Dry Coriander Benefits: ಈ 5 ರೋಗಗಳಿಗೆ ರಾಮಬಾಣ ಕೊತ್ತಂಬರಿ ಬೀಜ
ಅಡುಗೆ ಮನೆಯಲ್ಲಿ ಪ್ರಮುಖ ಮಸಾಲೆ ಪದಾರ್ಥವಾಗಿ ಬಳಸಲ್ಪಡುವ ಕೊತ್ತಂಬರಿ ಬೀಜ ಖಾದ್ಯದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಇದು ಆರೋಗ್ಯಕ್ಕೂ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
ಕೊತ್ತಂಬರಿ ಬೀಜದಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿದ್ದು ಇದು ಕೀಲು ನೋವು ಕಡಿಮೆ ಮಾಡುತ್ತದೆ.
ಕೊತ್ತಂಬರಿ ಬೀಜವನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಕೊತ್ತಂಬರಿ ಬೀಜದಲ್ಲಿ ವಿಟಮಿನ್ ಕೆ, ಸೆಲೆನಿಯಮ್ ಸೇರಿದಂತೆ ಹಲವು ಅಂಶಗಳಿದ್ದು ಇದು ಡಯಾಬಿಟಿಸ್ ನಿಯಂತ್ರಣಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.
ಕೊತ್ತಂಬರಿ ಬೀಜಗಳಲ್ಲಿ ವಿಟಮಿನ್‌ಗಳು ಸಮೃದ್ಧವಾಗಿದ್ದು ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಕೊತ್ತಂಬರಿ ಬೀಜದ ಬಳಕೆಯಿಂದ ಒಸಡುಗಳಲ್ಲಿ ಊಟ, ಹಲ್ಲುನೋವು, ಬಾಯಿಯ ದುರ್ವಾಸನೆ ಸೇರಿದಂತೆ ಬಾಯಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.