ಇನ್ನೊಂದು ವರ್ಷ ಈ ರಾಶಿಯವರಿಗೆ ಗುರು ಬಲ : ಜಾತಕದಲ್ಲಿದೆ ಕೋಟ್ಯಾಧಿಪತಿ ಯೋಗ !ಹಂತ ಹಂತವಾಗಿ ಒಲಿದು ಬರುವಳು ಧನ ಲಕ್ಷ್ಮೀ

Wed, 24 Jul 2024-8:39 am,

ಯಾರ ಜಾತಕದಲ್ಲಿ ಗುರು ಬಲ ಇರುತ್ತದೆಯೋ ಅವರು ಏನೇ ಕೆಲಸ ಮಾಡಿದರೂ ಆ ಕೆಲಸ ಅವರ ಕೈ ಹಿಡಿಯುತ್ತದೆ.ಈ ಕಾರಣಕ್ಕಾಗಿಯೇ ಯಾವುದೇ ಕೆಲಸ ಆರಂಭಿಸಬೇಕಾದರೂ ಗುರು ಬಲ ಇದೆಯೇ ಎಂದು ನೋಡಿಕೊಳ್ಳುವ ವಾಡಿಕೆ ಇದೆ. 

ಗುರುವಿನ ಸಂಚಾರದಿಂದ ಉಂಟಾಗುವ ಗುರು ಬಲ ಮೂರು ರಾಶಿಯವರ ಮೇಲೆ ಅಧಿಕವಾಗಿ ಇರುತ್ತದೆ. ಇನ್ನೊಂದು ವರ್ಷ ಗುರು ಬಲದ ಕಾರಣದಿಂದಲೇ  ಸರ್ವ ರೀತಿಯಲ್ಲಿಯೂ ಏಳಿಗೆ ಕಾಣುವ ರಾಶಿಗಳು ಇವು.  

ಮೇಷ ರಾಶಿ : ನಿಮ್ಮ ಜೀವನದಲ್ಲಿ ಕೆಲವು ಅದ್ಭುತಗಳೇ ನಡೆಯುತ್ತದೆ. ಹಣಕಾಸಿನ ಸ್ಥಿತಿ ಬಲವಾಗಿರುತ್ತದೆ.ಆರ್ಥಿಕ ಲಾಭವಾಗುತ್ತದೆ. ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸುವಿರಿ.ನೀವು ಜೀವನದಲ್ಲಿ ಯಾವ ಎತ್ತರಕ್ಕೆ ಏರಬೇಕು ಎಂದುಕೊಂಡಿದ್ದಿರೋ ಆ ಯಶಸ್ಸು ನಿಮ್ಮದಾಗುವುದು. ಜಮೀನು ಮತ್ತು ವಾಹನ ಖರೀದಿಸಬಹುದು.

ಕನ್ಯಾ ರಾಶಿ :ಕಳೆದು ಹೋಗಿದ್ದ ನೆಮ್ಮದಿ ಮತ್ತೆ ನಿಮ್ಮ ಜೀವನಕ್ಕೆ ಕಾಲಿಡುವುದು.  ಆರ್ಥಿಕ ಸ್ಥಿತಿ ಹಳಿಗೆ ಬರುವುದು. ಸೋಲುಗಳೆಲ್ಲಾ ಗೆಲುವಿನ ರೂಪ ಪಡೆಯುವ ಕಾಲ ಇದು. ಆರ್ಥಿಕವಾಗಿ ಬಹಳ ಮುಂದೆ ಸಾಗುವಿರಿ. 

ಮಕರ ರಾಶಿ :ಕುಟುಂಬದಲ್ಲಿ ಸಂತಸ ಹೆಚ್ಚಾಗಲಿದೆ. ಸಮಾಜದಲ್ಲಿ ಮನ್ನಣೆ ಸಿಗಲಿದೆ.ಆರ್ಥಿಕ ಸ್ಥಿತಿ ಸುಧಾರಿಸಲಿದೆ.ಆರೋಗ್ಯ ಉತ್ತಮವಾಗಿರುತ್ತದೆ.  ಮನೆಯಲ್ಲಿ ಶುಭ ಕಾರ್ಯಕ್ರಮಗಳು ನಡೆಯಲಿವೆ. ಪ್ರೇಮ ಜೀವನ ಮಧುರವಾಗಿರುತ್ತದೆ.    

ಸೂಚನೆ : ಈ ಲೇಖನದಲ್ಲಿರುವ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ಆಧ್ಯಾತ್ಮಿಕ ಪುಸ್ತಕಗಳಿಂದ ಸಂಗ್ರಹಿಸಿ ನಿಮಗೆ ಒದಗಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶ. ZEE NEWS ಇದಕ್ಕೆ ಹೊಣೆಯಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link