ಕರೋನಾದಿಂದಾಗಿ ರುಚಿ ಮತ್ತು ಗ್ರಹಿಕೆಯ ಶಕ್ತಿ ಕಳೆದುಕೊಂಡಿದ್ದೀರಾ? ಈ ವಸ್ತುಗಳನ್ನು ಸೇವಿಸಿ
ಕಿತ್ತಳೆ ಕಿತ್ತಳೆಯನ್ನು ಸ್ಪಲ್ಪ ಬಿಸಿ ಮಾಡಿ ನಂತರ ಅದರ ವಾಸನೆಯನ್ನು ತೆಗೆದುಕೊಳ್ಳುತ್ತಾ ಬಂದರೆ ರುಚಿ ಮತ್ತು ವಾಸನೆ ಗ್ರಹಿಕೆ ಶಕ್ತಿಯನ್ನು ಮರಳಿ ಪಡೆಯಬಹುದು. ಈ ಸಮಸ್ಯೆಗೆ ಕಿತ್ತಳೆಯ ಬಳಕೆ ಬಹಳ ಪ್ರಯೋಜನಕಾರಿ ಎನ್ನಲಾಗಿದೆ.
ಬೆಳ್ಳುಳ್ಳಿ ಬೆಳ್ಳುಳ್ಳಿ ಒಂದು ಉತ್ತಮ ಆ್ಯಂಟಿ ವೈರಸ್ ಮತ್ತು ರೋಗ ಪ್ರತಿರೋಧಕವಾಗಿ ಕೆಲಸ ಮಾಡುತ್ತದೆ. ಆರ್ಯುವೇದ ಪ್ರಕಾರ ಬೆಳ್ಳುಳ್ಳಿಗೆ ಮೂಗಿನ ಊತದ ಸಮಸ್ಯೆ ನಿವಾರಿಸುವ ಶಕ್ತಿ ಇದೆ ಎನ್ನುತ್ತಾರೆ. ಬೆಳ್ಳುಳ್ಳಿ ಸೇವನೆಯಿಂದ ಕಳೆದು ಹೋದ ರುಚಿ ಮತ್ತು ವಾಸನೆ ಗ್ರಹಿಕೆ ಶಕ್ತಿಯನ್ನು ಮರಳಿ ಪಡೆಯಬಹುದು. ಬಿಸಿ ನೀರಿಗೆ ಬೆಳ್ಳುಳ್ಳಿ ಎಸಳು ಮತ್ತು ಲಿಂಬೆ ರಸ ಬೆರೆಸಿ ಸೇವಿಸುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ.
ಓಮಕಾಳು ಶೀತ ಹವಾಮಾನ ಮತ್ತು ಅಲರ್ಜಿ ವಿರುದ್ಧ ಹೋರಾಡುವ ಗುಣ ಓಮದಕಾಳಿನಲ್ಲಿ ಇದೆ ಎಂದು ಹೇಳಲಾಗುತ್ತದೆ. ರುಚಿಯಲ್ಲಿ ಸ್ವಲ್ಪ ಕಹಿ ಅನಿಸಿದರೂ ಕಳೆದು ಹೋದ ಬಾಯಿ ರುಚಿ ಮತ್ತು ವಾಸನೆ ಗ್ರಹಿಕೆಯ ಶಕ್ತಿಯನ್ನು ಮರಳಿ ಪಡೆಯಲು ಇದು ಬಹಳ ಸಹಕಾರಿಯಾಗಿದೆ. ಒಂದು ತೆಳುವಾದ ಬಟ್ಟೆ ಅಥವಾ ಟಿಶ್ಯು ಪೇಪರ್ ನಲ್ಲಿ ಓಮದ ಕಾಳನ್ನು ಇಟ್ಟುಕೊಂಡು ಆಗಾಗ ದೀರ್ಘ ಉಸಿರಿನ ಮೂಲಕ ಇದರ ಪರಿಮಳ ತೆಗೆದುಕೊಳ್ಳುವ ಪ್ರಯತ್ನ ಮಾಡಿ.
ಹರಳೆಣ್ಣೆ ಹರಳೆಣ್ಣೆ ಕೂಡಾ ವಾಸನೆ ಗ್ರಹಿಕೆ ಶಕ್ತಿಯನ್ನು ಮತ್ತೆ ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ಆ್ಯಂಟಿ ಓಕ್ಸಿಡೆಂಟ್ ಆಗಿಯೂ ಕೆಲಸ ಮಾಡುತ್ತದೆ. ನೋವು ಮತ್ತು ಅಲರ್ಜಿಯಂಥ ಸಮಸ್ಯೆ ನಿವಾರಣೆಗೆ ಇದು ರಾಮಬಾಣ.