BBK 10: ಸಂಗೀತ, ತನಿಷ ಅಲ್ಲ… ಬಿಗ್’ಬಾಸ್ ಇತಿಹಾಸದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿರೋದು ಈ ಸ್ಪರ್ಧಿ! ಇವರೇ ಈ ಬಾರಿಯ ವಿನ್ನರ್!
ಕನ್ನಡ ಕಿರುತೆರೆಯ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಇದೀಗ ಅಂತಿಮ ಹಂತಕ್ಕೆ ಬಂದಿದೆ. ಕಳೆದ ದಿನ ಈಗಾಗಲೇ ಎಲಿಮಿನೇಟ್ ಆಗಿ ಹೊರಬಂದಿದ್ದ ಕೆಲ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು.
ಸ್ನೇಹಿತ್, ನೀತು, ರಕ್ಷಕ್ ಹೀಗೆ ಕೆಲ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಬಿಗ್ ಶಾಕ್ ನೀಡಿದ್ದರು. ಇನ್ನು ಇದಕ್ಕೂ ಮೊದಲು ತುಕಾಲಿ ಸಂತೋಷ್ ಅವರು ವಿನಯ್ ಅವರ ಬಳಿ, ಕಾರ್ತಿಕ್ ಆಟದ ಬಗ್ಗೆ ಮಾತನಾಡುತ್ತಿದ್ದರು. ಮೊದಲ ವಾರದಲ್ಲಿ ಭಾರೀ ಹವಾ ಕ್ರಿಯೇಟ್ ಮಾಡಿದ್ದರು ಕಾರ್ತಿಕ್.
ಅಂದಹಾಗೆ ಬಿಗ್ ಬಾಸ್ ಇತಿಹಾಸದಲ್ಲೇ ಅಚ್ಚರಿಯ ಘಟನೆಯೊಂದು ನಡೆದಿದೆ. ಅದೇನೆಂದರೆ, ಓರ್ವ ಸ್ಪರ್ಧಿ ಟ್ವಿಟ್ಟರ್’ನಲ್ಲಿ ಅತಿ ಹೆಚ್ಚು ಟ್ರೆಂಡಿಂಗ್ ಆಗಿರೋದು ಮಾತ್ರವಲ್ಲ, ಈತನೇ ಈ ಬಾರಿಯ ವಿನ್ನರ್ ಆಗುವಂತಹ ಅರ್ಹ ಸ್ಪರ್ಧಿ ಎಂಬ ಮಾತು ಕೇಳಿಬಂದಿದೆ.
ಬಿಗ್ ಬಾಸ್ ಕನ್ನಡ ಸೀಸನ್ 10ರ ಈ ಸ್ಪರ್ಧಿ ಬೇರಾರು ಅಲ್ಲ, ಕಾರ್ತಿಕ್ ಮಹೇಶ್. ಇವರ ಹೆಸರಿನಲ್ಲಿ ಬರೋಬ್ಬರಿ 331K+ ಟ್ವೀಟ್ ಮಾಡಲಾಗಿದೆ. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಟಾಪ್ 3 ರಲ್ಲಿ ಟ್ರೆಂಡಿಂಗ್’ನಲ್ಲಿದ್ದ ಕಾರ್ತಿಕ್, ಇಡೀ ದೇಶದಲ್ಲಿ ಟಾಪ್ 7 ರಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದರು. ಇದರ ಜೊತೆಗೆ DESERVING WINNER KARTHIK ಎಂಬ ಹ್ಯಾಶ್ ಟ್ಯಾಗ್ ಕ್ರಿಯೇಟ್ ಆಗಿದ್ದು, 200k+ ಮಂದಿ ಬೆಂಬಲ ನೀಡಿ ಟ್ವೀಟ್ ಮಾಡಿದ್ದರು.
ಕಳೆದೆರಡು ವಾರಗಳಲ್ಲಿ ಕಾರ್ತಿಕ್ ಹವಾ ಕಡಿಮೆಯಾಗಿತ್ತು. ಅದಾದ ಬಳಿಕ ಕಿಚ್ಚನ ಕಿವಿಮಾತು ಕೇಳಿದ ಕಾರ್ತಿಕ್, ಮತ್ತೆ ಫಾರ್ಮ್’ಗೆ ಬಂದಿದ್ದಾರೆ.
ಇನ್ನೊಂದೆಡೆ ಪ್ರಸ್ತುತ ಓಟಿಂಗ್ ಲೈನ್ ಅಪ್ ನೋಡುವುದಾದರೆ ಸಂಗೀತಾ, ಪ್ರತಾಪ್, ತನಿಷಾರಿಗಿಂತ ಕಾರ್ತಿಕ್ ತುಂಬಾ ಮುಂದಿದ್ದಾರೆ, ಸೋಶಿಯಲ್ ಮೀಡಿಯಾ ಇನ್’ಸ್ಟಾಗ್ರಾಂನಲ್ಲಿ 175k+ ಫಾಲೋವರ್ ಹೊಂದಿದ್ದರೂ ಸಹ, ಟ್ವಿಟರ್’ನಲ್ಲಿ ಸಖತ್ ಟ್ರೆಂಡ್ ಆಗುತ್ತಿದ್ದಾರೆ.
ಇದುವರೆಗಿನ ಇವರ ಆಟವನ್ನು ಗಮನಿಸಿದರೆ ಈ ಬಾರಿಯ ಟೈಟಲ್ ವಿನ್ನರ್ ಇವರೇ ಆಗುವ ಸಾಧ್ಯತೆ ಇದೆ. ಜೊತೆಗೆ ಮನೆಯೊಳಗೆ ಎಷ್ಟೇ ರಾಜಕೀಯ ನಡೆದರೂ, ಮನೆ ಹೊರಗಡೆ ಕಾರ್ತಿಕ್ ಫ್ಯಾನ್ಸ್ ಸಪೋರ್ಟ್ ಮಾಡುತ್ತಿರೋ ರೇಂಜ್ ಬೇರೆನೇ ಇದೆ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ.