3000 ಕೋಟಿ ಆಸ್ತಿ, ಒಂದು ಚಿತ್ರಕ್ಕೆ 150 ಕೋಟಿ ಸಂಭಾವನೆ ಪಡೆಯುವ ಸ್ಟಾರ್! ಆದ್ರೆ ಈಗ್ಲೂ ತಂದೆಗೆ ಮುಖ ಕೊಟ್ಟು ಮಾತಾಡಲ್ವಂತೆ ಈ ನಟ
ಬಾಲಿವುಡ್ ಸೂಪರ್ ಸ್ಟಾರ್’ಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಸೇರಿದ್ದಾರೆ. ಫ್ಲಾಪ್ ಚಿತ್ರಗಳು ಬಾಕ್ಸ್ ಆಫೀಸ್’ನಲ್ಲಿ 100 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಚಿತ್ರರಂಗದ ಏಕೈಕ ಸ್ಟಾರ್.
ಸಲ್ಮಾನ್ ಖಾನ್ 3 ದಶಕಗಳಲ್ಲಿ ಕೋಟ್ಯಂತರ ಮೌಲ್ಯದ ಸಂಪತ್ತನ್ನು ಗಳಿಸಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರವೊಂದಕ್ಕೆ 100 ಕೋಟಿ ರೂಪಾಯಿಗಿಂತ ಹೆಚ್ಚು ಶುಲ್ಕವನ್ನು ವಿಧಿಸುತ್ತಾರೆ. ಆದರೆ ಇಂದಿಗೂ ಸಲ್ಮಾನ್ ಖಾನ್ ತಮ್ಮ ತಂದೆ ಸಲೀಂ ಖಾನ್ ಅವರಿಂದ ಪಾಕೆಟ್ ಮನಿ ತೆಗೆದುಕೊಳ್ಳುತ್ತಾರೆ ಎಂದು ತಿಳಿದರೆ ನೀವು ನಂಬುತ್ತೀರಾ? ಈ ಬಗ್ಗೆ ಸಂದರ್ಶನವೊಂದರಲ್ಲಿ ವಿಂದು ದಾರಾ ಸಿಂಗ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಸಿದ್ಧಾರ್ಥ್ ಕಣ್ಣನ್ ಜೊತೆ ಸಂದರ್ಶನದಲ್ಲಿ ಮಾತನಾಡಿದ ವಿಂದು ದಾರಾ ಸಿಂಗ್, ಸಲ್ಮಾನ್ ಖಾನ್ ಬಗ್ಗೆ ಅನೇಕ ಸ್ಟೋರಿಗಳನ್ನು ಹಂಚಿಕೊಂಡಿದ್ದಾರೆ. “ಸಲ್ಮಾನ್ ಖಾನ್ ಬಳಿ ಹಣ ಇರುವುದಿಲ್ಲ. ಅವರ ತಂದೆ ಸಲೀಂ ಖಾನ್’ಗೆ ಪಾಕೆಟ್ ಮನಿ ನೀಡುತ್ತಾರೆ. ಸಲ್ಮಾನ್ ಖಾನ್ ಮತ್ತು ನಾನು ಬಾಲ್ಯದ ಸ್ನೇಹಿತರು. ಸಿನಿಮಾಗಳಿಂದಾಗಿ ನಮ್ಮ ಸಂಬಂಧ ಸೃಷ್ಟಿಯಾಗಿಲ್ಲ. ನಾವು 14-15 ವರ್ಷ ವಯಸ್ಸಿನಿಂದಲೂ ಪರಸ್ಪರ ಪರಿಚಿತರು” ಎಂದು ಹೇಳಿದ್ದಾರೆ
“ಸಲ್ಮಾನ್ ಖಾನ್ ಹೆಚ್ಚು ತಿನ್ನುತ್ತಾರೆ ಮತ್ತು ಹೆಚ್ಚು ವ್ಯಾಯಾಮ ಮಾಡುತ್ತಾರೆ. ಆತ ತುಂಬಾ ಒಳ್ಳೆಯ ವ್ಯಕ್ತಿ. ಅವನೆಂದರೆ ನನಗೆ ಇಷ್ಟ” ಎಂದು ಹೇಳಿದ್ದಾರೆ.
“ಸಲ್ಮಾನ್ ಖಾನ್ ಜನರಿಗೆ ತುಂಬಾ ಸಹಾಯ ಮಾಡುತ್ತಾರೆ. ಸಲೀಂ ಖಾನ್, ಸಲ್ಮಾನ್’ಗೆಂದು ನೀಡಿದ ದುಡ್ಡನ್ನು ಬಡವರಿಗೆ ಹಂಚುತ್ತಿದ್ದರು. ಅವರು ಇಂದಿಗೂ ಬಡವರಿಗೆ ಸಹಾಯ ಮಾಡುತ್ತಾರೆ” ಎಂದಿದ್ದಾರೆ.
ಇಂದಿಗೂ ಸಲೀಂ ಖಾನ್ ತಮ್ಮ ಮಗ ಸಲ್ಮಾನ್ ಖಾನ್’ಗೆ ಪಾಕೆಟ್ ಮನಿ ನೀಡುತ್ತಿದ್ದಾರೆಯೇ ಎಂದು ವಿಂದು ಅವರನ್ನು ಕೇಳಿದಾಗ, “ಸಲ್ಮಾನ್ ಖಾನ್ ಬಳಿ ಖಾಲಿ ಕಾರ್ಡ್ ಮಾತ್ರ ಇದೆ. ಅವನು ಎಂದಿಗೂ ಹಣವನ್ನು ಇಟ್ಟುಕೊಳ್ಳುವುದಿಲ್ಲ. ಇಂದಿಗೂ ಆತನ ತಂದೆ ಪಾಕೆಟ್ ಮನಿ ಕೊಡುತ್ತಾರೆ. ಇಷ್ಟು ವರ್ಷಗಳಲ್ಲಿ ಆತ ಬಡವರಿಗೆ ಎಷ್ಟು ಒಳ್ಳೆಯದನ್ನು ಮಾಡಿದ್ದಾನೆ ಎಂದು ನೀವು ಊಹಿಸಲು ಸಾಧ್ಯವಿಲ್ಲ” ಎಂದಿದ್ದಾರೆ.
ಸಲ್ಮಾನ್ ಖಾನ್ 1988 ರಲ್ಲಿ 'ಬಿವಿ ಹೋ ತೋ ಐಸಿ' ಚಿತ್ರದ ಮೂಲಕ ನಟನಾ ಜಗತ್ತಿಗೆ ಪ್ರವೇಶಿಸಿದ್ದರು. GQ ಇಂಡಿಯಾ ಪ್ರಕಾರ, ಸಲ್ಮಾನ್ ಖಾನ್ ಸುಮಾರು 3000 ಕೋಟಿ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಅಷ್ಟೇ ಅಲ್ಲದೆ ಚಿತ್ರವೊಂದಕ್ಕೆ ಶುಲ್ಕವಾಗಿ 100ರಿಂದ 150 ಕೋಟಿ ರೂ. ಪಡೆಯುತ್ತಾರಂತೆ. ಆದರೆ ಅವರಿಗೆ ತಮ್ಮ ತಂದೆಯ ಮೇಲಿರುವ ಅಪಾರ ಅಭಿಮಾನದಿಂದ ಇಲ್ಲಿಯವರೆಗೆ ಸರಿಯಾಗಿ ಮುಖಕೊಟ್ಟು ಸಹ ಮಾತನಾಡುವುದಿಲ್ಲ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ.