ಮೊಸರಿಗೆ ಒಂದು ಚಮಚ ಈ ಬೀಜದ ಪುಡಿಯನ್ನು ಬೆರೆಸಿ ಸೇವಿಸಿದರೆ ಜೋತು ಬಿದ್ದಿರುವ ಹೊಟ್ಟೆ ಚಪ್ಪಟೆಯಾಗುವುದು ಗ್ಯಾರಂಟಿ !
ಬಹಳಷ್ಟು ಜನರ ಮೈ ಕೈ ಎಲ್ಲಾ ಸಣ್ಣಗಿರುತ್ತದೆ.ಆದರೆ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಮಾತ್ರ ಅಪಾರ ಪ್ರಮಾಣದ ಬೊಜ್ಜು ಸಂಗ್ರಹವಾಗಿರುತ್ತದೆ.
ನಿತ್ಯ ಒಂದು ಕಪ್ ಮೊಸರು ಸೇವಿಸುವ ಮೂಲಕ ಸೊಂಟ ಮತ್ತು ಹೊಟ್ಟೆಯ ಭಾಗದಲ್ಲಿ ಸೇರಿಕೊಂಡಿರುವ ಬೊಜ್ಜು ಕರಗಿಸಬಹುದು.
ಮೊಸರು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದ್ದು, ತೂಕ ನಷ್ಟಕ್ಕೆ ಸಹಕಾರಿಯಾಗಿದೆ.
ಮೊಸರು ಕಡಿಮೆ ಕಾರ್ಬ್ ಮತ್ತು ಹೆಚ್ಚಿನ ಪ್ರೋಟೀನ್ ಮಟ್ಟವನ್ನು ಹೊಂದಿರುವುದರಿಂದ ತೂಕ ನಷ್ಟಕ್ಕೆ ಪರಿಪೂರ್ಣವಾಗಿಸುತ್ತದೆ.
ಅಗಸೆ ಬೀಜಗಳು ಕೂಡಾ ಜೀರ್ಣಕ್ರಿಯೆಯನ್ನು ಕಡಿಮೆ ಮಾಡುತ್ತದೆ.ಇದು ಹಸಿವನ್ನು ನಿಯಂತ್ರಿಸುವ ಅನೇಕ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ.
ಮೊಸರಿನ ಜೊತೆಗೆ ಒಂದು ಚಮಚ ಅಗಸೆ ಬೀಜವನ್ನು ಬೆರೆಸಿ ತಿನ್ನುವುದರಿಂದ ಹೊಟ್ಟೆಯ ಭಾಗದ ಬೊಜ್ಜನ್ನು ಸುಲಭವಾಗಿ ಕರಗಿಸಲು ಸಹಾಯ ಮಾಡುತ್ತದೆ.
ಮೊಸರಿಗೆ ಅಗಸೆ ಬೀಜವನ್ನು ಬೆರೆಸಿ ಬೆಳಗ್ಗಿನ ಹೊತ್ತಿನಲ್ಲಿ ಯಾವಾಗ ಬೇಕಾದರೂ ಸೇವಿಸಬಹುದು. ಮೊಸರನ್ನು ರಾತ್ರಿ ವೇಳೆ ಸೇವಿಸಬಾರದು.ಹಾಗಾಗಿ ಬೆಳಗ್ಗಿನ ಉಪಹಾರ ಅಥವಾ ಮಧ್ಯಾಹ್ನದ ಹೊತ್ತಿನಲ್ಲಿ ಸೇವಿಸಬಹುದು.
ಸೂಚನೆ: ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.