ಒಂದು ಕಪ್ ಮೊಸರು ಸಾಕು ಬ್ಲಡ್ ಶುಗರ್ ಕಂಟ್ರೋಲ್ ಮಾಡಲು !ನಿತ್ಯ ಮುಂಜಾನೆ ಇದರ ಜೊತೆ ಸೇವಿಸಿ
ಮಧುಮೇಹ ಗುಣವಾಗದ ಕಾಯಿಲೆ. ಇದನ್ನು ನಿಯಂತ್ರಣದಲ್ಲಿ ಇಡಬಹುದೇ ವಿನಃ ಸಂಪೂರ್ಣವಾಗಿ ಗುಣಪಡಿಸುವುದು ಸಾಧ್ಯವಿಲ್ಲ.
ಮಧುಮೇಹಕ್ಕೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳು ದೇಹದಲ್ಲಿ ಹೆಚ್ಚಿದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಹಾಗಾಗಿ ಮಧುಮೇಹ ರೋಗಿಗಳು ದೀರ್ಘಕಾಲದವರೆಗೆ ಔಷಧಿ ಸೇವಿಸಬೇಕಾಗುತ್ತದೆ.
ಆಹಾರ ಕ್ರಮದಲ್ಲಿ ಕೆಲವು ವಿಶೇಷ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ನಿತ್ಯ ಮುಂಜಾನೆ ಒಂದು ಕಪ್ ಮೊಸರು ಸೇವಿಸುವ ಮೂಲಕ ಬ್ಲಡ್ ಶುಗರ್ ಕಂಟ್ರೋಲ್ ಮಾಡಬಹುದು. ಮೊಸರು ಅಂದರೆ ಕಡಿಮೆ ಕೊಬ್ಬಿನ ಮೊಸರು (low fat curd) ಸೇವಿಸಬೇಕು.
ಇನ್ನು ಮೊಸರಿನ ಜೊತೆಗೆ ಕೆಲವು ಪದಾರ್ಥಗಳನ್ನು ಸೇವಿಸುವ ಮೂಲಕ ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಮೊಸರಿನೊಂದಿಗೆ ಬೇಯಿಸಿದ ಕಡಲೆಕಾಳನ್ನು ಸೇವಿಸಿದರೆ ಶುಗರ್ ನಾರ್ಮಲ್ ಆಗುವುದು. ಒಂದು ಬಟ್ಟಲು ಬೇಯಿಸಿದ ಕಡಲೆಕಾಳನ್ನು ಕಡಿಮೆ ಕೊಬ್ಬಿನ ಮೊಸರಿಗೆ ಸೇವಿಸಿ ತಿನ್ನಬೇಕು. ರುಚಿಗೆ ತಕ್ಕಂತೆ ಉಪ್ಪು ಮತ್ತು ಕರಿಮೆಣಸನ್ನು ಸೇರಿಸಬಹುದು.
ಕಡಿಮೆ ಕೊಬ್ಬಿನ ಮೊಸರಿಗೆ ಒಂದರಿಂದ ಎರಡು ಟೀಚಮಚ ಇಸಾಬ್ಗೋಲ್ ಬೆರೆಸಿ ಬೆಳಿಗ್ಗೆ ಸೇವಿಸಬೇಕು.ಇದು ಬ್ಲಡ್ ಶುಗರ್ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಹಸಿ ತರಕಾರಿಗಳಾದ ಸೌತೆಕಾಯಿ, ಟೊಮೆಟೊ, ಸೌತೆಕಾಯಿ ಮತ್ತು ಈರುಳ್ಳಿ ಇತ್ಯಾದಿಗಳನ್ನು ಮೊಸರಿನೊಂದಿಗೆ ತೆಗೆದುಕೊಳ್ಳಬಹುದು.
ಇನ್ನು ಬೆಳಿಗ್ಗೆ ಮೊಸರಿನೊಂದಿಗೆ ದಾಳಿಂಬೆಯನ್ನು ಸೇವಿಸಿದರೂ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.