FIFA ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿಗೆ ದಿನಗಣನೆ ಆರಂಭ
FIFA ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ 2018 ಇದೇ ಜೂನ್ 14 ರಿಂದ ರಷ್ಯಾದಲ್ಲಿ ನಡೆಯಲಿದೆ.
ಜೂನ್ 14 ರಿಂದ ಜುಲೈ 15ರವರೆಗೆ ನಡೆಯಲಿರುವ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಪಂದ್ಯಾವಳಿಯಲ್ಲಿ ವಿಶ್ವದ 32 ತಂಡಗಳು ಭಾಗವಹಿಸುತ್ತಿವೆ.
ಫುಟ್ಬಾಲ್ ಕ್ರೀಡೆಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಅರ್ಜೆಂಟೀನಾ ತಂಡವೂ ಕೂಡ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಅಧಿಕ ಗೋಲ್ ಸಾಧಕರಲ್ಲಿ ವಿಶ್ವದ ಎರಡನೇ ಆಟಗಾರರಾಗಿ ಗುರುತಿಸಿಕೊಂಡಿರುವ ಲಿಯೋನೆಲ್ ಮೆಸ್ಸಿಯ ಬಲವೂ ಅರ್ಜೆಂಟೀನಾಕ್ಕಿದೆ.
FIFA ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಮೊದಲ ಪಂದ್ಯಾವಳಿಯು ರಷ್ಯಾ ಮತ್ತು ಸೌದಿ ಅರೇಬಿಯಾ(ಗ್ರೂಪ್ A) ನಡುವೆ ಮಾಸ್ಕೋನಲ್ಲಿ ಸಂಜೆ 4 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯಾವಳಿಯ ಫೈನಲ್ ಪಂದ್ಯ ಜುಲೈ 15 ರಂದು ನಡೆಯಲಿದೆ.
ಈಗಾಗಲೇ ವಿಶ್ವಕಪ್ ಪಂದ್ಯ ವೀಕ್ಷಣೆಗಾಗಿ ಬ್ರೆಸಿಲ್'ನ 60 ಸಾವಿರಕ್ಕೂ ಅಧಿಕ ಫುಟ್ಬಾಲ್ ಪ್ರಿಯರು ರಷ್ಯಾ ಕಡೆಗೆ ಪ್ರಯಾಣ ಬೆಳೆಸಿದ್ದು, ಟಿಕೆಟ್ ಖರೀದಿಸಿರುವುದಾಗಿ ಬ್ರೆಜಿಲ್ ವಿದೇಶಾಂಗ ಸಚಿವ ಅಲೊಯ್ಸಿಯೊ ನುನ್ಸ್ ತಿಳಿಸಿದ್ದಾರೆ.