ಮಳೆಗಾಲದಲ್ಲಿ ಕೀಟಗಳ ನಿವಾರಣೆ ಮಾಡುವುದು ಹೇಗೆ..? ಇಲ್ಲಿವೆ ನೋಡಿ ಸೂಕ್ತ ಸಲಹೆಗಳು
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ತುಳಸಿ, ಲ್ಯಾವೆಂಡರ್, ಅಲೋವೆರಾ, ರೋಸ್ಮರಿ ಮುಂತಾದ ಗಿಡಗಳನ್ನು ಮನೆಯ ಸುತ್ತ ನೆಡುವುದರಿಂದ ಸಣ್ಣ ಸೊಳ್ಳೆಗಳ ಹಾವಳಿಯನ್ನು ತಡೆಗಟ್ಟಬಹುದು.
ಸಿಟ್ರೊನೆಲ್ಲಾ ಒಂದು ಪ್ರಕೃತಿಯ ಕೀಟ ನಿವಾರಕ. ಈ ಎಣ್ಣೆ ಕೀಟಗಳನ್ನು ದೂರವಿಡಲು ಸಹಾಯಕವಾಗಿರುತ್ತದೆ. ಇದನ್ನು ಬಳಸದಿದ್ದರೆ ಸಿಟ್ರೊನೆಲ್ಲಾ ಸುಗಂಧವಿರುವ ಮೇಣದ ಬತ್ತಿಗಳನ್ನು ಬಳಸದರೂ ಕೂಡ ಕೀಟಗಳು ಬರುವುದನ್ನು ತಡೆಯಬಹುದು.
ಸಾಮಾನ್ಯವಾಗಿ ಬಿಳಿ ಬಲ್ಬ್‌ಗಳು ಹೆಚ್ಚು ಕೀಟಗಳನ್ನು ಆಕರ್ಷಿಸುತ್ತವೆ. ಬದಲಿಗೆ, ಕೆಂಪು ಅಥವಾ ಹಳದಿ ಬೆಳಕಿನ ಬಲ್ಬ್‌ಗಳನ್ನು ಬಳಸಿ. ಇವು ಹೆಚ್ಚು ಕೀಟಗಳ ಹಾವಳಿಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಹೊರಗೆ ದೀಪಗಳನ್ನು ಬಳಸಿ. ಮೋಶನ್ ಡಿಟೆಕ್ಟರ್ ದೀಪಗಳೂ ಸಹ ಉತ್ತಮ ಆಯ್ಕೆ.
ಫ್ಲೈ ಮೆಶ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಈ ಮೆಷ್ಗಳನ್ನು ಬಳಸಿ ಸಣ್ಣ ಕೀಟಗಳು ಭಕ್ಷ್ಯಗಳ ಮೇಲೆ ನೇತಾಡದಂತೆ ಮಾಡಬಹುದು.