ಕ್ರಿಕೆಟ್‌ ದಿಗ್ಗಜ ಜಹೀರ್‌ ಖಾನ್‌ ಪತ್ನಿಯನ್ನು ನೋಡಿದ್ದೀರಾ? ಈಕೆ ಭಾರತದ ಸ್ಟಾರ್‌ ಪ್ಲೇಯರ್!‌ ಶಾರುಖ್‌ ಜೊತೆ ನಟಿಸಿದ್ದ ಖ್ಯಾತ ನಟಿ ಕೂಡ ಹೌದು

Fri, 09 Aug 2024-1:51 pm,

ಬಾಲಿವುಡ್ ಸಿನಿಮಾ 'ಚಕ್ ದೇ ಇಂಡಿಯಾ' ಎಲ್ಲರೂ ನೋಡಬೇಕಾದ ಸಿನಿಮಾಗಳಲ್ಲಿ ಒಂದು. ಈ ಸಿನಿಮಾದಲ್ಲಿ ಅತ್ಯುತ್ತಮ ಆಟಗಾರ್ತಿ 'ಪ್ರೀತಿ ಸಬರ್ವಾಲ್' ಆಗಿ ನಟಿಸಿದ್ದ ಸುಂದರಿ ಎಲ್ಲರ ಗಮನ ಸೆಳೆದಿದ್ದರು.

 

ಶಾರುಖ್ ಖಾನ್ ಅಭಿನಯದ 'ಚಕ್ ದೇ ಇಂಡಿಯಾ' ಚಿತ್ರದಲ್ಲಿ 'ಪ್ರೀತಿ ಸಬರ್ವಾಲ್' ಪಾತ್ರವನ್ನು ನಟಿ ಸಾಗರಿಕಾ ಘಾಟ್ಗೆ ನಿರ್ವಹಿಸಿದ್ದಾರೆ. ಚೊಚ್ಚಲ ಚಿತ್ರದಿಂದಲೇ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸಾಗರಿಕಾ ಯಶಸ್ವಿಯಾಗಿದ್ದರು. ಈ ಚಿತ್ರದ ನಂತರ, ಅವರು ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

 

ನಟಿ ಸಾಗರಿಕಾ ಘಾಟ್ಗೆ 8 ಜನವರಿ 1986 ರಂದು ಜನಿಸಿದರು. ಅಂದಹಾಗೆ ಇವರು, ಕೊಲ್ಲಾಪುರದ ಶಾಹು ಮಹಾರಾಜರ ರಾಜಮನೆತನಕ್ಕೆ ಸೇರಿದವರು. ಸಾಗರಿಕಾ ತಂದೆ ವಿಜಯೇಂದ್ರ ಸಿಂಗ್ ಘಾಟ್ಗೆ ಅವರ ತಾಯಿ ಅಂದರೆ ಅಜ್ಜಿ ಸೀತಾ ರಾಜೇ ಘಾಟ್ಗೆ ಇಂದೋರ್‌ʼನ ಮಹಾರಾಜ ತುಕೋಜಿರಾವ್ ಹೋಳ್ಕರ್ III ರ ಮಗಳು.

 

ಸಾಗರಿಕಾ ಎಂಟನೆಯ ವಯಸ್ಸಿನವರೆಗೂ ಕೊಲ್ಲಾಪುರದಲ್ಲಿ ವಾಸಿಸುತ್ತಿದ್ದರು. ಇನ್ನು ವಿಜಯೇಂದ್ರ ಘಾಟ್ಗೆ ಹಿಂದಿ ಚಲನಚಿತ್ರೋದ್ಯಮದ ಪ್ರಸಿದ್ಧ ನಟ.

 

‘ಚಕ್ ದೇ ಇಂಡಿಯಾ’ ಚಿತ್ರದಲ್ಲಿ ನಟಿ ಸಾಗರಿಕಾ ಘಾಟ್ಗೆ ಕ್ರಿಕೆಟಿಗನ ಪ್ರೀತಿಯನ್ನು ತಿರಸ್ಕರಿಸಿದ್ದರು. ಆದರೆ ನಿಜ ಜೀವನದಲ್ಲಿ ಕ್ರಿಕೆಟಿಗನನ್ನೇ ಮದುವೆಯಾಗಿದ್ದಾರೆ.  2017 ರಲ್ಲಿ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಅವರನ್ನು ವಿವಾಹವಾದ ಸಾಗರಿಕಾ ಸುಖಸಂಸಾರ ನಡೆಸುತ್ತಿದ್ದಾರೆ.

 

ಇನ್ನು ಸಾಗರಿಕಾ ಘಾಟ್ಗೆ ರಾಷ್ಟ್ರ ಮಟ್ಟದ ಹಾಕಿ ಆಟಗಾರ್ತಿ.  ಸಿನಿಮಾದಂತೆ, ಸಾಗರಿಕಾ ನಿಜ ಜೀವನದಲ್ಲಿ ರಾಷ್ಟ್ರ ಮಟ್ಟದಲ್ಲಿ ಹಾಕಿ ಆಡಿದ್ದಾರೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link