Curd Benefits: ನಿತ್ಯ 1 ಬಟ್ಟಲು ಮೊಸರು ತಿನ್ನುವುದರಿಂದ ಈ ರೋಗಗಳಿಂದ ಮುಕ್ತಿ
ಮೊಸರು ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ. ಮೊಸರಿನಲ್ಲಿ ರಿಬೋಫ್ಲಾವಿನ್, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ 12 ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಹಾಗಾಗಿಯೇ ಮೊಸರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಬಣ್ಣಿಸಲಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಒಂದೇ ಒಂದು ಬಟ್ಟಲು ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳು ಲಭ್ಯವಿವೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ಪ್ರಮುಖ ಪ್ರಯೋಜನಗಳು ಯಾವುವು ಎಂದು ತಿಳಿಯೋಣ...
ಪ್ರತಿದಿನ ಮೊಸರು ತಿನ್ನುವುದರಿಂದ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಾಗಾಗಿ, ಇದು ಹೊಟ್ಟೆಯ ಸಮಸ್ಯೆಗಳಿಂದ ದೂರವಿರಲು ತುಂಬಾ ಪ್ರಯೋಜನಕಾರಿ ಎನ್ನಲಾಗುತ್ತದೆ.
ಮೊದಲೇ ತಿಳಿಸಿದಂತೆ, ಮೊಸರು ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ. ಇದು ದೇಹದಲ್ಲಿ ರಕ್ತವು ಸರಿಯಾಗಿ ಕಾರ್ಯನಿರ್ವಹಿಸಲು ಪ್ರಯೋಜನಕಾರಿ ಆಗಿದೆ. ಅಷ್ಟೇ ಅಲ್ಲದೆ, ನಿತ್ಯ ಒಂದು ಕಪ್ ಮೊಸರು ತಿನ್ನುವುದರಿಂದ ದೇಹದ ದುರ್ಬಲತೆ ಕಡಿಮೆಯಾಗುತ್ತದೆ.
ಮೊಸರಿನಲ್ಲಿ ಕಂಡು ಬರುವ ಕ್ಯಾಲ್ಸಿಯಂ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸಲು ತುಂಬಾ ಸಹಕಾರಿ ಆಗಿದೆ.
ಮೊಸರು ಕಡಿಮೆ ಕ್ಯಾಲೋರಿ ಆಹಾರವಾಗಿದ್ದು ನೀವು ತೂಕ ಕಳೆದುಕೊಳ್ಳಲು ಬಯಸಿದರೆ ನಿತ್ಯ ತಪ್ಪದೇ ಒಂದು ಕಪ್ ಮೊಸರು ಸೇವಿಸಿ.
ಸಾಮಾನ್ಯವಾಗಿ ನಮ್ಮಲ್ಲಿ ಕೆಲವರಿಗೆ ಊತದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಕಪ್ ಮೊಸರು ತಿನ್ನುವುದರಿಂದ ಈ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ.
ಮೊಸರಿನಲ್ಲಿ ಕಂಡು ಬರುವ ಪ್ರೋಬಯಾಟಿಕ್‌ಗಳು ಹಲವು ಹಳೆಯ ರೋಗಗಳಿಗೆ ಸೂಕ್ತ ಪರಿಹಾರ ನೀಡಬಲ್ಲದು ಎಂದು ಹೇಳಲಾಗುತ್ತದೆ.
ಪ್ರತಿದಿನ ಮೊಸರು ತಿನ್ನುವುದರಿಂದ ಇದು ಕೊಲೆಸ್ಟ್ರಾಲ್ ರಚನೆಯನ್ನು ತಡೆಯಲು ಹಾಗೂ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ಮೊಸರನ್ನು ದಿವ್ಯೌಷಧ ಎಂದು ಪರಿಗಣಿಸಲಾಗಿದೆ. ಪ್ರತಿದಿನ ಒಂದು ಬಟ್ಟಲು ಮೊಸರು ಸೇವಿಸುವುದರಿಂದ ಬಿಪಿಯನ್ನು ಸುಲಭವಾಗಿ ನಿಯಂತ್ರಿಸಬಹುದು ಎನ್ನಲಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.