ಚಹಾದೊಂದಿಗೆ ಈ ಆಹಾರಗಳ ಸೇವನೆ ಆರೋಗ್ಯಕ್ಕೆ ತುಂಬಾ ಅಪಾಯಕಾರಿ

Thu, 16 Mar 2023-1:25 pm,

ಕೆಲವರು ಸದಾ ಅಲ್ಲದಿದ್ದರೂ ಚಹಾ ಸೇವಿಸಿದ ತಕ್ಷಣ ಐಸ್ ಕ್ರೀಮ್ ತಿನ್ನುವುದನ್ನು ಇಷ್ಟಪಡುತ್ತಾರೆ. ಆದ್ರೆ, ಇದರಿಂದ ನಿಮ್ಮ ಆರೋಗ್ಯ ಹದಗೆಡಬಹುದು ಎಂದು ನಿಮಗೆ ತಿಳಿದಿದೆಯೇ? ವಾಸ್ತವವಾಗಿ, ಚಹಾ ಶಾಖದ ಪದಾರ್ಥವಾಗಿದ್ದು, ಹೆಸರೇ ಸೂಚಿಸುವಂತೆ ಐಸ್ ಕ್ರೀಮ್ ಶೀತ ಪ್ರಭಾವವನ್ನು ಹೊಂದಿರುತ್ತದೆ. ಇವೆರಡನ್ನೂ ಒಟ್ಟಿಗೆ ಸವಿಯುವುದರಿಂದ ಉದಾರ ಸಂಬಂಧಿತ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು.

ಕೆಲವರಿಗೆ ಚಹಾ ಜೊತೆಗೆ ಡ್ರೈ ಫ್ರೂಟ್ಸ್ ತಿನ್ನುವ ಅಭ್ಯಾಸವಿರುತ್ತದೆ. ಆದರೆ, ಕಬ್ಬಿನಾಂಶವಿರುವ ಆಹಾರಗಳು ಹಾಲಿನೊಂದಿಗೆ ಹೊಂದಿಕೆಯಾಗುವುದಿಲ್ಲ. ಹಾಗಾಗಿ, ಟೀ ಜೊತೆಗೆ ಡ್ರೈ ಫ್ರೂಟ್ಸ್ ಸೇವನೆ ನಿಮ್ಮ ಆರೋಗ್ಯಕ್ಕೆ ಅಪಾಯ ತಂದೊಡ್ಡಬಹುದು. 

ಕೆಲವರು ಟೀ ಜೊತೆಗೆ ಇಲ್ಲವೇ ಟೀ ಕೂಡಿದ ಬೆನ್ನಲ್ಲೇ ಏನಾದರೂ ಹಣ್ಣು ತಿನ್ನುತ್ತಾರೆ. ಆದರೆ, ಇದು ನಿಮ್ಮ ಆರೋಗ್ಯಕ್ಕೆ ಲಾಭದ ಬದಲಿಗೆ ಅಪಾಯವನ್ನುಂಟು ಮಾಡಬಹುದು.

ಟೀ ಜೊತೆ ರುಚಿ ರುಚಿಯಾದ ಖಾರ, ಪಕೋಡ ತಿನ್ನುವುದರ ಮಜಾ ಅದನ್ನು ಸವಿದವರಿಗಷ್ಟೇ ಗೊತ್ತು. ಆದ್ರೆ, ನಿಮ್ಮ ಈ ಅಭ್ಯಾಸ ನಿಮ್ಮನ್ನು ಸ್ಥೂಲಕಾಯತೆಗೆ ಬಲಿಯಾಗುವಂತೆ ಮಾಡಬಹುದು, ಎಚ್ಚರ.

ಕೆಲವರು ಸಲಾಡ್ ಜೊತೆಗೆ ಟೀಯನ್ನು ಕೂಡ ಸೇವಿಸುತ್ತಾರೆ. ಆದರೆ, ಇದು ನಿಮ್ಮ ಹೊಟ್ಟೆಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಹಾಗಾಗಿ ಸಲಾಡ್‌ನ ಜೊತೆ ಎಂದಿಗೂ ಟೀ ಕುಡಿಯಬೇಡಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link