Coronavirus Impact: ತುರ್ತು ಪರಿಸ್ಥಿತಿಯಲ್ಲಿ ಹಣದ ಅವಶ್ಯಕತೆ ಬಿದ್ದರೆ, ಈ ರೀತಿ ಹಣದ ವ್ಯವಸ್ಥೆ ಮಾಡಿ

Wed, 21 Apr 2021-4:12 pm,

1. ಸ್ಥಿರ ಠೇವಣಿ ಮೇಲೆ ಸಾಲ - ಒಂದು ವೇಳೆ ನೀವು ಕೂಡ ಸ್ಥಿರ ಠೇವಣಿ ಖಾತೆಯಲ್ಲಿ ಹಣವನ್ನು ಹೂಡಿಕೆ ಮಾಡಿದ್ದರೆ. ಅದನ್ನು ನೀವು ಅಡವಿಟ್ಟು ಅದರ ಮಳೆ ಸಾಲ ಪಡೆಯಬಹುದು. ನೀವು ಠೇವಣಿ ಇರಿಸಿರುವ ಹಣದ ಶೇ.90 ರಿಂದ ಶೇ.95 ರಷ್ಟು ಸಾಲವನ್ನು ಪಡೆಯಬಹುದು. ಆಕಸ್ಮಿಕ ಬಂದೊದಗುವ ಹಣಕಾಸಿನ ಮುಗ್ಗಟ್ಟನ್ನು ನಿವಾರಿಸುವ ಇದೊಂದು ಉತ್ತಮ ಮಾರ್ಗವಾಗಿದೆ. ಇದರಲ್ಲಿ ನೀವು ನಿಮ್ಮ FD ಮುರಿಯುವ ಅವಶ್ಯಕತೆ ಬೀಳುವುದಿಲ್ಲ. ಇದರಲ್ಲ್ಲಿ ಮಾರ್ಜಿನ್ ಅಮೌಂಟ್ ಕೂಡ ತುಂಬಾ ಕಡಿಮೆಯಾಗಿರುತ್ತದೆ. ಸಾಮಾನ್ಯವಾಗಿ ಈ ರೀತಿಯ ಸಾಲದ ಮೇಲೆ ಬ್ಯಾಂಕ್ ಗಳು FD ಬಡ್ಡಿದರಕ್ಕಿಂತ ಶೇ.2 ರಷ್ಟು ಹೆಚ್ಚು ಬಡ್ಡಿ ಮಾತ್ರ ಪಡೆಯುತ್ತವೆ.

2. ಷೇರು ಹಾಗೂ ಮ್ಯೂಚವಲ್ ಫಂಡ್ ಗಳ ಮೇಲೆ ಸಾಲ - ಒಂದು ವೇಳೆ ನೀವು ಷೇರು ಅಥವಾ ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದ್ದರೆ, ಇದಕ್ಕಾಗಿ ಮ್ಯೂಚವಲ್ ಫಂಡ್ ಮಾರಾಟ ಮಾಡುವ ಅವಶ್ಯಕತೆ ಇಲ್ಲ. ಸಾಮಾನ್ಯವಾಗಿ ಷೇರು ಹಾಗೂ ಮ್ಯೂಚವಲ್ ಫಂಡ್ ಗಳ ಒಟ್ಟು ಮೊತ್ತದ ಶೇ.50 ರಷ್ಟು ಹಣವನ್ನು ನೀವು ಸಾಲದ ರೂಪದಲ್ಲಿ ಪಡೆಯಬಹುದು. ಉದಾಹರಣೆಗೆ ಒಂದು ವೇಳೆ ನೀವು ಮ್ಯೂಚವಲ್ ಫಂಡ್ ನಲ್ಲಿ 10 ಲಕ್ಷ ಹಣ ಹೂಡಿಕೆ ಮಾಡಿದ್ದರೆ, ರೂ 5 ಲಕ್ಷದವರೆಗೆ ನೀವು ಸಾಲವನ್ನು ಸುಲಭವಾಗಿ ಪಡೆಯಬಹುದು. ಆದರೆ, ಬಡ್ಡಿ ಮಾತ್ರ ಪರ್ಸನಲ್ ಲೋನ್ ರೀತಿಯಲ್ಲೇ ಇರಲಿದೆ.

