10ನೇ ಕ್ಲಾಸ್’ನಲ್ಲಿ 3 ಬಾರಿ ಫೇಲ್… ಸರ್ಕಾರಿ ಕೆಲಸ ಬಿಟ್ಟು ಕ್ರಿಕೆಟ್’ಗೆ ಬಂದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ! ಈತ ಜೂ.ಧೋನಿ ಎಂದೇ ಫೇಮಸ್
ಭಾರತ ತಂಡದಿಂದ ಹೊರಗಿದ್ದರೂ ಐಪಿಎಲ್’ನಲ್ಲಿ ಕೃನಾಲ್ ಪಾಂಡ್ಯ ಪ್ರಭಾವ ಹೆಚ್ಚಿದೆ. ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ 8.25 ಕೋಟಿ ರೂಪಾಯಿ ಖರ್ಚು ಮಾಡುವ ಮೂಲಕ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.
ಇನ್ನು ಕೃನಾಲ್ ಪಾಂಡ್ಯ ಲೈಫ್ ಸ್ಟೋರಿ ಸಖತ್ ಇಂಟರೆಸ್ಟಿಂಗ್ ಆಗಿದೆ. ಇವರ ಲೈಫ್ ಸ್ಟೋರಿ ಕೇಳಿದ ಅನೇಕರು, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಸ್ವಲ್ಪಮಟ್ಟಿಗೆ ಹೊಂದಿಕೆಯಾಗುತ್ತದೆ ಎಂದು ಹೇಳುತ್ತಾರೆ.
ಅತ್ಯಂತ ಬಡ ಕುಟುಂಬದಿಂದ ಬಂದಿರುವ ಕೃನಾಲ್ ಒಂದು ಕಾಲದಲ್ಲಿ ಕ್ರಿಕೆಟ್ ತ್ಯಜಿಸುವ ಯೋಚನೆಯನ್ನೂ ಮಾಡಿದ್ದರು. ಭಾರತೀಯ ಅಂಚೆ ಇಲಾಖೆಯ ಸ್ಪೀಡ್ ಪೋಸ್ಟ್ ವಿಭಾಗದಲ್ಲಿ ಕೆಲಸ ಪಡೆದ ಅವರು, ಕೇವಲ ರಿಪೋರ್ಟ್ ಸಲ್ಲಿಕೆ ಮಾಡಬೇಕಿತ್ತು.
ಅಂದಹಾಗೆ ಕೃನಾಲ್ ಪಾಂಡ್ಯ ಅಧ್ಯಯನದಲ್ಲಿ ತುಂಬಾ ವೀಕ್. 10ನೇ ತರಗತಿಯಲ್ಲಿ ಎರಡು-ಮೂರು ಬಾರಿ ಫೇಲ್ ಆಗಿದ್ದೆ ಎಂದು ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದಾರೆ. ಇಷ್ಟಾದರೂ ಕಷ್ಟಪಟ್ಟು 12ನೇ ತರಗತಿವರೆಗೆ ಓದು ಮುಗಿಸಿದ್ದಾರೆ.
ಆದರೆ ಬಳಿಕ ಸರ್ಕಾರಿ ನೌಕರಿಯ ಆಫರ್ ಬಂತು. ಇದರಿಂದ ತಿಂಗಳಿಗೆ 25-30 ಸಾವಿರ ಸಲೀಸಾಗಿ ಸಂಪಾದಿಸಬಹುದು ಎಂದು ಪೋಷಕರಿಗೆ ಭರವಸೆ ನೀಡಿದ ಅವರು, ಆ ಉದ್ಯೋಗಕ್ಕೆ ಸೇರಿಕೊಂಡರು. ಆದರೆ ಆ ಬಳಿಕ ಕ್ರಿಕೆಟ್ ಕಡೆ ಒಲವು ಹೆಚ್ಚಾಗಲು ಪ್ರಾರಂಭಿಸಿತು, ಕಡೆಗೆ ಆ ಉದ್ಯೋಗ ತ್ಯಜಿಸುವತ್ತ ಮುಂದಾದರು.
ಕಿರಿಯ ಸಹೋದರ ಹಾರ್ದಿಕ್ ಪಾಂಡ್ಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡಿದ ಅವಧಿ ಅದು. ಕೃನಾಲ್ ಅವರ ವೃತ್ತಿಜೀವನವು ಏರುಗತಿಯಲ್ಲಿ ಸಾಗುತ್ತಿರಲಿಲ್ಲ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಟ್ರಯಲ್ಸ್’ಗಳು ಉದ್ಯೋಗದ ಸಮಯದಲ್ಲಿ ನಡೆಯಲಿರುವಾಗ ತೊಂದರೆಗಳು ಮತ್ತಷ್ಟು ಹೆಚ್ಚಾದವು.
ಹೀಗಾಗಿ ಅಂಚೆ ಇಲಾಖೆಯ ಪತ್ರವನ್ನು ಹರಿದು ಹಾಕುವ ಮೂಲಕ ತನ್ನ ಜೀವನದಲ್ಲಿ ಬಹುದೊಡ್ಡ ರಿಸ್ಕ್ ತೆಗೆದುಕೊಂಡರು ಕೃನಾಲ್. ಅದಾದ ಬಳಿಕ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ರಿಪೋರ್ಟಿಂಗ್’ಗೆ ಹೋದೆ ಎಂದು ಕ್ರುನಾಲ್ ಕ್ರಿಕ್ ಬಜ್ ಶೋನಲ್ಲಿ ಹೇಳಿದ್ದರು. ಅದೃಷ್ಟಕ್ಕೆ ಅಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು, ಗುಜರಾತ್ ತಂಡದಲ್ಲಿ ಆಯ್ಕೆಯಾದರು.