ಬಿಗ್‌ಬಾಸ್‌ 11 ಮನೆಯಲ್ಲಿನ ಸ್ಫರ್ಧಿಗಳು ಒಂದು ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..? ನಂಬರ್‌ ಕೇಳಿದ್ರೆ ನೀವು ಶಾಕ್‌ ಆಗ್ತೀರ

Wed, 16 Oct 2024-7:41 am,

Biggboss 11 Contestants remuneration: ಬಿಗ್‌ಬಾಸ್‌ ಸೀಸನ್‌ 11 ಶುರುವಾಗಿ ಎರಡು ವಾರಗಳು ಕಳೆದಿವೆ, ಮನೆಯಲ್ಲಿನ ಎಲ್ಲಾ ಸ್ಫರ್ಧಿಗಳು ಒಳ್ಳೆಯ ಆಟ ಆಡುತ್ತಿದ್ದಾರೆ. ಆದರೆ, ದೊಡ್ಮನೆ ಎಂಟ್ರಿ ಕೊಟ್ಟಿರುವ ಈ ಸ್ಪರ್ಧಿಗಳು ಒಂದು ವಾರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಅಂತ ನಿಮಗೆ ಗೊತ್ತಾ..? ತಿಳಿಯಲು ಮುಂದೆ ಓದಿ..  

ರಂಜಿತ್‌ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿರುವ ನಟ ರಂಜಿತ್‌ ಒಂದು ವಾರಕ್ಕೆ 20,000ರೂ. ಸಂಭಾವನೆ ಪಡೆಯುತ್ತಾರೆ ಎಂದು ವರಿಯಾಗಿದೆ. 

ತ್ರಿವಿಕ್ರಮ್‌ ನಟ ತ್ರಿವಿಕ್ರಮ್‌ ಬಿಗ್‌ಬಾಸ್‌ ಮನೆಯಲ್ಲಿ ಒಂದು ವಾರಕ್ಕೆ 40,000 ರೂ. ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿದೆ. 

ಧನರಾಜ್‌ ಯೂಟ್ಯೂಬರ್‌ ಧನರಾಜ್‌ ಬಿಗ್‌ಬಾಸ್‌ ಮನೆಯಲ್ಲಿರಲು ಒಂದು ವಾರಕ್ಕೆ 40,000 ರೂ. ಚಾರ್ಜ್‌ ಮಾಡುತ್ತಾರಂತೆ. 

ಧರ್ಮ ಕೀರ್ತಿರಾಜ್‌ ಸ್ಯಾಂಡಲ್‌ವುಡ್‌ ನಟ ಧರ್ಮ ಕೀರ್ತಿರಾಜ್‌ ಅವರು ಒಂದು ವಾರಕ್ಕೆ 50,000 ರೂ. ಸಂಭಾವನೆ ಪಡೆಯುತ್ತಾರಂತೆ.

ಶಿಶೀರ್‌  ಇನ್ನೂ, ಕಿರುತೆರೆ ಖ್ಯಾತಿಯ ಶಿಶೀರ್‌ ಅವರು ಬಿಗ್‌ಬಾಸ್‌ ಮನೆಯಲ್ಲಿ ಒಂದು ವಾರಕ್ಕೆ 50,000 ರೂ. ಸಂಭಾವನೆ ಪಡೆಯುತ್ತಾರೆ ಎಂದು ತಿಳಿದುಬಂದಿದೆ.

ಲಾಯರ್‌ ಜಗದೀಶ್‌ ಲಾಯರ್‌ ಜಗದೀಶ್‌ ಅವರು ಬಿಗ್‌ಬಾಸ್‌ ಮನೆಯಲ್ಲಿರಲು ಒಂದು ವಾರಕ್ಕೆ ರೂ. 60,000 ಚಾರ್ಜ್‌ ಮಾಡುತ್ತಾರಂತೆ. 

ಅನುಷಾ ಇನ್ನೂ, ಅನುಷಾ ವಾರಕ್ಕೆ 70,000 ರೂ. ಚಾರ್ಜ್‌ ಮಾಡುತ್ತಾರೆ ಎಂದು ವಾರದಿಯಾಗಿದೆ.   

ಉಗ್ರಂ ಮಂಜು ಬಿಗ್‌ ಬಾಸ್‌ ಮನೆಯಲ್ಲಿ ವಾರಕ್ಕೆ ಹೆಚ್ಚು ಸಂಭಾವನೆ ಪಡೆಯುವವರಲ್ಲಿ ಉಗ್ರಂ ಮಂಜು ಟಾಪ್‌ ಮೂರನೇ ಸ್ಥಾನದಲ್ಲಿದ್ದು, ಇವರು 70,000 ರೂ ಸಂಭಾವನೆ ಪಡೆಯುತ್ತಿದ್ದಾರೆ. 

ಮೋಕ್ಷಿತ ಪೈ ಇನ್ನೂ, ಕಿರುತೆರೆ ನಟಿ ಮೋಕ್ಷಿತ ಪೈ ಬಿಗ್‌ಬಾಸ್‌ ಮನೆಯಲ್ಲಿರಲು ಒಂದು ವಾರಕ್ಕೆ 80,000 ಚಾರ್ಜ್‌ ಮಾಡುವ ಮೂಲಕ ಟಾಪ್‌ ಎರಡನೇ ಸ್ಥಾನದಲ್ಲಿದ್ದಾರೆ.

ಗೌತಮಿ ಜಾದವ್‌ ನಟಿ ಗೌತಮಿ ಜಾದವ್‌ ಅವರು ಕೂಡ ಮೋಕ್ಷಿತ ಪೈ ಅವರಂತೆ ವಾರಕ್ಕೆ ಬಿಗ್‌ಬಾಸ್‌ ಮನೆಯಲ್ಲಿ 80,000 ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಗಮನಿಸಿ: ಪ್ರಿಯ ಓದುಗರೆ, ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee News Kannada ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link