3. ಪ್ರಿ ಅಪ್ರೂವ್ದ್ ಲೋನ್ - ಒಂದು ವೇಳೆ ನೀವು ವೇತನ ಪಡೆಯುವ ನೌಕರರಾಗಿದ್ದು ಮತ್ತು ನೀವು ಒಂದಿರುವ ಖಾತೆ ಸ್ಯಾಲರಿ ಅಕೌಂಟ್ ಆಗಿದ್ದರೆ. ಆ ಖಾತೆಯ ಮೇಲೆ ನಿಮಗೆ ಪ್ರಿಅಪ್ರೂವ್ದ್ ಲೋನ್ ಸಿಗುತ್ತದೆ. ಬೇಕಾದರೆ ತುರ್ತು ಪರಿಸ್ಥಿತಿ ನೀವು ಇದರ ಲಾಭವನ್ನು ಪಡೆಯಬಹುದು. ಬ್ಯಾಂಕ್ ಗಳು ಇಂತಹ ಸಾಲಗಳ ಮೇಲೆ ಕಡಿಮೆ ಬಡ್ಡಿ ಪಡೆಯುತ್ತವೆ. ಇದಲ್ಲದೆ ಸಾಲದ ಪ್ರಾಸೆಸಿಂಗ್ ಕೂಡ ಬೇಗನೆ ಮುಗಿಯುತ್ತದೆ. ಏಕೆಂದರೆ ಬ್ಯಾಂಕ್ ಗಳಿಗೆ ನಿಮ್ಮ ಉಳಿತಾಯ ಇತಿಹಾಸ, ಸಾಲದ ಇತಿಹಾಸ ಎಲ್ಲವೂ ಮೊದಲೇ ತಿಳಿದಿರುತ್ತದೆ. ಹೀಗಾಗಿ ಈ ರೀತಿಯ ಸಾಲಕ್ಕೆ ದಾಖಲೆಗಳ ಅಗತ್ಯ ಕೂಡ ಕಡಿಮೆ ಬೀಳುತ್ತದೆ ಮತ್ತು ಕೂಡಲೇ ಹಣ ನಿಮ್ಮ ಖಾತೆಗೆ ವರ್ಗಾವಣೆಯಾಗುತ್ತದೆ.

4. ಗೋಲ್ಡ್ ಲೋನ್ - ಒಂದು ವೇಳೆ ನಿಮ್ಮ ಮನೆಯಲ್ಲಿ ಚಿನ್ನದ ಆಭರಣಗಳಿದ್ದರೆ, ಅವುಗಳನ್ನು ಅಡವಿಟ್ಟು ನೀವು ಸಾಲ ಪಡೆಯಬಹುದು. ಇದು ಅತ್ಯಂತ ವೇಗವಾಗಿ ಸಾಲ ಪಡೆಯುವ ಮಾರ್ಗವಾಗಿದೆ. ಇಂತಹ ಸಾಲದ ಮೇಲಿನ ಬಡ್ಡಿ ಕೂಡ ಪರ್ಸನಲ್ ಲೋನ್ ಗಿಂತ ಕಡಿಮೆಯಾಗಿರುತ್ತದೆ. ಏಕೆಂದರೆ ಇದು ಸೆಕ್ಯೂರ್ಡ್ ಸಾಲದ ಶ್ರೇಣಿಗೆ ಸೇರುತ್ತದೆ. ಇದರಲ್ಲಿ ಪ್ರೀಪೇಮೆಂಟ್ ಗಾಗಿ ಫ್ಲೆಕ್ಸಿಬಲ್ ಆಪ್ಶನ್ ಕೂಡ ಬ್ಯಾಂಕ್ ಗಳು ಒದಗಿಸುತ್ತವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link