ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.