IPL Auction 2022: ಹರಾಜಿನಿಂದಾಗಿ ರಾತೋ ರಾತ್ರಿ ಕೋಟ್ಯಾಧಿಪತಿಗಳಾದ ಆಟಗಾರರಿವರು
ಈ ಋತುವಿನಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಆರ್‌ಸಿಬಿ ತಂಡ ಉಳಿಸಿಕೊಂಡಿದೆ. ಸಿರಾಜ್ ಈಗ ಐಪಿಎಲ್ ಜೊತೆಗೆ ಭಾರತ ತಂಡದ ಪ್ರಮುಖ ಬೌಲರ್‌ಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಈ ಆಟಗಾರನನ್ನು ಮೊದಲು 2017 ರಲ್ಲಿ 2.6 ಕೋಟಿಗೆ ಖರೀದಿಸಿತ್ತು. ಇದೀಗ ಸಿರಾಜ್ ಅವರನ್ನು ಆರ್‌ಸಿಬಿ ಏಳು ಕೋಟಿಗೆ ಉಳಿಸಿಕೊಂಡಿದೆ.
ಟಿ.ನಟರಾಜನ್ ಅವರ ಕಥೆಯೂ ಹೋರಾಟಗಳಿಂದ ಕೂಡಿದೆ. ಟಿ.ನಟರಾಜನ್ ಅವರು 2017 ರಲ್ಲಿ ಮೊದಲ ಬಾರಿಗೆ ಬಿಡ್ ಮಾಡಿದರು. ಅವರ ಮೂಲ ಬೆಲೆ ಕೇವಲ 10 ಲಕ್ಷ ರೂಪಾಯಿಗಳು. ಆದರೆ ಪಂಜಾಬ್ ಈ ಬೌಲರ್ ಅನ್ನು ಮೂರು ಕೋಟಿಗೆ ತನ್ನೊಂದಿಗೆ ಸೇರಿಸಿಕೊಂಡಿತ್ತು. ನಟರಾಜನ್ ಅವರ ತಾಯಿ ರಸ್ತೆಬದಿಯಲ್ಲಿ ಅಂಗಡಿಗಳಲ್ಲಿ ವ್ಯಾಪಾರ ನಡೆಸುತ್ತಿದ್ದರು. ತಂದೆ ರೈಲ್ವೆ ನಿಲ್ದಾಣದಲ್ಲಿ ಹಮಾಲಿಯಾಗಿ ಕೆಲಸ ಮಾಡುತ್ತಿದ್ದರು.
ಯುವ ವೇಗದ ಬೌಲರ್ ಚೇತನ್ ಸಕರಿಯಾಗೆ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ ಆಟವಾಡುವ ಅವಕಾಶ ಪಡೆದರು. 23 ವರ್ಷದ ಚೇತನ್ ಸಕಾರಿಯಾ ಐಪಿಎಲ್‌ಗೂ ಮುನ್ನ ತನ್ನ ಸಹೋದರನನ್ನು ಕಳೆದುಕೊಂಡಿದ್ದರು. ಆತನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದರು . ನಂತರ ಇತ್ತೀಚೆಗೆ ಅವರ ತಂದೆ ಕೊರೊನಾ ವೈರಸ್‌ನಿಂದ ನಿಧನರಾದರು. ಇದರ ಹೊರತಾಗಿಯೂ, ಐಪಿಎಲ್‌ನಲ್ಲಿ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ಚೇತನ್ ಸಕರಿಯಾ ಅವರನ್ನು ರಾಜಸ್ಥಾನ ಒಂದು ಕೋಟಿ 20 ಲಕ್ಷಕ್ಕೆ ಖರೀದಿಸಿದೆ.
ಯಶಸ್ವಿ ಜೈಸ್ವಾಲ್ ಅವರನ್ನು ರಾಜಸ್ಥಾನ ತಂಡ 4 ಕೋಟಿಗೆ ಉಳಿಸಿಕೊಂಡಿದೆ. ಕಳೆದ ವರ್ಷ ನಡೆದ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ ತಂಡ ಜೈಸ್ವಾಲ್ ಅವರನ್ನು 2.4 ಕೋಟಿಗೆ ಖರೀದಿಸಿತ್ತು. ಯಶಸ್ವಿ ಜೈಸ್ವಾಲ್ ಉತ್ತಮ ಪ್ರದರ್ಶನದಿಂದಾಗಿ ಅವರನ್ನು ಉಳಿಸಿಕೊಳ್ಳಲಾಗಿದೆ. ತನ್ನ ಖರ್ಚುಗಳನ್ನು ಪೂರೈಸಲು, ಈ ಆಟಗಾರ ತನ್ನ ಪ್ರಾಕ್ಟೀಸ್ ನಂತರ ಪಾನಿಪುರಿ ಮಾರುತ್ತಿದ್ದರು.
ಜಮ್ಮು ಮತ್ತು ಕಾಶ್ಮೀರದ ವೇಗಿ ಉಮ್ರಾನ್ ಮಲಿಕ್ ಐಪಿಎಲ್‌ನ ಮೊದಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿದ್ದರು. ಉಮ್ರಾನ್ ಮಲಿಕ್ ಅವರ ವೇಗದ ಗತಿಯನ್ನು ಗಮನದಲ್ಲಿಟ್ಟುಕೊಂಡು ಹೈದರಾಬಾದ್ ತಂಡವು ಈ ಋತುವಿನಲ್ಲಿಯೂ 4 ಕೋಟಿ ನೀಡಿ ಅವರನ್ನು ಉಳಿಸಿಕೊಂಡಿದೆ. ಕಳೆದ ವರ್ಷ ಮಲಿಕ್ ಅವರನ್ನು ಹೈದರಾಬಾದ್ ತಂಡ 20 ಲಕ್ಷಕ್ಕೆ ಖರೀದಿಸಿತ್ತು. ಉಮ್ರಾನ್ ತಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ತರಕಾರಿ ಮಾರುತ್ತಿದ್ದರು.